J&K ಮಾಜಿ ಸಿಎಂ ಮೆಹಬೂಬಾ ಮುಫ್ತಿ-ತಾಲಿಬಾನ್ ಸಂಪರ್ಕ ಆರೋಪ; ತನಿಖೆಗೆ ಬಿಜೆಪಿ ಆಗ್ರಹ

J&K ಮಾಜಿ ಸಿಎಂ ಮೆಹಬೂಬಾ ಮುಫ್ತಿ-ತಾಲಿಬಾನ್ ಸಂಪರ್ಕ ಆರೋಪ; ತನಿಖೆಗೆ ಬಿಜೆಪಿ ಆಗ್ರಹ

ಶ್ರೀನಗರ: ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿಗೆ ತಾಲಿಬಾನ್​​ ಮತ್ತು ISIS ಉಗ್ರರ ಸಂಪರ್ಕವಿದೆಯೇ ಎಂದು ತನಿಖೆ ಮಾಡಿ ಎಂದು ಬಿಜೆಪಿ ಆಗ್ರಹಿಸಿದೆ. ತಾಲಿಬಾನ್​​​ ಉಗ್ರರನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಪಾಠ ಕಲಿಯಬೇಕು ಎಂದು ಮುಫ್ತಿ ಹೇಳಿಕೆ ನೀಡಿದ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ತನಿಖೆಗೆ ಒತ್ತಾಯಿಸಿದೆ.

ಪ್ರಧಾನಿ ನರೇಂದ್ರ ಮೋದಿ ಪಾಠ ಕಲಿಯಬೇಕು ಎಂಬ ಹೇಳಿಕೆಗೆ ಮುಫ್ತಿ ಕ್ಷಮೆ ಕೇಳಬೇಕು. ತಾಲಿಬಾನ್​​ ಉಗ್ರರೊಂದಿಗೆ ಈಕೆಗೆ ಸಂಪರ್ಕವಿದೆಯೇ ಎಂದು ತನಿಖೆ ನಡೆಸಬೇಕು. ಇಲ್ಲದೆ ಹೋದಲ್ಲಿ ಬಿಜೆಪಿಯಿಂದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಬಲಿಷ್ಠ ದೇಶ ಅಮೆರಿಕಾ ಸೇನೆಯಿದ್ದರೂ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶ ಪಡಿಸಿಕೊಂಡಿದ್ದರು. ಅಲ್ಲದೇ ಅಂತ ಬಲಿಷ್ಠ ಅಮೆರಿಕಾ ಸೇನೆಯನ್ನು ಅಪ್ಘಾನಿಸ್ತಾನದಿಂದ ಹೊರಹಾಕಿದ್ದರು. ಈಗಾಲಾದ್ರೂ ತಾಲಿಬಾನಿಗಳನ್ನು ನೋಡಿ ಮೋದಿ ಪಾಠ ಕಲಿಯಲಿ. ಮೊದಲು ಕಾಶ್ಮೀರದ ಜನರೊಂದಿಗೆ ಮಾತಾಡಿ ವಿಶೇಷ ಸ್ಥಾನಮಾನ ಮರುಸ್ಥಾಪಿಸಲಿ ಎಂದಿದ್ದರು.

ಇದನ್ನೂ ಓದಿ: ಪಾಕ್​​ಗೆ ಅಮೆರಿಕ ಶಸ್ತ್ರಾಸ್ತ್ರಗಳು ರವಾನೆ ಆಗಿದ್ದೇಕೆ?; ತಾಲಿಬಾನಿಗಳಿಂದ ಭಾರತಕ್ಕಿರೋ ಸವಾಲೇನು?

ಇನ್ನು, ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದ ಜನರೊಂದಿಗೆ ಮಾತಾಡಿ ಕೂಡಲೇ ವಿಶೇಷ ಸ್ಥಾನಮಾನ ಮರು ಸ್ಥಾಪಿಸದೆ ಹೋದರೆ ಏನು ಬೇಕಾದರು ನಡೆಯಬಹುದು ಎಂದು ಮುಫ್ತಿ ವಾರ್ನಿಂಗ್​​ ನೀಡಿದ್ದರು.

Source: newsfirstlive.com Source link