ಇಂಗ್ಲೆಂಡ್​​ ತಂಡಕ್ಕೆ ಮತ್ತೊಂದು ಆಘಾತ; 5ನೇ ಟೆಸ್ಟ್​​ಗೆ ಜೋಸ್​​ ಬಟ್ಲರ್​ ಡೌಟ್

ಇಂಗ್ಲೆಂಡ್​​ ತಂಡಕ್ಕೆ ಮತ್ತೊಂದು ಆಘಾತ; 5ನೇ ಟೆಸ್ಟ್​​ಗೆ ಜೋಸ್​​ ಬಟ್ಲರ್​ ಡೌಟ್

ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್​ ಸರಣಿ ಆರಂಭದಿಂದ ಒಂದಿಲ್ಲೊಂದು ಕಾರಣಕ್ಕೆ ಹಿನ್ನಡೆ ಅನುಭವಿಸುತ್ತಿರುವ ಅತಿಥೇಯ ಇಂಗ್ಲೆಂಡ್​​ಗೆ ಈಗ ಮತ್ತೊಂದು ಹಿನ್ನಡೆ ಎದುರಾಗಿದೆ. ಮೂಲಗಳ ಮಾಹಿತಿ ಪ್ರಕಾರ ಟೀಮ್ ಇಂಡಿಯಾ ವಿರುದ್ಧದ ಅಂತಿಮ ಟೆಸ್ಟ್​ಗೆ ಜೋಸ್ ಬಟ್ಲರ್ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಹೊಸ ಭರವಸೆ ಹುಟ್ಟು ಹಾಕಿದ ಟೇಲೆಂಡರ್ಸ್..ಅದ್ಭುತ ಬ್ಯಾಟಿಂಗ್​ ಹಿಂದಿದೆ ತಿಂಗಳ ಕಠಿಣಾಭ್ಯಾಸ

ಓಲ್ಡ್ ಟ್ರಾಫರ್ಡ್​ನಲ್ಲಿ ಟೀಮ್ ಇಂಡಿಯಾ ವಿರುದ್ಧ ನಡೆಯುವ ಅಂತಿಮ ಟೆಸ್ಟ್​ನಲ್ಲಿ ಬಟ್ಲರ್​ ಆಡುವುದು ಅನುಮಾನವಾಗಿದೆ. ಅಂತಿಮ ಟೆಸ್ಟ್​ನ ಮೊದಲ ದಿನವೇ ಎರಡನೇ ಮಗುವಿನ ನಿರೀಕ್ಷೆಯಿರುವ ಕಾರಣದಿಂದಾಗಿ, ಬಟ್ಲರ್ ತಮ್ಮ ಪತ್ನಿ ಲೂಯಿಸ್ ಮತ್ತು ಎರಡು ವರ್ಷದ ಮಗಳು ಜಾರ್ಜಿಯಾ ಜೊತೆ ಇರಲು ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಅಲ್ಲದೆ, ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲೂ ಜೋಸ್ ಬಟ್ಲರ್ ಗೈರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸೇಡು ತೀರಿಸಿಕೊಳ್ಳುವ ತವಕದಲ್ಲಿ ವಿರಾಟ್ ಪಡೆ -ಹೆಡಿಂಗ್ಲೆಯಲ್ಲಿ ಭರ್ಜರಿ ಅಭ್ಯಾಸ

ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್ ನಿರ್ಬಂಧಗಳಿಂದಾಗಿ ತನ್ನ ಕುಟುಂಬವನ್ನು ಕರೆದುಕೊಂಡು ಹೋಗಲು ಕಷ್ಟಕರವಾಗಲಿದೆ. ಹೀಗಾಗಿ ಆ್ಯಶಸ್​ನಿಂದ ಹೊರಗುಳಿಯಬಹುದೆಂದು ತಿಳಿದುಬಂದಿದೆ. ಸೆಪ್ಟೆಂಬರ್ 19 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್​​ನಲ್ಲಿ ನಡೆಯಲಿರುವ 2ನೇ ಹಂತದ ಐಪಿಎಲ್​​ನಲ್ಲೂ ಬಟ್ಲರ್ ಭಾಗವಹಿಸುತ್ತಿಲ್ಲ.

ಇದನ್ನೂ ಓದಿ: IPL ಸೆಣಸಾಟಕ್ಕೆ ಆರ್​ಸಿಬಿ ತಯಾರಿ.. ಬೆಂಗಳೂರಲ್ಲಿ ಕ್ವಾರಂಟೀನ್​ಗೆ ಒಳಗಾದ ಆಟಗಾರರು

Source: newsfirstlive.com Source link