ಅಫ್ಘಾನ್​​ನಲ್ಲಿ ಉಗ್ರರ ವಿರುದ್ಧ ರೋಷಾಗ್ನಿ; ಬೆಳಗ್ಗೆ 300, ಸಂಜೆ ಮತ್ತೆ 50 ತಾಲಿಬಾನಿಗಳ ಹತ್ಯೆ

ಅಫ್ಘಾನ್​​ನಲ್ಲಿ ಉಗ್ರರ ವಿರುದ್ಧ ರೋಷಾಗ್ನಿ; ಬೆಳಗ್ಗೆ 300, ಸಂಜೆ ಮತ್ತೆ 50 ತಾಲಿಬಾನಿಗಳ ಹತ್ಯೆ

ಅಫ್ಘಾನಿಸ್ತಾನದಲ್ಲಿ ಕ್ಷಣ ಕ್ಷಣಕ್ಕೂ ಯುದ್ಧದ ವಾತಾವರಣ ನಿರ್ಮಾಣ ಆಗುತ್ತಿದೆ. ಇದೀಗ ಪಂಜಶೀರದ ಬೆನ್ನಲ್ಲೇ ಫುಜ್ ಏರಿಯಾದಲ್ಲಿ ತಾಲಿಬಾನಿ ವಿರೋಧಿಗಳು ಬರೋಬ್ಬರಿ 50 ಉಗ್ರರನ್ನ ಹೊಡೆದು ಸಾಯಿಸಿದ್ದಾರೆ. ಜೊತೆಗೆ 20ಕ್ಕೂ ಹೆಚ್ಚು ಮಂದಿಯನ್ನ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ತಾಲಿಬಾನ್ ವಿರುದ್ಧ ನಡೆಸಿದ ಎನ್​ಕೌಂಟರ್​ನಲ್ಲಿ ಬೆನೋ ಜಿಲ್ಲೆಯ ತಾಲಿಬಾನ್ ಮುಖ್ಯಸ್ಥ ಸತ್ತಿದ್ದಾನೆ. ಸ್ಥಳೀಯ ಸೇನಾ ನಾಯಕ ಅಹಮ್ಮದ್ ಶಾ ಮಸೂದ್ ನೇತೃತ್ವದಲ್ಲಿ ತಾಲಿಬಾನ್​​ಗಳ ವಿರುದ್ಧ ಅಫ್ಘಾನ್​​ನ ಕೆಲವರು ನಾಗರಿಕರು ರೊಚ್ಚಿಗೆದ್ದಿದ್ದಾರೆ. ಅದರಂತೆ ಇಂದು ಪಂಜ್​ಶಿರದಲ್ಲಿ 300ಕ್ಕೂ ಹೆಚ್ಚು ತಾಲಿಬಾನಿಗಳನ್ನ ಹೊಡೆದುರುಳಿಸಿದ್ದಾರೆ.

ಪಂಜ್​ಶೀರನಲ್ಲಿ ಕಣಿವೆಯತ್ತ ನುಗ್ಗಿ ಬರುತ್ತಿದ್ದ 300 ತಾಲಿಬಾನಿ ಉಗ್ರರನ್ನ ಹೊಡೆದುರುಳಿಸಿದ್ದಾರೆ. ಪಂಜಶೀರದ ಸ್ಥಳೀಯ ನಾಯಕ ಮಸೂದ್ ನೇತೃತ್ವದ ಸೇನಾಪಡೆ ತಾಲಿಬಾನಿಗಳ ವಿರುದ್ಧ ತೊಡೆ ತಟ್ಟಿದೆ. ಮಾತುಕತೆಗೆ ಸಿದ್ಧವಾಗದಿದ್ರೆ, ಮುಂದಿನ ಯುದ್ಧಕ್ಕೆ ಸಿದ್ಧರಾಗಿ ಅಂತಾ ಮಸೂದ್ ಅವರು ತಾಲಿಬಾನಿಗಳಿಗೆ ಎಚ್ಚರಿಕೆಯನ್ನ ನೀಡಿದ್ದಾರೆ ಅಂತಾ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ.

Source: newsfirstlive.com Source link