ತೆಲುಗಿನಲ್ಲಿ ರೌಡಿ ಬೇಬಿ ಅಮೂಲ್ಯ ಸದ್ದು…ಸೀರಿಯಲ್​ ಮೇಕಿಂಗ್​ನಲ್ಲಿ ಮಿಂಚುತ್ತಿರುವ ನಟಿ

ತೆಲುಗಿನಲ್ಲಿ ರೌಡಿ ಬೇಬಿ ಅಮೂಲ್ಯ ಸದ್ದು…ಸೀರಿಯಲ್​ ಮೇಕಿಂಗ್​ನಲ್ಲಿ ಮಿಂಚುತ್ತಿರುವ ನಟಿ

ಗಟ್ಟಿಮೇಳ ಅಂದಾಕ್ಷಣ ಮೊದಲು ತಲೆಗೆ ಬರುವಂತವರು ವೇದಾಂತ್​ ವಶಿಷ್ಟ ಹಾಗೂ ಅಮೂಲ್ಯಾ. ಈ ಜೋಡಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇವರ ಕೋಳಿ ಜಗಳ, ಪ್ರೀತಿ, ಕೇರಿಂಗ್​ ಎಲ್ಲವು ಜನಕ್ಕೆ ಅಚ್ಚುಮೆಚ್ಚು. ಅದರಲ್ಲೂ ಅಮುಲ್ಯಾ ಅವರ ಪಾತ್ರವನ್ನು ಜನ ತುಂಬಾ ಮೆಂಚಿಕೊಂಡಿದ್ದಾರೆ.

blank

ಬಜಾರಿ ಅಮೂಲ್ಯ ಅಂದ್ರೆ ನಿಶಾ ರವಿಕೃಷ್ಣ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಹುಡುಗಿ. ಅವಳ ಒರಟು ಮಾತು, ಮೃದು ಮನಸ್ಸು ಫ್ಯಾಮಿಲಿ ಮೇಲಿರುವ ಪ್ರೀತಿ. ಅದರಲ್ಲೂ ಯಾರಿಗೂ ಯಾವುದಕ್ಕೂ ಕೇರ್​ ಮಾಡದ ಆ್ಯಟಿಟ್ಯೂಡ್​ ಎಷ್ಟೋ ಹೆಣ್ಣು ಮಕ್ಕಳಿಗೆ ಇಷ್ಟವಾಗಿದೆ. ಗಂಡು ಮಕ್ಕಳು ಮಾತ್ರವಲ್ಲ ನಮ್ಮ ಹೆಣ್ಮಕ್ಳು ಕೂಡಾ ಇಷ್ಟ ಪಟ್ಟಿದ್ದಾರೆ.

blank

ಸದ್ಯ ನಿಶಾ ಗಟ್ಟಿಮೇಳದ ಹೊರತುಪಡಿಸಿ ಇನ್ನೊಂದು ಪ್ರಾಜೆಕ್ಟ್​ಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಇಷ್ಟು ದಿನ ಕನ್ನಡ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ನಿಶಾ ಇದೀಗ ತೆಲುಗಿನಲ್ಲಿ ಸದ್ದು ಮಾಡಲು ಹೊರಟಿದ್ದಾರೆ.ತೆಲುಗಿನಲ್ಲಿ ಮುತ್ಯಮಂತಮುದ್ದು ಎಂಬ ಹೊಸ ಪ್ರಾಜೆಕ್ಟ್​ನಲ್ಲಿ ಲೀಡ್​ ರೋಲ್​ ಮೂಲಕ ಪ್ರೇಕ್ಷಕರನ್ನ ರಂಜಿಸಲಿದ್ದಾರೆ. ಸದ್ಯ ಈ ಧಾರಾವಾಹಿಯ ಪ್ರೊಮೋ ರಿಲೀಸ್​ ಆಗಿದ್ದು, ಇದೊಂದು ಮಿಡಲ್​ ಕ್ಲಾಸ್​ ಫ್ಯಾಮಿಲಿ ಹಾಗೂ ರಿಚ್​ ಕುಟುಂಬದ ಮಧ್ಯ ನಡೆಯುವ ಕಥೆಯಾಗಿದೆ ಎಂಬುವುದು ತಿಳಿಯತ್ತೆ.

ಇದನ್ನೂ ಓದಿ: ಲಕ್ಷ್ಮೀ ಬಾರಮ್ಮ ಎಂದ ಚಲುವೆ ವೈಷ್ಣವಿ.. ವರಮಹಾಲಕ್ಷ್ಮೀ ಹಬ್ಬಕ್ಕೆ ಲುಕ್​ ಹೇಗಿತ್ತು ಗೊತ್ತಾ..?

blank

ಇದೀಗ ಈ ಧಾರಾವಾಹಿಯ ಮೇಕಿಂಗ್​ ವಿಡಿಯೋ ರಿಲೀಸ್​ ಆಗಿದೆ. ವಿಶೇಷ ಅಂದ್ರೆ ಈ ಮೇಕಿಂಗ್​ನಲ್ಲಿ ನಟಿ ಕೀರ್ತಿ ಶೆಟ್ಟಿ ​ ಹಾಗೂ ನಿಶಾ ಅವರ ಕಾಂಬಿನೇಷನ್​ನ್ನು ತೋರಿಸಲಾಗಿದೆ..ಮಾತ್ರವಲ್ಲದೆ ಮೇಕಿಂಗ್​ ಭರ್ಜರಿಯಾಗಿ ಮೂಡಿ ಬಂದಿದೆ.

ಇನ್ನೂ ನಿಶಾ ತೆಲುಗಿಗೆ ಎಂಟ್ರಿಯಾಗ್ತಾಯಿರೊದು ಕನ್ನಡ ಜನಕ್ಕೆ ಎಷ್ಟು ಖುಷಿ ನೀಡಿದಿಯೋ ಅಷ್ಟೆ ಖುಷಿ ತೆಲುಗು ಮಂದಿಯಲ್ಲಿದೆ. ಈಗಾಗಲೆ ಕನ್ನಡದ ಸಾಕಷ್ಟು ನಟ ನಟಿಯಾರು ತೆಲುಗು ಪ್ರಾಜೆಕ್ಟ್​ಗಳನ್ನು ಮಾಡ್ತಾಯಿದ್ದು. ಅಲ್ಲಿ ಕೂಡಾ ಸಖತ್​ ಹೆಸರು ಮಾಡಿದ್ದಾರೆ. ಇದೀಗ ಆ ಲಿಸ್ಟ್​ಗೆ ನಿಶಾ ಕೂಡಾ ಆ್ಯಡ್​ ಆಗಿದ್ದಾರೆ.. ಒಟ್ನಲ್ಲಿ ನ್ಯೂ ಪ್ರಾಜೆಕ್ಟ್​ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗ್ತಾಯಿರುವ ನಿಶಾ ಅವರಿಗೆ ನಮ್ಮ ಕಡೆಯಿಂದ ಆಲ್​ ದಿ ಬೆಸ್ಟ್​.

Source: newsfirstlive.com Source link