ಪೋಷಕರೇ ಇಲ್ನೋಡಿ.. ಪುಸ್ತದ ರೇಟ್ ಬಗ್ಗೆ ಚಿಂತೆ ಬಿಡಿ; ಕೇವಲ 10 ರೂ. ಎಲ್ಲಾ ಲಭ್ಯ

ಪೋಷಕರೇ ಇಲ್ನೋಡಿ.. ಪುಸ್ತದ ರೇಟ್ ಬಗ್ಗೆ ಚಿಂತೆ ಬಿಡಿ; ಕೇವಲ 10 ರೂ. ಎಲ್ಲಾ ಲಭ್ಯ

ಬೆಂಗಳೂರು: ಮಾರಕ ಕೊರೋನಾ ಲಾಕ್ಡೌನ್​​ನಿಂದ ಶಾಲಾ ಕಾಲೇಜುಗಳನ್ನು ಸುಮಾರು ಎರಡು ವರ್ಷಗಳಿಂದ ಬಂದ್​​ ಮಾಡಿದ ಪರಿಣಾಮ ವಿದ್ಯಾರ್ಥಿಗಳ ಭವಿಷ್ಯ ಅದೋಗತಿಗೆ ತಲುಪಿದೆ. ಪೋಷಕರು ಯಾವುದೇ ಕೆಲಸ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗಲೇ ಡಿಜಿಟಲ್​​ ವೆಬ್​ಸೈಟ್​​ ಒಂದು ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಕೇವಲ 10 ರೂಪಾಯಿಗಳಿಗೆ ಎಲ್ಲಾ ರೀತಿಯ ಪಠ್ಯಪುಸ್ತಕಗಳ ಪಿಡಿಎಫ್​ ಡೌನ್ಲೋಡ್​ ಮಾಡಿಕೊಳ್ಳುವ ಅವಕಾಶ ಮಾಡಿಕೊಟ್ಟಿದೆ.

ಹೌದು, ಇಂಗ್ಲೀಷ್​​ ಮತ್ತು ಮ್ಯಾಥ್ಸ್​​ ವರ್ಕ ಬುಕ್ಸ್ ಸೇರಿದಂತೆ ಎಲ್ಲಾ ರೀತಿಯ ಪಠ್ಯಪುಸ್ತಕಗಳು ಕೇವಲ ಹತ್ತು ರೂಪಾಯಿಗಳಿಗೆ ಲಭ್ಯವಾಗಲಿವೆ. NCERT, SCERT ಸಿಲಬಸ್​​ನಿಂದ ಹಿಡಿದರು ಸ್ಟೇಟ್​​ತನಕ 1-12ನೇ ತರಗತಿವರೆಗೂ ಪಠ್ಯಪುಸ್ತಕಗಳ ಪಿಡಿಎಫ್​​ www.Grade 1to6.com/class1to12 ಡಿಜಿಟಲ್​​ ವೆಬ್​ಸೈಟಿನಲ್ಲಿ ಡೌನ್​​ಲೋಡ್​​ ಮಾಡಿಕೊಳ್ಳಬಹುದಾಗಿದೆ.

ಹೀಗೊಂದು ಪ್ರಾಜೆಕ್ಟ್​ ಲಾಂಚ್​ ಮಾಡಿದ ಒಂದೇ ತಿಂಗಳಿನಲ್ಲಿ ದೇಶದ 20 ಸಾವಿರಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಲಕ್ಷಾಂತರ ಪುಸ್ತಕಗಳ ಪಿಡಿಎಫ್​​ ಡೌನ್ಲೋಡ್​ ಮಾಡಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ಈ ಡಿಜಿಟಲ್​​ ವೆಬ್​​ಸೈಟ್​ ಸಂಸ್ಥಾಪಕರಾದ ಬಾಲಜಿಯವರು ತಿಳಿಸಿದ್ದಾರೆ.

ಇದನ್ನೂ ಓದಿ: ₹6 ಲಕ್ಷ ಕೋಟಿ ಮೌಲ್ಯದ ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಪ್ಲ್ಯಾನ್​​ಗೆ ಕೇಂದ್ರ ಚಾಲನೆ

Source: newsfirstlive.com Source link