ನಿನ್ನ ಬಳಿ ದುಡ್ಡಿಲ್ಲ ಎಂದು ಮಜಾ ಭಾರತದ ಕಲಾವಿದನಿಗೆ ಕೈ ಕೊಟ್ಟ ಪತ್ನಿ

ಮಂಡ್ಯ: ನಿನ್ನ ಬಳಿ ದುಡ್ಡಿಲ್ಲ ಎಂದು ಹಾಸ್ಯ ಕಲಾವಿದನಿಗೆ ಪತ್ನಿ ಕೈ ಕೊಟ್ಟು ಬೇರೊಬ್ಬನೊಂದಿಗೆ ಮದುವೆಯಾಗಿರುವ ಪ್ರಸಂಗವೊಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳಸಿದ್ದನಹುಂಡಿಯಲ್ಲಿ ನಡೆದಿದೆ.

ಕೊರೊನಾ ಕಾರಣದಿಂದ ಹಲವಾರು ಜನ ದುಡ್ಡಿಲ್ಲದೆ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ನಟನೆಯೇ ಜೀವನವೆಂದು ಬದುಕುತ್ತಿರುವ ಕಲಾವಿದರು ತಮ್ಮ ದಿನನಿತ್ಯದ ಜೀವನ ಸಾಗಿಸಲು ತುಂಬಾ ಕಷ್ಟ ಪಡುತ್ತಿದ್ದಾರೆ. ಮಜಾಭಾರತ ಕಾಮಿಡಿ ಶೋ ಹಾಸ್ಯ ಕಲಾವಿದ ಕಾಳಸಿದ್ದನಹುಂಡಿಯ ರವಿ ಅವರು, ಸಣ್ಣ-ಪುಟ್ಟ ಸೀರಿಯಲ್‍ಗಳಲ್ಲಿ ನಟಿಸುತ್ತಿದ್ದರು. ಅವರು 4 ವರ್ಷದ ಹಿಂದೆ ಮೈಸೂರು ಮೂಲದ ಬೇಬಿ ಎಂಬಾಕೆಯನ್ನು ಪ್ರೀತಿಸಿ, ಮನೆಯವರ ವಿರೋಧವಿದ್ದರೂ ಮದುವೆಯಾಗಿದ್ದರು. ಆ ಬಳಿಕ ಕೊರೊನಾ ಕಷ್ಟಕಾಲದಲ್ಲಿ ರವಿ ಅವರಿಗೆ ಎಲ್ಲಿಯೂ ಸಹ ಅವಕಾಶಗಳು ಸಿಗದೆ ಕಷ್ಟದ ಜೀವನ ನಡೆಸುತ್ತಿದ್ದರು. ಇದನ್ನೂ ಓದಿ: ಕಿಚ್ಚನ ಹೊಸ ಹೇರ್ ಸ್ಟೈಲ್‍ಗೆ ಫ್ಯಾನ್ಸ್ ಫಿದಾ

ಈ ಹಿನ್ನೆಲೆ ಪತ್ನಿ ಬೇಬಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಇದು ರವಿ ಅವರಿಗೆ ತಿಳಿದು ಪ್ರಶ್ನಿಸಿದ್ದಾರೆ. ಬಳಿಕ ನಿನ್ನ ಬಳಿ ದುಡ್ಡಿಲ್ಲ ಎಂದು ಬೇಬಿ ಕಾರಣ ಕೊಟ್ಟು ರವಿ ಅವರನ್ನು ಬಿಟ್ಟು ಹೋಗಿದ್ದಾರೆ. ಅಲ್ಲದೇ ದೂರವಾದ ಬಳಿಕ ಮತ್ತೊಂದು ಮದುವೆಯನ್ನು ಮಾಡಿಕೊಂಡಿದ್ದಾರೆ. ಇದನ್ನು ತಡೆಯಲು ಹೋಗಿದ್ದ ರವಿ ಮೇಲೆ ಬೇಬಿ ಅವರ ಎರಡನೇ ಗಂಡ ಹಾಗೂ ಆಕೆ ತಮ್ಮನಿಂದ ಹಲ್ಲೆ ನಡೆದಿದ್ದು, ಈ ಕುರಿತು ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ವಿಭಿನ್ನವಾಗಿ ರಕ್ಷಾ ಬಂಧನ ಆಚರಿಸಿದ ಸೆಲೆಬ್ರಿಟಿಗಳು

blank

ರವಿ ಮತ್ತು ಬೇಬಿ 4 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ರಿಜಿಸ್ಟರ್ ಮ್ಯಾರೇಜ್ ಆಗಿದ್ರು. ಇವರು ಮೈಸೂರಿನಲ್ಲಿ 4 ವರ್ಷ ಬಾಡಿಗೆ ಮನೆಯಲ್ಲಿ ಸಂಸಾರ ಮಾಡಿದ್ದರು. ಅದು ಅಲ್ಲದೇ ಖಾಸಗಿ ವಾಹಿನಿಯ ಆದರ್ಶ ದಂಪತಿ ಶೋನಲ್ಲೂ ಸಹ ಭಾಗವಹಿಸಿದ್ದರು. ಈ ಶೋನಲ್ಲಿ ನಿರೂಪಕರು ಅವರ ಮದುವೆಗೆ ಗೈರಾಗಿದ್ದ ತಾಯಿ ಮುಂದೆ ಮತ್ತೊಮ್ಮೆ ಇಬ್ಬರಿಗೂ ತಾಳಿಕಟ್ಟಿಸಿದ್ದರು. ಈ ನಡುವೆ ಕೊರೊನಾ ಮೊದಲನೇ ಅಲೆಯಲ್ಲಿ ಅವರಿಗೆ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಅದಕ್ಕೆ ಅವರ ಪತ್ನಿ ಬೇಬಿ ಅವರನ್ನು ತೊರೆದು ಹೋಗಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಬಿಡುಗಡೆಗೆ ದಿನಾಂಕ ನಿಗದಿ – ಏಪ್ರಿಲ್‍ನಲ್ಲಿ ರಾಖಿಬಾಯ್ ಆರ್ಭಟ

ತನಗಾದ ಮೋಸದಂತೆ ಮತ್ಯಾರಿಗೂ ಆಗಬಾರದು, ಆಕೆಗೆ ಶಿಕ್ಷೆ ಆಗಬೇಕು ಎಂದು ಕಲಾವಿದ ರವಿ ಪಟ್ಟು ಹಿಡಿದಿದ್ದು, ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ.

Source: publictv.in Source link