ಸುನೀಲ್​ ಪುರಾಣಿಕ್​ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ ನಿರ್ಮಾಪಕ ಮದನ್​ ಪಟೇಲ್​

ಸುನೀಲ್​ ಪುರಾಣಿಕ್​ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ ನಿರ್ಮಾಪಕ ಮದನ್​ ಪಟೇಲ್​

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಫಿಲ್ಮ್ ಫೆಸ್ಟಿವಲ್ ವೇಳೆ ಭ್ರಷ್ಟಾಚಾರ ಎಸಗಿದ್ದಾರೆ. ಈ ಸಂಬಂಧ ಕೆಲವು ದಾಖಲೆಗಳನ್ನ ಎಸಿಬಿಗೆ ಸಲ್ಲಿಸಿರುವುದಾಗಿ ನಟ ನಿರ್ಮಾಪಕ ಮದನ್ ಪಟೇಲ್ ಹೇಳಿದ್ದಾರೆ.

ಬಳಿಕ ನಗರದದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುನೀಲ್ ಪುರಾಣಿಕ್ ಅಧ್ಯಕ್ಷರಾಗಿದ್ದಾಗ ಸರ್ಕಾರದ ಹಣ ದುಂದು ವೆಚ್ಚ ಮಾಡಿದ್ದು, ಫಿಲ್ಮ್ ಪೆಸ್ಟಿವಲ್ ವೇಳೆ ಬರೋಬ್ಬರಿ ನಾಲ್ಕುವರೆ ಕೋಟಿಯಷ್ಟು ಹೆಚ್ಚು ಹಣ ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಿ ವಂಚಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಾನು ಆರ್​ಟಿಐ ಮೂಲಕ ಮಾಹಿತಿ ಪಡೆದಿದ್ದು, ಈ ಹಿಂದೆಯೇ ಎಸಿಬಿ ಗೆ ದೂರು ದಾಖಲಿಸಿದ್ದೆ. ಇವತ್ತು ಇನ್ನು ಕೆಲವು ದಾಖಲೆಗಳನ್ನು ಎಸಿಬಿಗೆ ಸಲ್ಲಿಸಿದ್ದೇನೆ. ನನಗೂ ಪುರಾಣಿಕ್​ ಅವರಿಗೂ ಯಾವುದೇ ದ್ವೇಷ ಇಲ್ಲ, ಜನರ ಹಣ ಸುಮ್ಮನೆ ಹಾಳಾಗಬಾರದೆಂಬ ಉದ್ದೇಶದಿಂದ ದೂರು ದಾಖಲಿಸಿದ್ದೇನೆ. ಮುಂದಿನ ದಿಗಳಲ್ಲಿ ಎಸಿಬಿ ಅಧಿಕಾರಿಗಳು ಸೂಕ್ತಕ್ರಮ ತೆಗೆದುಕೊಳ್ತಾರೆ ಎನ್ನುವ ನಂಬಿಕೆ ಇದೆ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ರೋಲ್ಸ್​​ ರಾಯ್ಸ್​ ಸೀಜ್ ಕೇಸ್​​; ಅಮಿತಾಭ್​ ಬಚ್ಚನ್​​ಗೆ ನೋಟಿಸ್​​​​​

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ 18-19 ಸಾಲಿನಲ್ಲಿ 4 ಕೋಟಿ ರೂ. ವೆಚ್ಚ ಮಾಡಿದರೆ, ಸುನೀಲ್ ಪುರಾಣಿಕ್ ಅವರು 19-20ರ ಸಾಲಿನಲ್ಲಿ 8 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಒಂದಕ್ಕೆ ಎರಡರಷ್ಟು ಸರ್ಕಾರದ ಹಣವನ್ನು ದುಂದು ವೆಚ್ಚ ಮಾಡಲಾಗಿದೆ. ಇದು ಯಾರ ಜೇಬಿಗೆ ಸಂದಿದೆ ಎಂದು ಸುನೀಲ್ ಪುರಾಣಿಕ್ ಉತ್ತರ ಕೊಡಬೇಕು ಅಂತಾ ಮದನ್ ಪಟೇಲ್​ ಆಗ್ರಹಿಸಿದ್ದಾರೆ.

Source: newsfirstlive.com Source link