ನವಜೋತ್​ ಸಿಂಗ್ ಸಿಧು ಅಡ್ವೈಸರ್ ಯಡವಟ್ಟು; ಮೊನ್ನೆ ದೇಶ ವಿರೋಧಿ, ಇಂದು ಇಂದಿರಾ ವಿರೋಧಿ ಟ್ವೀಟ್

ನವಜೋತ್​ ಸಿಂಗ್ ಸಿಧು ಅಡ್ವೈಸರ್ ಯಡವಟ್ಟು; ಮೊನ್ನೆ ದೇಶ ವಿರೋಧಿ, ಇಂದು ಇಂದಿರಾ ವಿರೋಧಿ ಟ್ವೀಟ್

ಪಂಜಾಬ್​​ ಕಾಂಗ್ರೆಸ್​​ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಸಲಹೆಗಾರ ಮಾಲ್ವಿಂದರ್ ಸಿಂಗ್ ಮಾಲಿ ಇತ್ತೀಚೆಗೆ ಕಾಶ್ಮೀರ ಪ್ರತ್ಯೇಕ ರಾಷ್ಟ್ರ ಎಂದು ಟ್ವೀಟ್​​ ಮಾಡುವ ಮೂಲಕ ದೇಶ ವಿರೋಧಿ ಕೃತ್ಯ ಎಸಗಿದ್ದರು. ಈ ಬೆನ್ನಲ್ಲೀಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಚಿತ್ರವೊಂದನ್ನು ಪೋಸ್ಟ್ ಮಾಡಿ ವಿವಾದಕ್ಕೀಡಾಗಿದ್ದಾರೆ.

ಸಿಖ್ಖರ ತಲೆ ಬುರುಡೆಗಳ ಮೇಲೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಗನ್​​ ಹಿಡಿದು ನಿಂತಿರುವ ಫೋಟೋ ಇದಾಗಿದೆ. ಕಾಶ್ಮೀರ ಪ್ರತ್ಯೇಕ ರಾಷ್ಟ್ರ. ಭಾರತ ಮತ್ತು ಪಾಕಿಸ್ತಾನ ಕಾನೂನುಬಾಹಿರ ನಿವಾಸಿಗಳು. ಪಂಜಾಬಿನಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾರಣ ಎಂದು ಆಗಸ್ಟ್​​ 17ನೇ ತಾರೀಕಿನಂದು ಮಾಲ್ವಿಂದರ್ ಸಿಂಗ್ ಮಾಲಿ ಟ್ವೀಟ್​​ ಮಾಡಿದ್ದರು. ಇದಾದ ಒಂದು ವಾರದ ನಂತರ ಇಂದಿರಾ ಗಾಂಧಿದ ಕುರಿತು ವಿವಾದಾತ್ಮಕ ಫೋಟೋ ಟ್ವೀಟ್​​ ಮಾಡಿದ್ದಾರೆ.

blank

ಇನ್ನು, ಮಾಲ್ವಿಂದರ್ ಸಿಂಗ್ ಮಾಲಿ ಪೋಸ್ಟುಗಳನ್ನು ಖಂಡಿಸದ ನವಜೋತ್​​ ಸಿಂಗ್​ ಸಿಧುಗೆ ಬಿಜೆಪಿ ತಪರಾಕಿ ಹಾಕಿದೆ. ನವಜೋತ್​​ ಸಿಂಗ್​​ ಸಿಧು​​ ಸ್ಥಿರವಿಲ್ಲದ ರಾಜಕಾರಣಿ, ರಾಜ್ಯ ಮತ್ತು ದೇಶದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಇವರ ಸಲಹೆಗಾರರ ವಿರುದ್ಧ ಏನು ಮಾತಾಡುತ್ತಿಲ್ಲ ಎಂದು ಕ್ಲಾಸ್​​ ತೆಗೆದುಕೊಂಡಿದೆ.

ಇದನ್ನೂ ಓದಿ: ಪಂಜಾಬ್​ ಕಾಂಗ್ರೆಸ್​ಗೆ ನವಜೋತ್ ಸಿಂಗ್ ಸಿಧು ಅಧ್ಯಕ್ಷ.. ಎಐಸಿಸಿ ಅಧಿಕೃತ ಆದೇಶ

ಮಾಲಿ ಹಾಕಿದ ಪೋಸ್ಟ್​ಗೆ ವಿರೋಧ ಪಕ್ಷಗಳು ತೀವ್ರವಾಗಿ ಟೀಕೆ ವ್ಯಕ್ತಪಡಿಸಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಮಾಲಿ ಪೋಸ್ಟ್​ ಎಂಭತ್ತರ ದಶಕದಲ್ಲಿ ಕಾಂಗ್ರೆಸ್‌ ಮಾಡಿದ ಹೇಯ ಕೃತ್ಯವನ್ನು ಬಹಿರಂಗಪಡಿಸಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೇ ಇಂದಿರಾ ಗಾಂಧಿ 1984ರಲ್ಲಿ ಸಿಖ್ಖರನ್ನು ಹೇಗೆ ಟಾರ್ಗೆಟ್ ಮಾಡಿದರು ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಇಂಥವರು ಭಾರತೀಯರಾಗಿರಲು ಸಾಧ್ಯವಿಲ್ಲ.. ಭಾರತ ಬಿಟ್ಟು ತೊಲಗಲಿ ಅಂತ ಸ್ವಪಕ್ಷೀಯರ ವಿರುದ್ಧವೇ ಕಿಡಿ ಕಾರಿದ್ದಾರೆ.

Source: newsfirstlive.com Source link