RCBಗೆ ಬಲ ತಂದ ಆಲ್​ರೌಂಡರ್ಸ್.. IPL​​ ಕಿರೀಟಕ್ಕೆ ಮುತ್ತಿಕ್ಕಲು ಗೇಮ್​ ಪ್ಲಾನ್​..!

RCBಗೆ ಬಲ ತಂದ ಆಲ್​ರೌಂಡರ್ಸ್.. IPL​​ ಕಿರೀಟಕ್ಕೆ ಮುತ್ತಿಕ್ಕಲು ಗೇಮ್​ ಪ್ಲಾನ್​..!

ರಿಪ್ಲೇಸ್​​ಮೆಂಟ್​ ಹೆಸರಲ್ಲಿ ಆರ್​​​ಸಿಬಿ ತಂಡಕ್ಕೆ ಮೂವರು ಹೊಸಬರ ಎಂಟ್ರಿಯಾಗಿದೆ. ಆದ್ರೆ, ಈ ಮೂವರ ಖರೀದಿ ಹಿಂದಿನ ಮಾಸ್ಟರ್​​ ಪ್ಲಾನ್ ಬೇರೇನೆ ಇದೆ. ಚೊಚ್ಚಲ IPL ಚಾಂಪಿಯನ್​ ಆಗೋ ಕನಸಿನಲ್ಲಿರುವ RCB ಈ ತ್ರಿವಳಿಗಳನ್ನ ತಂಡಕ್ಕೆ ಸೇರಿಸಿಕೊಂಡ ಅಸಲಿ ಕಾರಣ ಏನು.?

ಎರಡನೇ ಹಂತದ ಐಪಿಎಲ್​​​ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಫ್ರಾಂಚೈಸಿಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ತಿವೆ. UAE ನಲ್ಲಿ ನಡೆಯಲಿರುವ ಐಪಿಎಲ್​ಗಾಗಿ ಕೆಲ ವಿದೇಶಿ ಆಟಗಾರರು ಅಲಭ್ಯರಾಗಿರುವ ಹಿನ್ನೆಲೆಯಲ್ಲಿ ಬದಲಿ ಆಟಗಾರರ ಹುಡುಕಾಟದಲ್ಲಿ ತಂಡಗಳು ನಿರತವಾಗಿವೆ.​​ ಸದ್ಯ ಕೆಲ ತಂಡಗಳು ಬದಲಿ ಆಟಗಾರರನ್ನು ಹುಡುಕಿದ್ದಲ್ಲದೇ ಒಪ್ಪಂದ ಕೂಡ ಮಾಡಿಕೊಂಡಿವೆ. ಅದರಂತೆ RCBಗೆ ಹೊಸದಾಗಿ ಮೂವರು ಎಂಟ್ರಿಕೊಟ್ಟಿದ್ದಾರೆ.

blank

ರಾಯಲ್​ ಚಾಲೆಂಜರ್ಸ್​ ಬಲ ಹೆಚ್ಚಿಸಿದ ವನಿಂದು ಹಸರಂಗ ಎಂಟ್ರಿ.!

ಆಸಿಸ್​​ನ ಡೇನಿಯಲ್​ ಸ್ಯಾಮ್ಸ್​, ಆ್ಯಡಂ ಜಂಪಾ, ನ್ಯೂಜಿಲೆಂಡ್​​ನ ಫಿನ್​ ಅಲೆನ್​ 2ನೇ ಹಂತದ IPL​​ನಿಂದ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣ ನೀಡಿ ಶ್ರೀಮಂತ ಲೀಗ್​ಗೆ ದೂರ ಇರುವ ಈ ಆಟಗಾರರ, ಜಾಗದಲ್ಲಿ ಬೇರೆ ಮೂವರಿಗೆ ಆರ್​​ಸಿಬಿ ಮಣೆ ಹಾಕಿದೆ. ಜಂಪಾ ಬದಲಿ ಆಟಗಾರನಾಗಿ ಶ್ರೀಲಂಕಾದ ವನಿಂದು ಹಸರಂಗ, ಸ್ಯಾಮ್ಸ್​ ಸ್ಥಾನಕ್ಕೆ ಲಂಕಾದ ದುಷ್ಮಂತ ಚಮೀರಾ ಆರ್​​ಸಿಬಿ​​ ಸೇರಿಕೊಂಡಿದ್ದಾರೆ. ಇನ್ನು ಫಿನ್​ ಅಲೆನ್​​ ಜಾಗಕ್ಕೆ ಸಿಂಗಪೂರದ ಟಿಮ್​ ಡೇವಿಡ್​​ರನ್ನ ಆರ್​ಸಿಬಿ ಖರೀದಿಸಿದೆ.

ಚೊಚ್ಚಲ ಚಾಂಪಿಯನ್​ ಆಗೋಕೆ ಆರ್​ಸಿಬಿ ಮಾಸ್ಟರ್​ ಪ್ಲಾನ್​..!
ಇದರೊಂದಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಚೊಚ್ಚಲ ಐಪಿಎಲ್​​ ಪಟ್ಟ ಅಲಂಕರಿಸೋಕೆ ವಿಶೇಷ ಮಾಸ್ಟರ್​ ಪ್ಲಾನ್​ ರೂಪಿಸಿದೆ. ಆಲ್​ರೌಂಡರ್​​ಗಳ ಮೇಲೆ ಆರ್​ಸಿಬಿ ಪೋಕಸ್​ ಮಾಡಿರೋದರ ಹಿಂದಿನ ಕಾರಣವೂ ಅದೇ. ಸದ್ಯ ಬದಲಿ ಆಟಗಾರರ ಸ್ಥಾನಕ್ಕೆ ಆಯ್ಕೆಯಾದ ಇಬ್ಬರು ಆಲ್​​ರೌಂಡರ್ಸ್ ಆಗಿದ್ದಾರೆ. ಬ್ಯಾಟಿಂಗ್​, ಬೌಲಿಂಗ್​ ಎರಡರಲ್ಲೂ ಆಡೋರಿಗೆ ಮಣೆ ಹಾಕೋದು ಆರ್​ಸಿಬಿ ಪ್ಲಾನ್​ ಆಗಿದೆ.

blank

ಆರ್​​ಸಿಬಿ ಗ್ಯಾಂಗ್​​ನಲ್ಲಿ ಆಲ್​ರೌಂಡರ್​ಗಳದ್ದೇ ದಂಡು.!

ಸದ್ಯ ವಿರಾಟ್​​ ಸೇನೆಯಲ್ಲಿ ಈಗಾಗಲೇ ಆಲ್​ರೌಂಡರ್​ಗಳೇ ತುಂಬಿದ್ದಾರೆ. ಬ್ಯಾಟಿಂಗ್​​​ ಆಲ್​​ರೌಂಡರ್​​​​ಗಳಾಗಿ​ ಗ್ಲೇನ್​ ಮ್ಯಾಕ್ಸ್​ವೆಲ್​, ಡೇನಿಯಲ್​ ಕ್ರಿಶ್ಚಿಯನ್​​ ಇದ್ದರೆ, ಬೌಲಿಂಗ್​ ಆಲ್​ರೌಂಡರ್​​ಗಳಾಗಿ ಕೈಲ್​ ಜೆಮಿಸನ್, ವಾಷಿಂಗ್ಟನ್​ ಸುಂದರ್, ಹರ್ಷಲ್​ ಪಟೇಲ್​, ಶಹಬಾಜ್​ ಅಹ್ಮದ್​ ತಂಡದಲ್ಲಿ ಇದ್ದಾರೆ. ಇದೀಗ ವನಿಂದು ಹಸರಂಗ ಮತ್ತು ಟಿಮ್​ ಡೇವಿಡ್​ ಕೂಡ ತಂಡ ಸೇರಿಕೊಂಡಿದ್ದು, ತಂಡದ ಬಲ ಹೆಚ್ಚಿಸಿದೆ. ಬ್ಯಾಟಿಂಗ್​​​-ಬೌಲಿಂಗ್​​​ನಲ್ಲಿ ಈ ಇಬ್ಬರೂ ಅದ್ಭುತ ಪ್ರದರ್ಶನವನ್ನೂ ನೀಡಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ ವನಿಂದು ಹಸರಂಗ ಒಟ್ಟು 21 ಪಂದ್ಯಗಳನ್ನಾಡಿದ್ದು, 192 ರನ್​ಗಳ ಜೊತೆಗೆ 33 ವಿಕೆಟ್​ ಕಬಳಿಸಿದ್ದಾರೆ. ಹಸರಂಗ ಬೆಸ್ಟ್​ ಸ್ಕೋರ್​ 44 ರನ್​ ಆಗಿದೆ. ಹಾಗೇ ಸಿಂಗಪೂರ ಕ್ರಿಕೆಟಿಗ ಟಿಮ್​ ಡೇವಿಡ್​​ 14 ಪಂದ್ಯಗಳನ್ನಾಡಿದ್ದು, 558 ರನ್​ ಕಲೆ ಹಾಕಿ 05 ವಿಕೆಟ್​ ಕಬಳಿಸಿದ್ದಾರೆ. ಇನ್ನು ಡೇವಿಡ್​​ರ ಬೆಸ್ಟ್​ ಸ್ಕೋರ್,​​ ಅಜೇಯ 92 ರನ್​ ಆಗಿದೆ.

ಆರ್​​ಸಿಬಿ ಪಾಲಿಗೆ ಮ್ಯಾಚ್​ ವಿನ್ನರ್ಸ್​ ಆಗ್ತಾರಾ ಹಸರಂಗ & ಡೇವಿಡ್​.?

blank

ಆರ್​​ಸಿಬಿ ತಂಡದಲ್ಲಿ ಆಲ್​ರೌಂಡರ್​ಗಳಿದ್ದರೂ ತಂಡದ ಗೆಲುವಿಗೆ ವರ್ಕೌಟ್​ ಆಗ್ತಿಲ್ಲ. ಆದ್ದರಿಂದ ಹಸರಂಗ ಮತ್ತು ಡೇವಿಡ್​ರ ಆಗಮನದಿಂದಲಾದರೂ ಗೆಲುವಿನ ಚಹರೆ ಬದಲಾಗುತ್ತಾ ಅನ್ನೋ ಪ್ರಶ್ನೆಯೋ ಎದ್ದಿದೆ. ಜೊತೆಗೆ ಈ ಇಬ್ಬರಿಗೆ ಅವಕಾಶ ಸಿಗುತ್ತಾ ಅನ್ನೋ ಅನುಮಾನವೂ ಮೂಡಿದೆ.

ಸದ್ಯ ಗ್ಲೇನ್​ ಮ್ಯಾಕ್ಸ್​ವೆಲ್​ ಮತ್ತು ಎಬಿಡಿ ವಿಲಿಯರ್ಸ್​ ಆಡುವ 11ರ ಬಳಗದ ಸ್ಥಾನವನ್ನ ಸೀಲ್​ ಮಾಡಿದ್ದಾರೆ. ಹೀಗಾಗಿ ಉಳಿದ 2 ವಿದೇಶಿ ಸ್ಥಾನಕ್ಕಾಗಿ ಹಸರಂಗ ಮತ್ತು ಟಿಮ್​ ಡೇವಿಡ್​ರನ್ನ ಕಣಕ್ಕಿಸುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಬೌಲಿಂಗ್​​​ನಲ್ಲಿ​​ ವಿಫಲವಾದ್ರು ಬ್ಯಾಟಿಂಗ್​​ನಲ್ಲಿ ಆಕರ್ಷಿಸುತ್ತಾರೆ ಅನ್ನೋದು ಆರ್​​ಸಿಬಿ ನಿಲುವಾಗಿದೆ. ಆದ್ರೆ, ಕೈಲ್​ ಜೆಮಿಸನ್​ ಕೂಡ ಸ್ಥಾನಕ್ಕೆ ತೀವ್ರ ಪೈಪೋಟಿ ಒಡ್ಡಲಿದ್ದಾರೆ ಅನ್ನೋದನ್ನ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಇರೋ ಪೈಪೋಟಿಯಲ್ಲಿ ನಿಜಕ್ಕೂ ಅವಕಾಶ ಸಿಗುತ್ತಾ ಅನ್ನೋದು ಪ್ರಶ್ನೆಯಾಗಿದೆ.

Source: newsfirstlive.com Source link