ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಪ್ಲ್ಯಾನ್​​ಗೆ ಕೇಂದ್ರ ಚಾಲನೆ

ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಪ್ಲ್ಯಾನ್​​ಗೆ ಕೇಂದ್ರ ಚಾಲನೆ

ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಪ್ಲ್ಯಾನ್​​ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​​​​ ಚಾಲನೆ ನೀಡಿದರು. ಈ ವೇಳೆ ಮಾತಾಡಿದ ಅವರು, ಸರ್ಕಾರದ ಈ ಯೋಜನೆಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಹಣಕಾಸು ಕೊರತೆ ನೀಗಿಸಲು ಸರ್ಕಾರದ ಆಸ್ತಿ ಮಾರಾಟ ಮಾಡಲಾಗುವುದು. ಈ ಆಸ್ತಿ ಕೊನೆಗೆ ಸರ್ಕಾರಕ್ಕೆ ವಾಪಸ್ಸು ನೀಡಬೇಕಾಗುತ್ತದೆ ಎಂದರು.

ಇನ್ನು, ನಿರ್ಮಲಾ ಸೀತಾರಾಮನ್​​ ಬಳಿಕ ಮಾತಾಡಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್​​ ಕುಮಾರ್​​, ಹಣಕಾಸು ಕೊರತೆ ನೀಗಿಸಲು ಕೇಂದ್ರ ಸರ್ಕಾರ ಪ್ಲಾನ್​ ಮಾಡಿದೆ. ಹಾಗಾಗಿ 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಾಟಕ್ಕೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: J&K ಮಾಜಿ ಸಿಎಂ ಮೆಹಬೂಬಾ ಮುಫ್ತಿ-ತಾಲಿಬಾನ್ ಸಂಪರ್ಕ ಆರೋಪ; ತನಿಖೆಗೆ ಬಿಜೆಪಿ ಆಗ್ರಹ

ಆಸ್ತಿಯ ಮಾಲೀಕತ್ವ ಸರ್ಕಾರದ ಬಳಿಯೇ ಇರುತ್ತದೆ. ಅವಧಿ ಮುಗಿದ ಬಳಿಕ ಸರ್ಕಾರಕ್ಕೆ ಆಸ್ತಿ ಹಿಂತಿರುಗಿಸಬೇಕು. ಬಿಡ್ಡಿಂಗ್ ಮೂಲಕ ಆಸ್ತಿಗಳ ಮಾರಾಟ ಮಾಡಲಾಗುವುದು. 2022- 2025ರ ಅವಧಿಯಲ್ಲಿ ಆಸ್ತಿಗಳ ಮಾರಾಟದ ಬಗ್ಗೆ ಯೋಚಿಸಲಾಗಿದೆ ಎಂದು ಹೇಳಿದರು.

Source: newsfirstlive.com Source link