ಧ್ರುವ ಸರ್ಜಾ ಮುಂದಿನ ಸಿನಿಮಾಗೆ ನಿರ್ದೇಶಕ ಜೋಗಿ ಪ್ರೇಮ್​ ಆ್ಯಕ್ಷನ್​​ ಕಟ್; ​ನಾಳೆಯೇ ಅನೌನ್ಸ್​?

ಧ್ರುವ ಸರ್ಜಾ ಮುಂದಿನ ಸಿನಿಮಾಗೆ ನಿರ್ದೇಶಕ ಜೋಗಿ ಪ್ರೇಮ್​ ಆ್ಯಕ್ಷನ್​​ ಕಟ್; ​ನಾಳೆಯೇ ಅನೌನ್ಸ್​?

ಏಕ್​ ಲವ್​ ಯಾ ಚಿತ್ರದ ನಂತರ ನಿರ್ದೇಶಕ ಜೋಗಿ ಪ್ರೇಮ್​ ನಡೆಯೇನು..? ಯಾವ ಸ್ಟಾರ್​ ಜೊತೆ ಪ್ರೇಮ್ ಸಿನಿಮಾ ಮಾಡ್ತಾರೆ ಎಂಬ ಚರ್ಚೆ ಗಾಂಧಿನಗರದಲ್ಲಿ ಈ ಶುರುವಾಗಿದೆ. ಪ್ರೇಮ್​ ಅವರ ಮನೆಯಲ್ಲಿ ತಮ್ಮ 9 ನೇ ಸಿನಿಮಾದ ಸ್ಕ್ರಿಪ್ಟ್ ಪೂಜೆಯನ್ನ ಮಾಡಿ ಈ ತಿಂಗಳು ತಮ್ಮ 9ನೇ ಚಿತ್ರವನ್ನು ಅನೌನ್ಸ್ ಮಾಡಿತ್ತೀನಿ ಅಂತಾ ಹೇಳಿದ್ರು.

blank

ಮೊನ್ನೆಯಷ್ಟೇ ಧ್ರುವ ಸರ್ಜಾ ಮತ್ತು ನಿರ್ದೇಶಕ ಎ.ಪಿ ಅರ್ಜುನ್ 9 ವರ್ಷದ ನಂತರ ಮತ್ತೆ ಒಂದಾಗಿ ‘ಮಾರ್ಟಿನ್’ ಎಂಬ ಸಿನಿಮಾವನ್ನು ಅನೌನ್ಸ್​ ಮಾಡಿದ್ರು. ಇದು ಧ್ರುವರ 5ನೇ ಸಿನಿಮಾವಾಗಿದು ಇದೀಗ ಧ್ರುವ ಸರ್ಜಾ ತಮ್ಮ 5 ನೇ ಸಿನಿಮಾ ಶೂಟಿಂಗ್​ ಶುರುವಾಗೋ ಮೊದಲ್ಲೆ 6ನೇ ಚಿತ್ರಕ್ಕೆ ಸಜ್ಜಾಗಿದ್ದಾರೆ.

blank

ಹೌದು, ನಾಳೆ ಧ್ರುವ ಸರ್ಜಾ ತಮ್ಮ 6ನೇ ಸಿನಿಮಾದ ಬಗ್ಗೆ ಅನೌನ್ಸ್​ ಮಾಡೋದಾಗಿ ತಮ್ಮ ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ. ಇನ್ನು ನಿರ್ದೇಶಕ ಜೋಗಿ ಪ್ರೇಮ್ ಕೂಡ ನಾಳೆನೇ ತಮ್ಮ 9ನೇ ಸಿನಿಮಾದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ ಎಂದು ಹೇಳಲಾಗಿದ್ದು . ಧ್ರುವ ಸರ್ಜಾ 6ನೇ ಸಿನಿಮಾಗೆ ಜೋಗಿ ಪ್ರೇಮ್ ಆ್ಯಕ್ಷನ್​ ಕಟ್​ ಹೇಳುವ ಸಾಧ್ಯತೆಗಳಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಿಚ್ಚ-ಶಿವಣ್ಣನ ಕಲಿ ಕಥೆಯನ್ನ ಧ್ರುವಗೆ ಮಾಡ್ತಾರಾ ದಿ ಶೋ ಮ್ಯಾನ್​ ಪ್ರೇಮ್..?

Source: newsfirstlive.com Source link