ಬಿಗ್​​ಬಾಸ್​ ಮುಗಿಸಿ ಎಲ್ಲಿಗೆ ಹೋಗಿದ್ರಿ..? ಅಭಿಮಾನಿಗಳ ಕಾತುರಕ್ಕೆ ಉತ್ತರ ಕೊಟ್ರು ಅರವಿಂದ್

ಬಿಗ್​​ಬಾಸ್​ ಮುಗಿಸಿ ಎಲ್ಲಿಗೆ ಹೋಗಿದ್ರಿ..? ಅಭಿಮಾನಿಗಳ ಕಾತುರಕ್ಕೆ ಉತ್ತರ ಕೊಟ್ರು ಅರವಿಂದ್

ಬಿಗ್​ಬಾಸ್​ ಮುಗಿದ ಬಳಿಕ ಅರವಿಂದ್ ಕೆಪಿ ತಮ್ಮ ಕೆಲಸ ನಿಮಿತ್ತ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದರಿಂದ ಅವರ ಅಭಿಮಾನಿಗಳು ಎಲ್ಲಿ ಹೋಗಿದ್ದಾರೆ ನಮ್ಮ ಹೀರೋ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಹುಡುಕುತ್ತ ಇದ್ದರು. ಇದೀಗ ನ್ಯೂಸ್​ಫಸ್ಟ್​ ಜೊತೆ ತಾವು ಇಷ್ಟುದಿನ ಎಲ್ಲಿದ್ದೆ.. ಏನ್ಮಾಡ್ತಿದ್ದೆ ಅನ್ನೋದನ್ನ ಹೇಳಿದ್ದಾರೆ.

ಬಿಗ್​ಬಾಸ್​ನಿಂದ ಸ್ವಲ್ಪದಿನ ನಾನು ಅನ್​ವೈಂಡ್ ಆಗಬೇಕಿತ್ತು. ಪ್ರಾಜೆಕ್ಟ್ ಕೆಲಸ ಬಾಕಿ ಇರೋದ್ರಿಂದ ಅದರಲ್ಲಿ ಬ್ಯುಸಿ ಆಗಿದ್ದೆ. ಸಣ್ಣ ಟ್ರಿಪ್ ತೆಗೆದುಕೊಂಡು ಇದೀಗ ಫ್ರೀಯಾಗಿದ್ದೇನೆ. ನಾನೀಗ ತುಂಬಾ ಖುಷಿಯಾಗಿದ್ದೇನೆ. ನನ್ನ ಕೈಯಲ್ಲಿ ತುಂಬಾ ಕೆಲಸಗಳು ಬಾಕಿಯಿವೆ. ಹೀಗಾಗಿ ಅವುಗಳನ್ನ ಮಾಡಬೇಕಿದೆ. ಯಾಕಂದ್ರೆ ಮಧ್ಯದಲ್ಲಿ ಕೊರೊನಾ ಹೆಚ್ಚಾಗಿದ್ದರಿಂದ ಕೆಲಸಗಳೆಲ್ಲಾ ಹಾಗೇ ಇದೆ ಎಂದರು.

Source: newsfirstlive.com Source link