ಕಿದ್ವಾಯಿ ಆಸ್ಪತ್ರೆಯಲ್ಲಿ ‘ಇನ್ಫೋಸಿಸ್ ಓಪಿಡಿ’ಗೆ ಚಾಲನೆ: ‘ಹಣ ಇರೋದು ಎಣಿಸಲಿಕ್ಕಲ್ಲ’ -ಸುಧಾಮೂರ್ತಿ

ಕಿದ್ವಾಯಿ ಆಸ್ಪತ್ರೆಯಲ್ಲಿ ‘ಇನ್ಫೋಸಿಸ್ ಓಪಿಡಿ’ಗೆ ಚಾಲನೆ: ‘ಹಣ ಇರೋದು ಎಣಿಸಲಿಕ್ಕಲ್ಲ’ -ಸುಧಾಮೂರ್ತಿ

ಬೆಂಗಳೂರು: ಇಂದು ನಗರದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಾಗೂ ಕ್ಯಾನ್ಸರ್ ಸಂಶೋಧನಾ ಮತ್ತು ತರಬೇತಿ ಕೇಂದ್ರದಲ್ಲಿ ಇನ್ಫೋಸಿಸ್ ಓಪಿಡಿ ಬ್ಲಾಕ್ ಹಾಗೂ ಕ್ಯಾನ್ಸರ್ ಚಿಕಿತ್ಸೆಯ ಇತರೆ ಸೌಲಭ್ಯವುಳ್ಳ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ‌ ಲೋಕಾರ್ಪಣೆಗೊಳಿಸಿದರು.

Image

ಕಿದ್ವಾಯಿಯಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದಿಂದ ಹೊಸ ಓಪಿಡಿ ಬ್ಲಾಕ್ ತೆರೆಯಲಾಗಿದೆ. ಅಸ್ಥಿ ಮಜ್ಜೆ ಕಸಿ ಘಟಕ, ಪೆಟ್ ಸ್ಕ್ಯಾನ್ ಬಂಕರ್, ಡೇ-ಕೇರ್ ವಾರ್ಡ್ ನವೀಕರಣ ಹಾಗೂ ಸ್ಟೆಪ್ ಒನ್ ಐಸಿಯು ಲೋಕಾರ್ಪಣೆಗೊಳಿಸಲಾಯಿತು.

Image

ಮೊಟ್ಟ ಮೊದಲ ಕಾಗದರಹಿತ ಆಸ್ಪತ್ರೆ
ಕೇಂದ್ರ ಸರ್ಕಾರದ ರಾಜ್ಯ ಕ್ಯಾನ್ಸರ್ ಯೋಜನೆ ನೆರವಿನಿಂದ ನಿರ್ಮಿಸಲಾಗಿರುವ ಬ್ರಾಕಿ ಥೆರಪಿ ಮತ್ತು ಸೀಟಿ ಸಿಮ್ಯೂಲೇಟರ್ ಸೌಲಭ್ಯಗಳು ಇಂದಿನಿಂದ ಸಾರ್ವಜನಿಕರಿಗೆ ಮುಕ್ತವಾಗಿದೆ. ಡಾ.ಮಾಜೀದ್ ಪ್ರತಿಷ್ಠಾನದಿಂದ ಮಕ್ಕಳ ಅತ್ಯಾಧುನಿಕ ಹೊಸ ತೀವ್ರ ನಿಗಾ ಘಟಕವು ಬಳಕೆಗೆ ರೆಡಿಯಾಗಿವೆ. ರೋಗಿಗಳ ತಪಾಸಣಾ ವರದಿಗಳು ಇನ್ಮುಂದೆ ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಇ-ಹಾಸ್ಪಿಟಲ್ ತಂತ್ರಾಂಶವನ್ನು ಸಂಸ್ಥೆಯಲ್ಲಿ ಅಳವಡಿಸಲಾಗಿದೆ. ಇದು ರೋಗಿಗಳ ಓಡಾಟವನ್ನು ಸಾಕಷ್ಟು ಕಡಿಮೆ ಮಾಡಲಿದೆ. ಈ ಮೂಲಕ ಕಿದ್ವಾಯಿ ಸಂಸ್ಥೆ ಮೊಟ್ಟ ಮೊದಲ ಕಾಗದರಹಿತ ಆಸ್ಪತ್ರೆಯಾಗಿ ಹೊರ ಹೊಮ್ಮಿದೆ.

Image

ಇದನ್ನೂ ಓದಿ: ದಾವಣಗೆರೆ; ಫ್ರೀ ಸೈಟ್​​ ಕೊಡ್ತಿದ್ದಾರೆ ಅಂತ ಜಮಾಯಿಸಿದ ಸಾವಿರಾರು ಜನ

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ‌ ಮಾತನಾಡಿ, ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬಂತೆ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ನಡೆದುಕೊಂಡು ಬರ್ತಿದ್ದಾರೆ. ಕೆಲವರಿಗೆ ಐಶ್ವರ್ಯವಂತರು ಇರ್ತಾರೆ. ಇದರಲ್ಲಿ ಕೆಲವರಿಗೆ ಮಾತ್ರವೇ ಹೃದಯ ಇರುತ್ತೆ. ಅವರು ಮಾತ್ರವೇ ಇಂತಹ ದಾನ ಮಾಡೋಕೆ ಸಾಧ್ಯ. ದಾನಿಗಳು ಇಲ್ಲ ಅಂದ್ರೆ ಜಗತ್ತೇ ಇರ್ತಿರಲಿಲ್ಲ ಎಂದರು.

Image

ಹಣ ಇರೋದು ಎಣಿಸೋಕೆ ಅಲ್ಲ
ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ವರ್ಚುವಲ್​ ವೇದಿಕೆ ಮೂಲಕ ಮಾತನಾಡಿ, ನಾನು ಶ್ರೀಮಂತರಿಗೆ ನಾನು ಏನು ಮಾಡೋದಿಲ್ಲ, ಬಡವರ ಆರೋಗ್ಯ ಚೆನ್ನಾಗಿ ಇರ್ಬೇಕು. ಹಣ ಇರುವುದು ಎಣಿಸಲಿಕ್ಕಾಗಿ ಅಲ್ಲ, ಹಣ ಇರೋದು ಜನರಿಗಾಗಿ. ನಮ್ಮಿಂದ ಏನು ಸಾಧ್ಯವಿದೆ ಅದನ್ನು ಸರ್ಕಾರದ ಜೊತೆ ಸೇರಿ ಮಾಡುತ್ತಿದ್ದೇವೆ ಎಂದರು.

Image

ಸಚಿವ ಸುಧಾಕರ್ ಮಾತನಾಡಿ.. ಕ್ಯಾನ್ಸರ್ ಆಸ್ಪತ್ರೆ ಅಂದ್ರೆ ಕಿದ್ವಾಯಿ ಸ್ಮಾರಕ ಮೊದಲಿಗೆ ನೆನಪಿಗೆ ಬರುತ್ತದೆ.  ಸುಮಾರು 27 ಎಕರೆಯನ್ನ ಕಿದ್ವಾಯಿಯವರು ಉಚಿತವಾಗಿ ಮಂಜೂರು ಮಾಡಿದ್ದಾರೆ. ಅವರನ್ನ ಸ್ಮರಿಸಬೇಕು, ಇನ್ಫೋಸಿಸ್ ಸುಧಾಮೂರ್ತಿ ಅವರನ್ನ ಶ್ಲಾಘಿಸಲೇಬೇಕು ಎಂದರು.

Source: newsfirstlive.com Source link