ವರ್ಷಕ್ಕೆ ಒಬ್ಳು, 35ಕ್ಕೆ 3 ಮದ್ವೆ – ಈಗ 4ನೇಯವಳ ಜೊತೆ ಮಂತ್ರವಾದಿ ಪರಾರಿ

ಚಿಕ್ಕಮಗಳೂರು: ಮದುವೆ ಆಗೋದು. ಆರು ತಿಂಗಳು ಅಥವಾ 1 ವರ್ಷ ಸಂಸಾರ ಮಾಡೋದು. ಒಂದು ಮಗು ಆಗುತ್ತಿದ್ದಂತೆ ಮತ್ತೊಬ್ಬಳನ್ನು ಮದುವೆಯಾಗೋದು. ಮೊದಲನೆಯವಳಿಗೆ ಎರಡು ಮಕ್ಕಳು. ಹೀಗೆ ಅವಳ್ ಬಿಟ್ ಇವ್ಳು, ಇವಳ್ ಬಿಟ್ ಅವ್ಳು ಅಂತ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಂತ್ರವಾದಿಯೋರ್ವ ಮಹಿಳೆಯರು, ಯುವತಿಯರ ಬಾಳಲ್ಲಿ ಜಂಪಿಂಗ್ ಸ್ಟಾರ್ ಆಗಿ 35ರ ಆಸುಪಾಸಿಗೆ ಮೂರು ಮದುವೆಯಾಗಿ ವಿಷಯ ಹೊರಬರುತ್ತಿದ್ದಂತೆ ನಾಪತ್ತೆಯಾಗುವಾಗಲೂ ನಾಲ್ಕನೇಯವಳನ್ನ ಕರೆದುಕೊಂಡು ಹೋಗಿರೋ ಘಟನೆ ಕಳಸ ಪಟ್ಟಣದಲ್ಲಿ ನಡೆದಿದೆ.

ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ನಿವಾಸಿ ಯೂಸಫ್ ಹೈದರ್ ಮಂತ್ರವಾದಿಯ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಯುವತಿಯರು, ಮಹಿಳೆಯರನ್ನ ಟಾರ್ಗೆಟ್ ಮಾಡಿ ಪ್ರೀತಿಯ ನಾಟಕವಾಗಿ ಮದುವೆಯಾಗುತ್ತಿದ್ದನು. ಮದುವೆಯಾಗಿ ಆರು ತಿಂಗಳು, ವರ್ಷ ಸಂಸಾರ ಮಾಡಿ ಒಂದು ಮಗುವಾಗುತ್ತಿದ್ದಂತೆ ಆಕೆಯನ್ನ ಬಿಟ್ಟು ಬೇರೆ ಮದುವೆಯಾಗುತ್ತಿದ್ದನು. ಹೀಗೆ ಅಮಾಯಕರನ್ನ ವಂಚಿಸಿ ಮೂರು ಮದುವೆಯಾಗಿದ್ದಾನೆ.

ವಿಷಯ ಮೂರು ಪತ್ನಿಯರಿಗೂ ತಿಳಿಯುತ್ತಿದ್ದಂತೆ ನಾಪತ್ತೆಯಾಗುವಾಗಲೂ ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಿಳೆಯನ್ನ ಆಕೆ ಮಗುವಿನ ಸಮೇತವೇ ಕರೆದುಕೊಂಡು ಜೂಟ್ ಆಗಿದ್ದಾನೆ. ಇದೀಗ, ಈತನಿಂದ ಮೋಸ ಹೋದ ಪತ್ನಿಯರು ನ್ಯಾಯಕ್ಕಾಗಿ ಪರಿತಪ್ಪಿಸುತ್ತಿದ್ದಾರೆ.

ಮೊದಲು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಮಹಿಳೆ ಜೊತೆ ಮದುವೆಯಾಗಿದ್ದ. ಆಕೆಗೆ ಎರಡು ಮಕ್ಕಳಾಗುತ್ತಿದ್ದಂತೆ ಆಕೆಯನ್ನ ಬಿಟ್ಟಿದ್ದ. ಬಳಿಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದ ಮಹಿಳೆಯನ್ನ ಎರಡನೇ ಮದುವೆಯಾದ. ವರ್ಷದ ಬಳಿಕ ಆಕೆಗೂ ಗೇಟ್ ಪಾಸ್ ಕೊಟ್ಟಿದ್ದಾನೆ.

ಈ ಎರಡು ಮದುವೆಯನ್ನೂ ಮುಚ್ಚಿಟ್ಟು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದ ಯುವತಿ ಜೊತೆ ಮೂರನೇ ಮದುವೆಯಾದ. ಆಕೆಗೆ ಈಗ ಒಂದು ಹೆಣ್ಣು ಮಗುವಿದೆ. ಮಗುವಾದ ಕೂಡಲೇ ಆಕೆಗೆ ಹಿಂಸೆ ನೀಡಿ ಆಕೆಯನ್ನ ಮನೆಯಿಂದ ಹೊರಗಟ್ಟಿದ್ದಾನೆ. ಅತ್ತ ತಂದೆ ಇಲ್ಲ. ಇತ್ತ ಗಂಡನೂ ಇಲ್ಲ. ಒಂದೂವರೆ ವರ್ಷದ ಹೆಣ್ಣು ಮಗು ಇಟ್ಕೊಂಡು ಆ ಹೆಣ್ಣು ಮಗಳು ಕಣ್ಣೀರಾಕುತ್ತಿದ್ದಾಳೆ. ಈಗ ನಾಲ್ಕನೇ ಮದುವೆಗೆ ಸಿದ್ಧನಾಗಿರುವ ಈ ಜಂಪಿಂಗ್ ಸ್ಟಾರ್ ಮೂರು ಮದುವೆಯ ವಿಷಯ ಪತ್ನಿಯರಿಗೆ ತಿಳಿಯುತ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ.

ಹೋಗುವಾಗಲಾದರೂ ಸುಮ್ಮನೇ ಹೋಗದೇ ಮತ್ತೊಬ್ಬಳನ್ನ ಕರೆದುಕೊಂಡು  ಹೋಗಿದ್ದಾನೆ. ವರದಕ್ಷಿಣೆಗಾಗಿ ಮದುವೆಯಾಗೋದು. ಆರು ತಿಂಗಳು, ವರ್ಷ ಚಿನ್ನ, ರನ್ನ ಅಂತ ಲವ್ ಮಾಡೋದು ಒಂದು ಮಗುವಾಗುತ್ತಿದ್ದಂತೆ ಮತ್ತೊಬ್ಬಳ ಜೊತೆ ಹಾರೋಕೆ ರೆಡಿಯಾಗೋದು. ಆಗ ಜೊತೆಗಿದ್ದವಳ ಜೊತೆ ಕಿರಿಕ್ಕು ಎತ್ತುತ್ತಿದ್ದ.  ಇದನ್ನೂ ಓದಿ: ಬಾಲಕಿಗೆ ಸೆಕ್ಸ್ ವೀಡಿಯೋ ಕಳಿಸ್ತಿದ್ದ ಆಂಟಿ ವಿರುದ್ಧ FIR

blank

ಈತ ಮಂತ್ರವಾದಿಯ ಕೆಲಸವನ್ನೂ ಮಾಡುತ್ತಿದ್ದ. ನಿಮ್ಮ ಕಷ್ಟ ಬಗೆಹರಿಸುತ್ತೇನೆ. ದೇಹದಲ್ಲಿ ಏನೋ ಇದೆ ಎಂದು ಹೇಳಿ ಹತ್ತಿರವಾಗುತ್ತಿದ್ದ. ಆರೋಗ್ಯ ಸಮಸ್ಯೆಯನ್ನೂ ಬಗೆಹರಿಸುತ್ತೇನೆಂದು ಆಯುರ್ವೇದಿಕ್ ಔಷಧಿ ನೀಡಿ ಆಮೇಲೆ ಅವರಿಗೆ ಗಂಟು ಹಾಕಿಕೊಳ್ಳುತ್ತಿದ್ದ. ಆಮೇಲೆ ನಡುನೀರಲ್ಲಿ ಕೈಬೀಡುವುದು ಇವನ ಖಯಾಲಿ ಅಂತ ಆತನಿಂದ ಮೋಸ ಹೋದ ಮೂರನೇ ಪತ್ನಿ ಆರೋಪಿಸಿದ್ದಾರೆ. ಇದನ್ನೂ ಓದಿ: ಆಂಟಿ ಎಂದು ಕರೆದ ಹುಡಿಗಿಗೆ ಗೂಸಾ ಕೊಟ್ಟ ಮಹಿಳೆ

ಈತನನ್ನ ಕಟ್ಟಿಕೊಂಡ ತಪ್ಪಿಗೆ ಒಬ್ಬೊಬ್ಬರು ಪತ್ನಿಯರು ಒಂದೊಂದು ಕಡೆ ಮಕ್ಕಳನ್ನು ಇಟ್ಕೊಂಡು ಬದುಕಿನ ದಾರಿ ನೋಡಿಕೊಂಡಿದ್ದಾರೆ. ಈತ ಮಾತ್ರ ತನ್ನ ಜಂಪಿಂಗ್ ಚಾಳಿಯನ್ನು ಮುಂದುವರೆಸಿದ್ದಾನೆ. ಒಂದೂವರೆ ಲಕ್ಷ ವರದಕ್ಷಿಣೆ ನೀಡಿ ಮೂರನೇ ಮದ್ವೆಯಾದವಳು ಹೆಣ್ಣು ಮಗು ಇಟ್ಕೊಂಡು ಹೇಗೆ ಬದುಕೋದು ಎಂದು ಕಣ್ಣೀರಿಡುತ್ತಿದ್ದಾಳೆ. ಮಗಳನ್ನ ಕರೆದುಕೊಂಡು ಜೂಟ್ ಆಗಿರೋ ಭೂಪನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬೂಟ್ ಕಾಲಲ್ಲಿ ಒದ್ದು ಈ ನೀಚನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ನಾಲ್ಕನೇ ಮದುವೆಯಾಗಲು ರೆಡಿಯಾದ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

Source: publictv.in Source link