ಬಿಗ್​ ಬಾಸ್​ ಮನೆಯಲ್ಲಿ ಏನೆಲ್ಲಾ ಆಗ್ತಿದೆ ಗೊತ್ತಾ? ಅತ್ತಿದ್ಯಾಕೆ ಕಂಟೆಸ್ಟಂಟ್?!

ಬಿಗ್​ ಬಾಸ್​ ಮನೆಯಲ್ಲಿ ಏನೆಲ್ಲಾ ಆಗ್ತಿದೆ ಗೊತ್ತಾ? ಅತ್ತಿದ್ಯಾಕೆ ಕಂಟೆಸ್ಟಂಟ್?!

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬಿಗ್​ ಮನೆ…ಸೀರಿಯಲ್​ ತಾರೆಯರು ತಮ್ಮ ಮನದಾಳದ ನೋವು ಹಂಚಿಕೊಂಡಿದ್ದಾರೆ..
ಬಿಗ್​ ಬಾಸ್​ ಮನೆ ಅಕ್ಷರ ಸಹ ಭಾವುಕವಾಗಿತ್ತು. ಸೀರಿಯಲ್​ ತಾರೆಯರ ಕಣ್ಣಾಲೆಗಳು ತುಂಬಿದ್ದವು. ನೋಡಿದವರ ಕಣ್ಣು ತುಂಬಿ ಬರುವುದು ಸತ್ಯ.

ಹೌದು, ಬಿಗ್​ ಬಾಸ್​ ಸೀರಿಯಲ್​ ತಾರೆಯರಿಗೆ ಒಂದು ಅವಕಾಶ ನೀಡಿದ್ದರು. ಜೀವನ ಕಲಿಸಿ ಕೊಟ್ಟ ಪಾಠದ ಬಗ್ಗೆ ಹಂಚಿಕೊಳ್ಳಲು ಹೇಳಿದ್ದರು. ಇದುವರೆಗೂ ಯಾರ ಹತ್ತಿರ ಹಂಚಿಕೊಳ್ಳದ ನೋವನ್ನ ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ.
ಎಲ್ಲರನ್ನ ತಮ್ಮ ಮಾತಿನ ಮೋಡಿಯಿಂದ ನಕ್ಕು ನಲಿಸುವ ನಿರಂಜನ್​..ತಮ್ಮ ಅಕ್ಕನ ಮದುವೆ ಮಾಡಲು ಪಟ್ಟ ಕಷ್ಟವನ್ನು ಹೇಳಿ ಮಗು ತರಹ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

blank

ಮೊದಲಿಗೆ, ನಿರಂಜನ್ ತಮ್ಮ​ ಹಾಗೂ ಅವರ ಸಹೋದರಿ ನಳಿನಿ ಅವಳಿ ಮಕ್ಕಳು. ನಳಿನಿ ಅವರು ಪ್ರೀತಿಯಲ್ಲಿ ಮೋಸ ಹೋಗಿ ಖಿನ್ನತೆಗೆ ಒಳಗಾಗಿ ಮದುವೆಯಾಗಲು ಸುತಾರಮ್​ ಒಪ್ಪುತ್ತಿರುಲಿಲ್ಲವಂತೆ ಈ ಬಗ್ಗೆ ಹಂಚಿಕೊಂಡ ನಿರಂಜನ್​ ಹೇಳಿದ್ದು ಹೀಗೆ..ನನ್ನ ಅಕ್ಕನ ಮದುವೆ ಮಾಡಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನನ್ನ ಜೀವನ ಒಂದುಕಡೆ ಮೇಲ್ಮುಖವಾಗಿ ಸಾಗುತ್ತಿದ್ದರೆ ಇತ್ತ ನನ್ನ ಅಕ್ಕನ ಜೀವನ ದಿನೆ ದಿನೆ ಕೆಟ್ಟ ಸ್ಥಿತಿ ತಲುಪುತಿತ್ತು. ಈ ಪರಿಸ್ಥಿತಿಯನ್ನ ಹೇಗೆ ನಿಭಾಯಿಸುವುದು ಅಂತಾ ಗೊತ್ತಾಗದೇ ಒದ್ದಾಡಿದೆ. ಸಂಬಂಧಿಕರೆಲ್ಲ ನಿಂದಿಸಲು ಶುರು ಮಾಡಿದ್ರು. ಎಷ್ಟು ಬೆಳೆದರೇ ಏನು..? ಅಕ್ಕನಿಗೆ ಒಂದು ಮದುವೆ ಮಾಡೋಕೆ ಆಗ್ತಿಲ್ಲ ಇವನಿಗೆ ಅಂತಾ ಬಾಯಿಗೆ ಬಂದ ಹಾಗೆ ಮಾತ್ನಾಡುತ್ತಿದ್ದರು. ಆದ್ರೆ ನನ್ನ ಕಷ್ಟ ನಂಗೆ ಗೊತ್ತು. ಇರೋಬರೊ ದೇವರಿಗೆ ಹರಿಕೆ ಹೊತ್ತೆ. ಒಂದು ದಿನ ನನ್ನ ಅಕ್ಕ ಒಂದು ಇವೆಂಟ್​ಗೆ ಹೋದಾಗ ಅಲ್ಲಿ ರಾಷ್ಟ್ರ ಮಟ್ಟದ ಇಜು ಚಾಂಪಿಯನ್​ ಜಯಂತ್​ ಜೀವಿತ್ ಅವರನ್ನ ಭೇಟಿ ಮಾಡಿದ್ರು. ಜಯಂತ್​ ಜೀವಿತ್​ ಅವರಿಗೆ ಎರಡು ಕೈಗಳಲ್ಲ. ಅವರನ್ನ ನೋಡಿ ಇವಳು ಜೀವನ ಸ್ಪೋರ್ತಿ ಪಡೆದಳು. ಜೀವತ್​ ಅವರನ್ನ ಕರ್ಕೊಂಡು ಬಂದು ನಾನು ಇವರನ್ನೇ ಮದುವೆ ಆಗೋದು ಎಂದು ಹೇಳಿದಳು.

blank

 

ನನಗೆ ಒಂದು ಕಡೆ ಅಕ್ಕಾ ಮದುವೆಯಾಗ್ತಿದ್ದಾಳೆ ಅಂತಾ ಖುಷಿ ಪಡೋದಾ ಅಥವಾ ಕೈ ಇಲ್ಲದಿರವ ವ್ಯಕ್ತಿನಾ ಇಷ್ಟಾ ಪಟ್ಟಿದ್ದಾಳೆ ಅಂತಾ ದುಃಖ ಪಡೋದ ಅಂತಾ ಗೊತ್ತಾಗದೇ ಒದ್ದಾಡಿದೆ. ಅವಳಿಗೆ ನಾನು ಒಂದೇ ಮಾತು ಹೇಳಿದೆ ಅನುಕಂಪದಿಂದ ನೀನು ಮದುವೆಯಾಗ್ತಿನಿ ಅನ್ನೋದಾದ್ರೆ ಖಂಡಿತ ನಾನು ಒಪ್ಪಲ್ಲ. ನಿಜವಾಗ್ಲು ಅವರನ್ನ ನೀನು ಇಷ್ಟ ಪಡೋದಾದ್ರೆ ನನ್ನ ಅಭ್ಯಂತರ ಏನೂ ಇಲ್ಲ ಅಂದೆ. ನನ್ನ ಅಕ್ಕ ಗಟ್ಟಿ ನಿರ್ಧಾರ ತೆಗೆದುಕೊಂಡು ನಳಿನಿ ಹಾಗೂ ಜಯಂತ್​ ಜೀವಿತ್​ ಇಬ್ಬರು ಸುಖವಾಗಿದ್ದಾರೆ ಎಂದು ಭಾವುಕರಾದ್ರು ನಿರಂಜನ್​.

blank

ಇನ್ನೂ ಗಗನ್​ ಚಿನ್ನಪ್ಪ..ತಮ್ಮ ಸ್ನೇಹಿತರು ನಡೆದುಕೊಂಡ ರೀತಿಯನ್ನ ನೆನೆದು ಕಣ್ಣೀರು ಹಾಕಿದ್ದಾರೆ. ಸ್ನೇಹಿತನನ್ನ ಡ್ರಾಪ್​ ಮಾಡಲು ಹೋದಾಗ ಅಪಘಾತ ಸಂಭವಿಸುತ್ತದೆ. ಆಗ ಹಾಸಿಗೆ ಹಿಡಿದ ಗಗನ್​ನಿಂದ ಸ್ನೇಹಿತರು ಬಾಡಿಗೆ ವಸೂಲಿ ಮಾಡುತ್ತಾರೆ. ಸ್ನೇಹಿತರ ವರ್ತನೆಯಿಂದ ದೊಡ್ಡ ಪಾಠ ಕಲಿತ ಗಗನ್​ ತಮ್ಮ ಮನದಾಳದ ನೋವು ಹಂಚಿಕೊಂಡಿದ್ದಾರೆ.
ಒಟ್ನಲ್ಲಿ ಜೀವನ ಕಲಿಸಿ ಕೊಟ್ಟ ಪಾಠದ ಮೆಲುಕು ಎಂಬ ಇಂದಿನ ಸಂಚಿಕೆಯಲ್ಲಿ ಮನ ಮಿಡಿಯುವ ಕಥೆಗಳಿದ್ದು, ಏನೇ ಜನಪ್ರೀಯತೆ ಇದ್ರು ಎಲ್ಲರ ಬದುಕಿನಲ್ಲಿ ಕಹಿ ಘಟನೆಗಳ ಕರಾಳ ಮುಖ ಇರುತ್ತದೆ ಎಂಬುವುದನ್ನ ಬಿಚ್ಚಿಟ್ಟಿದ್ದಾರೆ ಧಾರಾವಾಹಿಯ ಮಿನುಗು ತಾರೆಯರು.

Source: newsfirstlive.com Source link