ದರೋಡೆಕೋರರಿಂದ ಚಿನ್ನದ ಅಂಗಡಿ ಮಾಲೀಕನತ್ತ ಫೈರಿಂಗ್; ರಸ್ತೆಯಲ್ಲಿ ಹೋಗ್ತಿದ್ದ ಯುವಕ ಬಲಿ

ದರೋಡೆಕೋರರಿಂದ ಚಿನ್ನದ ಅಂಗಡಿ ಮಾಲೀಕನತ್ತ ಫೈರಿಂಗ್; ರಸ್ತೆಯಲ್ಲಿ ಹೋಗ್ತಿದ್ದ ಯುವಕ ಬಲಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುಂಡಿನ ಸದ್ದು ಮೊಳಗಿದೆ. ಚಿನ್ನಾಭರಣ ದೋಚಲು ಬಂದ ದುಷ್ಕರ್ಮಿಗಳು ಫೈರಿಂಗ್ ನಡೆಸಿದ ಪರಿಣಾಮ ರಸ್ತೆಯಲ್ಲಿ ಹೋಗುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ದಡದಹಳ್ಳಿ ಗ್ರಾಮದ ಚಂದ್ರು (23) ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಯುವಕ. ನಗರದ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಅಂಗಡಿಯನ್ನ ಮೂವರು ದರೋಡೆಕೋರರು ರಾಬರಿ ಮಾಡಲು ಲಗ್ಗೆ ಇಟ್ಟಿದ್ದರು. ಇದನ್ನು ತಡೆಯಲು ಅಂಗಡಿ ಮಾಲೀಕ ಪ್ರಯತ್ನಿಸಿದ್ದಾನೆ.

ಆಗ ದರೋಡೆಕೋರರು ಹೊರಗೆ ಹೋಗಲು ಯತ್ನಿಸಿದ್ದಾರೆ. ಈ ವೇಳೆ ಕೈಯಲ್ಲಿದ್ದ ಗನ್​​ನಿಂದ ದರೋಡೆಕೋರರು ಗುಂಡು ಹಾರಿಸಿದ್ದಾರೆ. ಪರಿಣಾಮ ರಸ್ತೆಯಲ್ಲಿದ್ದ ಯುವಕನ‌ ತಲೆಗೆ ಗುಂಡೇಟು ತಾಗಿ ಕುಸಿದು ಬಿದ್ದಿದ್ದಾನೆ. ನಂತರ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಅಂತಾ ವರದಿಯಾಗಿದೆ. ಇನ್ನು ಘಟನಾ ಸ್ಥಳಕ್ಕೆ ಮೈಸೂರು ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ಆರಂಭಿಸಿದ್ದಾರೆ.

 

Source: newsfirstlive.com Source link