ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ ಉಗ್ರರಿಗೆ ಈಗ ಉತ್ತರ ಸೇನೆ ಬಲವಾದ ಪ್ರತಿರೋಧ ನೀಡುತ್ತಿದೆ. ಈಗ ಉತ್ತರ ಸೇನೆಗೆ ತಜಕಿಸ್ತಾನ ಸಹ ಬೆಂಬಲ ನೀಡಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.

ದೇಶದ ಗದ್ದುಗೆ ಏರಿದರೂ `ಪಂಜ್‍ಶಿರ್’ ಕಣಿವೆ ಇನ್ನೂ ತಾಲಿಬಾನಿಗಳ ಕೈವಶ ಆಗಿಲ್ಲ. ಹೀಗಾಗಿ ಪಂಜ್‍ಶೀರ್ ಮೂರು ಪ್ರಾಂತ್ಯಗಳನ್ನು ವಶ ಪಡೆಯಲು ತಾಲಿಬಾನ್ ಕಣ್ಣು ಹಾಕಿದೆ. ಇದಕ್ಕೆ ನಾರ್ಥರ್ನ್  ಅಲಯನ್ಸ್‌ ಉಗ್ರ ಹೋರಾಟ ಮಾಡುತ್ತಿದೆ. ಈ ಹೋರಾಟದ ಬೆನ್ನಲ್ಲೇ ಪಂಜ್‍ಶೀರ್ ನಲ್ಲಿ ತಜಕಿಸ್ತಾನದ ಹೆಲಿಕಾಪ್ಟರ್ ಗಳ ಹಾರಾಟ ನಡೆಸಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಆ. 31ರೊಳಗೆ ನಿಮ್ಮ ಸೇನೆ ಇಲ್ಲಿಂದ ಕಾಲ್ಕಿತ್ತಬೇಕು- ಅಮೆರಿಕಾಗೆ ತಾಲಿಬಾನಿಗಳ ಬೆದರಿಕೆ

ಉತ್ತರ ಸೇನೆಯ ಹೋರಾಟದ ಬಗ್ಗೆ ವಿವರ ನೀಡುವ ನಾರ್ಥರ್ನ್ ಅಲಯನ್ಸ್‌ ಟ್ವಿಟ್ಟರ್ ಖಾತೆ, ಇಂದು ಮುಂಜಾನೆ, ನಮ್ಮ ಹೋರಾಟಕ್ಕೆ ತಜಾಕಿಸ್ತಾನ್ ಹೆಲಿಕಾಪ್ಟರ್ ಗಳಿಂದ ಮೊದಲ ಬೆಂಬಲ ಸಿಕ್ಕಿದೆ. ಸಾಕಷ್ಟು ಸಲಕರಣೆಗಳು, ಬಂದೂಕುಗಳು, ಸಂಪೂರ್ಣ ಮದ್ದುಗುಂಡುಗಳು ಮತ್ತು ಆಹಾರಗಳನ್ನು ಆಮದು ಮಾಡಿಕೊಂಡಿವೆ. ಪ್ರತಿರೋಧದ ಮನೋಬಲ ಹೆಚ್ಚಾಗಿದೆ. ಆರಂಭದಿಂದಲೂ ನಮ್ಮ ನೆರೆಹೊರೆಯವರು ನೀಡಿದ ಎಲ್ಲಾ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

ಈಗ ಬಂದಿರುವ ಮಾಹಿತಿಗಳ ಪ್ರಕಾರ ಬಲ್ಘಾನ್‍ನಲ್ಲಿ 300 ತಾಲಿಬಾನಿಗಳನ್ನು ಉತ್ತರ ಸೇನೆ ಹತ್ಯೆ ಮಾಡಿದೆ. ಫುಜ್ ಏರಿಯಾದಲ್ಲಿ 50ಕ್ಕೂ ಹೆಚ್ಚು ತಾಲಿಬಾನಿಗಳ ಹತ್ಯೆ ಮಾಡಿದ್ದರೆ ಬಾನು ಜಿಲ್ಲೆಯಲ್ಲಿ ತಾಲಿಬಾನ್ ಮುಖ್ಯಸ್ಥನನ್ನೇ ನಿರ್ನಾಮ ಮಾಡಿದ್ದಾರೆ ಎಂದು ವರದಿಯಾಗಿದೆ.

ನಾರ್ಥರ್ನ್ ಅಲಯನ್ಸ್‌ ತಾಲಿಬಾನಿ ಉಗ್ರರ ಮೇಲೆ ಗುಂಡಿನ ಮಳೆ ಸುರಿಸುತ್ತಿರುವ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ  ಅಪ್ಲೋಡ್ ಮಾಡಿದೆ.

Source: publictv.in Source link