ರಾಜ್ಯ ಸರ್ಕಾರದವ್ರು ಬರೀ ಘೋಷಣೆ ಮಾಡ್ತಾರೆ, ಅದ್ಕೆ ಕೇಂದ್ರ ಒಪ್ಪಿಗೆ ಕೊಡಲ್ಲ -ಹೆಚ್​ಡಿಕೆ ವಾಗ್ದಾಳಿ

ರಾಜ್ಯ ಸರ್ಕಾರದವ್ರು ಬರೀ ಘೋಷಣೆ ಮಾಡ್ತಾರೆ, ಅದ್ಕೆ ಕೇಂದ್ರ ಒಪ್ಪಿಗೆ ಕೊಡಲ್ಲ -ಹೆಚ್​ಡಿಕೆ ವಾಗ್ದಾಳಿ

ಹಾವೇರಿ: ಹಲವಾರು ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡ್ತಿಲ್ಲ ಅಂತ ಹಿರೇಕೆರೂರಿನ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರದವರು ಕೇವಲ ಘೋಷಣೆ ಮಾಡ್ತಿದ್ದಾರೆ ಅಷ್ಟೇ. ಮಳೆ ಅನಾಹುತಗಳಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಕೊಡ್ತೀವಿ ಅಂತ ಹೇಳಿದ್ರು. ಆದರೆ ಒಂದು ಕಂತು ಹಣ ನೀಡಿ ಮುಂದೆ ಹಣವನ್ನೇ ನೀಡಿಲ್ಲ. ಬೆಳೆ ಹಾನಿಗೆ ಪರಿಹಾರವೂ ಸಿಕ್ಕಿಲ್ಲ. ಸಾಲ ಮನ್ನಾ ಆಗಿಯೇ ಇಲ್ಲ ಎಂದು ಕೆಲ ರೈತರು ನನಗೆ ಈಗಲೂ ಮನವಿ ಕೊಟ್ಟಿದ್ದಾರೆ.

ಸಾಲ ಮನ್ನಾ ಮಾಡಿದಾಗ ಬಿಜೆಪಿ-ಕಾಂಗ್ರೆಸ್​ನವರು ನನ್ನನ್ನು ಅಪಹಾಸ್ಯ ಮಾಡಿದ್ರು. ನನಗೆ ಕಳೆದ ಚುನಾವಣೆಯಲ್ಲಿ ಬಹುಮತ ಕೊಡಲೇ ಇಲ್ಲ, ನನಗೆ ಯಾರ ಜೊತೆಗೂ ಸರ್ಕಾರ ಮಾಡುವ ಮನಸ್ಸಿರಲಿಲ್ಲ, ಆದರೆ ಕಾಂಗ್ರೆಸ್ ನವರೇ ನಮ್ಮ ಮನೆಗೆ ಬಂದ್ರು. ಅಂದು ದೇವೇಗೌಡರು ನಮ್ಮ ಪಕ್ಷಕ್ಕೆ ಸಿಎಂ ಹುದ್ದೆ ಬೇಡವೇ ಬೇಡ ಅಂದಿದ್ದರು. ಆದರೆ ರೈತರಿಗೆ ಸಾಲ ಮನ್ನಾ ಮಾತು ಕೊಟ್ಟ ಹಿನ್ನಲೆ ಸಿಎಂ ಆಗಲು ಒಪ್ಪಿಕೊಂಡೆ ಅಂತ ಕಾಂಗ್ರೆಸ್​ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Source: newsfirstlive.com Source link