‘ನಾನೂ ಪ್ರೀತಿಯಲ್ಲಿ ಬಿದ್ದಿದ್ದೆ..’ ಎಂದು ಗಳಗಳನೆ ಕಣ್ಣೀರಿಟ್ಟ ನಟಿ ಪ್ರೇರಣಾ

‘ನಾನೂ ಪ್ರೀತಿಯಲ್ಲಿ ಬಿದ್ದಿದ್ದೆ..’ ಎಂದು ಗಳಗಳನೆ ಕಣ್ಣೀರಿಟ್ಟ ನಟಿ ಪ್ರೇರಣಾ

ಬಿಗ್​ ಬಾಸ್​ ಮನೆಯಲ್ಲಿ ಇಷ್ಟು ದಿನ ನಗು, ಸೀರಿಯಲ್​ ಪಾತ್ರ, ಕಲೆ ಮೂಲಕ ಮನೆ ಮಾತಾಗಿದ್ದ ಸೀರಿಯಲ್​ ತಾರೆಯರು ತಮ್ಮ ವೈಯಕ್ತಿಕ ಜೀವನದ ಕಹಿ ಘಟನೆಗಳನ್ನ ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ. ವಾಹಿನಿ ಪ್ರೊಮೋ ಒಂದನ್ನ ರಿಲೀಸ್​ ಮಾಡಿದ್ದು, ಪ್ರೇರಣಾ ತಮ್ಮ ಲವ್​ ಸ್ಟೋರಿ ಬಗ್ಗೆ ಹೇಳಿ ಕಣ್ಣೀರಿಟ್ಟಿದ್ದಾರೆ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಂಗನಾಯಕಿ ಸೀರಿಯಲ್​ನ ಲೀಡ್​ ಕ್ಯಾರೆಕ್ಟರ್​ ನಕ್ಷತ್ರಾ.. ಈ ಪಾತ್ರದ ಮೂಲಕ ಪರಿಚಯವಾದವರೇ ಪ್ರೇರಣಾ. ನೋವು ಹಂಚಿಕೊಳ್ಳಲು ಬಿಗ್​ ಬಾಸ್​ ನೀಡಿದ ಅವಕಾಶದಲ್ಲಿ ಪ್ರೇರಣಾ.. ಪ್ರೀತಿಯಲ್ಲಿ ಆದ ಮೋಸದ ಬಗ್ಗೆ ಮಾತನ್ನಾಡಿದ್ದಾರೆ.

ಇದನ್ನೂ ಓದಿ: ‘ಎದೆ ತುಂಬಿ ಹಾಡುವೆನು’ ವೇದಿಕೆಯಲ್ಲಿ ಕಣ್ಣೀರಧಾರೆ.. ಏನು ಕಾರಣ ಗೊತ್ತಾ..?

blank

ನಾನು ಎಂಜಿನೀಯರಿಂಗ್​ನಲ್ಲಿದ್ದಾಗ ಪ್ರೀತಿಯಲ್ಲಿ ಬಿದ್ದಿದ್ದೆ. ನಂತರ ನನಗೆ ನಟನೆಯ ಅವಕಾಶಗಳು ಬರಲು ಶುರುವಾಯಿತು. ಈ ವಿಷಯಕ್ಕೆ ಆ ಹುಡುಗ ನನಗೆ ಪ್ರೋತ್ಸಾಹ ನೀಡಲಿಲ್ಲ. ಇದರ ಬಗ್ಗೆ ಪ್ರತಿ ದಿನ ಜಗಳ ಆಗುತ್ತಿತ್ತು.. ಹೀಗೆ ಒಂದು ವರ್ಷ ಕಳೆದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಹೀಗಾಗಿ ಬ್ರೇಕ್​ ಅಪ್​ ಆಯ್ತು. ಆದರೆ ನಾನು ಮಾಡಿದ ದೊಡ್ಡ ತಪ್ಪು ಈ ಎಲ್ಲಾ ಒತ್ತಡಗಳನ್ನೂ ತಂದೆ-ತಾಯಿ ಮೇಲೆ ಹಾಕುತ್ತಿದ್ದೆ.

ಇದನ್ನೂ ಓದಿ: ಒಂದೇ ವಾರಕ್ಕೆ ಸೀರಿಯಲ್​ ಸ್ಟಾರ್ಸ್ ಸುಸ್ತು.. ಹುಡುಗಿಯರ ಮಧ್ಯೆ ತಂದಿಟ್ಟ ‘ಬೆಂಕಿ ಕಡ್ಡಿ’..!

ನನ್ನ ತಂದೆ ತುಂಬಾ ಮುಗ್ಧರು. ಇನ್ನೂ ನನ್ನ ತಾಯಿ.. ನನಗೆ ಚಿಕ್ಕ ನೋವಾದ್ರು ಅವರ ಕೈ ಕಾಲಲ್ಲಿ ನಡುಕ ಶುರುವಾಗುತ್ತೆ. ಅಷ್ಟು ಪ್ರೀತಿ ನನ್ನ ಮೇಲೆ. ಆದ್ರೆ ನಾನು ಅವರ ಮೇಲೆ ನನ್ನ ಎಲ್ಲಾ ಇರಿಟೇಶನ್ ಹಾಕ್ತೀನಿ ಎಂದು ಭಾವುಕರಾದರು.

ಇದನ್ನೂ ಓದಿ: ಲಕ್ಷ್ಮೀ ಬಾರಮ್ಮ ಎಂದ ಚಲುವೆ ವೈಷ್ಣವಿ.. ವರಮಹಾಲಕ್ಷ್ಮೀ ಹಬ್ಬಕ್ಕೆ ಲುಕ್​ ಹೇಗಿತ್ತು ಗೊತ್ತಾ..?

Source: newsfirstlive.com Source link