ಶಾಲೆ ಪುನರಾರಂಭಕ್ಕೆ ಸಿಎಂ ಸಂತೋಷ; ಪ್ರಾಥಮಿಕ ಶಾಲೆ ಓಪನ್​​ಗೂ ಸುಳಿವು ಕೊಟ್ರು ಬೊಮ್ಮಾಯಿ

ಶಾಲೆ ಪುನರಾರಂಭಕ್ಕೆ ಸಿಎಂ ಸಂತೋಷ; ಪ್ರಾಥಮಿಕ ಶಾಲೆ ಓಪನ್​​ಗೂ ಸುಳಿವು ಕೊಟ್ರು ಬೊಮ್ಮಾಯಿ

ಬೆಂಗಳೂರು: ಇಂದು‌ ಶಾಲೆಗಳಿಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಬಂದಿದ್ದಾರೆ. ಮುಂದಿನ ದಿನಗಳಲ್ಲಿ‌ ಹಾಜರಾತಿ ಹೆಚ್ಚಾಗಲಿದೆ ಅಂತಾ ಸಿಎಂ ಬಸವರಾಜ್ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

blank

ತಮ್ಮ ನಿವಾಸದಲ್ಲಿ ಶಾಲಾ ಆರಂಭದ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ.. ಒಂದು‌ ವಾರ ಅಥವಾ ಹತ್ತು ದಿನಗಳ ಕಾಲ ಪರಿಸ್ಥಿತಿ ಗಮನಿಸುತ್ತೇವೆ. ತಜ್ಞರ ಸಮಿತಿಯಿಂದ ಮಾಹಿತಿ ಪಡೆದು ನಂತರ ಪ್ರಾಥಮಿಕ ಶಾಲೆ ಮತ್ತು 8ನೇ ತರಗತಿ ತೆರೆಯುವ ಬಗ್ಗೆ ನಿರ್ಧಾರ ಮಾಡುತ್ತೇವೆ.

Image

ಬಹುತೇಕ ಆಗಸ್ಟ್ 30 ಅಥವಾ ಸೆಪ್ಟೆಂಬರ್ 1ರಂದು ತಜ್ಞರ ಜೊತೆ ಸಭೆ ನಡೆಸುತ್ತೇವೆ. ಗಡಿ ಜಿಲ್ಲೆಗಳಲ್ಲಿ ಶಾಲೆ ತೆರೆಯುವ ಬಗ್ಗೆ ಕೂಡಾ ತಜ್ಞರ ಸಮಿತಿ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇವೆ ಎಂದರು. ಇನ್ನು ಇವತ್ತಿನಿಂದ 9 ಮತ್ತು 10 ನೇ ತರಗತಿಗಳು ಪುನರ್ ಆರಂಭಗೊಂಡ ಹಿನ್ನೆಲೆಯಲ್ಲಿ ಸಿಎಂ ಅವರೇ ಖುದ್ದು ಕೆಲವು ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು. ಅಲ್ಲದೇ ಕೊರೊನಾ ನಿಯಮಗಳ ಬಗ್ಗೆ ತೆಗೆದುಕೊಂಡಿರುವ ಕ್ರಮಗಳನ್ನ ಪರಿಶೀಲನೆ ನಡೆಸಿದರು.

Source: newsfirstlive.com Source link