‘ದಾರಿ ಬಿಡಿ ಜಾತ್ರೆಗೆ ಬರ್ತಾಳೆ ಶೇಷಮ್ಮ’ ಸನ್ನಿ ನಿನ್ನ ಅಭಿಮಾನಿಗಳ ಲೀಲೆ ಏನಮ್ಮ..!

‘ದಾರಿ ಬಿಡಿ ಜಾತ್ರೆಗೆ ಬರ್ತಾಳೆ ಶೇಷಮ್ಮ’ ಸನ್ನಿ ನಿನ್ನ ಅಭಿಮಾನಿಗಳ ಲೀಲೆ ಏನಮ್ಮ..!

ಸನ್ನಿ ಲಿಯೋನ್​ ಫ್ಯಾನ್​ ಫಾಲೋವರ್ಸ್​ ಬಗ್ಗೆ ನಾವೇನೂ ಹೆಚ್ಚು ಹೇಳಬೇಕಾಗಿಲ್ಲ.. ಆಕೆಯನ್ನ ನೇರವಾಗಿ ನೋಡಬೇಕು, ಫೋಟೋ ತೆಗೆಸಿಕೊಳ್ಳಬೇಕು ಅಂತಾ ಅದೆಷ್ಟೋ ಮಂದಿ ತುದಿಗಾಲಲ್ಲಿ ನಿಂತಿರುತ್ತಾರೆ. ಕೆಲವು ಕಡೆ ಸನ್ನಿ ಲಿಯೋನ್ ಭೇಟಿ ನೀಡಿದಾಗ ಅವ್ರ ಫ್ಯಾನ್ಸ್, ಅವರನ್ನ ನೋಡಲು ಮುಗಿಬಿದ್ದು ಕೈಕಾಲು ಮುರಿದುಕೊಂಡಿದ್ದೂ ಅಲ್ಲದೇ, ಪೊಲೀಸರಿಂದ ಲಾಠಿ ತಿಂದ ಅನೇಕ ಪ್ರಸಂಗಗಳೂ ಕಣ್ಮುಂದೆ ಇವೆ. ಜೊತೆಗೆ ಅದೆಷ್ಟೋ ಸ್ಟೇಜ್​ಗಳಿಗೆ ನುಗ್ಗಿ ಅವರನ್ನ ಹತ್ತಿರದಲ್ಲಿ ಕಣ್ತುಂಬಿಕೊಂಡ ದೃಶ್ಯಗಳು ಕಣ್ಮುಂದೆ ಇವೆ.

ಮಾತ್ರವಲ್ಲ, ಸನ್ನಿ ಲಿಯೋನ್​ ಅವರ ಬೆದರುಗೊಂಬೆ ಮಾಡಿ ಜಮೀನುಗಳಲ್ಲಿ ಕೆಲವು ರೈತರು ಇಟ್ಟಿರೋದನ್ನ ನೋಡಿದ್ದೇವೆ. ಸನ್ನಿ ಇದ್ದರೆ ಬೆಳೆ ಕಾಪಾಡುತ್ತಾಳೆ, ಪ್ರಾಣಿ ಪಕ್ಷಿಗಳು ತೋಟ, ಗದ್ದೆಗೆ ಬರುವುದಿಲ್ಲ ಅಂತಾ ಹೇಳೋದನ್ನೂ ಕೇಳಿದ್ದೇವೆ, ನೋಡಿದ್ದೇವೆ. ಆದರೆ ನಾವು ಇದೀಗ ಹೇಳಲು ಹೊರಟಿರೋ ಕಥೆ ಸ್ವಲ್ಪ ಡಿಫ್ರೆಂಟ್ ಆಗಿದೆ. ಯಾಕಂದ್ರೆ ಸನ್ನಿ ಲಿಯೋನ್ ಅಪ್ಪಟ ಅಭಿಮಾನಿಯೊಬ್ಬ ನಾನು ಸನ್ನಿ ಲಿಯೋನ್ ಫ್ಯಾನ್ ಅಂತಾ ಧೈರ್ಯವಾಗಿ ಹೇಳಲು ಹಿಂಜರಿಯೋರೆ ಹೆಚ್ಚು ಮಂದಿ ಇದ್ದಾರೆ. ಅಂತದ್ರಲ್ಲಿ ಸನ್ನಿ ಲಿಯೋನ್ ಅಭಿಮಾನ ಬಳಗ ಶುರುವಾಗುತ್ತೆ ಅಂದ್ರೆ ನೀವು ಅಚ್ಚರಿ ಪಡೆಲೇಬೇಕು!

blank

ಹೌದು.. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸನ್ನಿ ಲಿಯೋನ್ ಅಭಿಮಾನಿ ಬಳಗದ ಪೋಸ್ಟ್​ ಒಂದು ವೈರಲ್ ಆಗ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ವೈರಲ್ ಆಗಿರುವ ಪೋಸ್ಟರ್​​ನಲ್ಲಿ ಸನ್ನಿ ಲಿಯೋನ್ ಫೋಟೋವನ್ನ ಅಂಟಿಸಿ ‘ಶ್ರೀ ಶ್ರೀ ಶರಭಾರ್ಯ ಸ್ವಾಮಿ ಹಾಗೂ ಶ್ರೀ ರಾಜೇಶ್ವರಿ ದೇವಿ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸ್ವಾಗತ’​ ಅಂತೆ ಬರೆಸಿದ್ದಾರೆ. ಸ್ವಾಗತ ಕೋರುವವರು ಸನ್ನಿ ಲಿಯೋನ್ ಅಭಿಮಾನಿ ಬಳಗ ಹುಲ್ಲೂರು ಅಂತಾ ಬರೆದುಕೊಂಡಿದೆ. ಹುಲ್ಲೂರು ಹಾವೇರಿ ಜಿಲ್ಲೆಯಲ್ಲಿ ಬರುತ್ತದೆ. ಇನ್ನು ಪೋಸ್ಟರ್​ನಲ್ಲಿ ಶುಭ ಕೋರಿದವೆಲ್ಲಾ ಯುವಕರೇ ಆಗಿದ್ದಾರೆ. ಸದ್ಯ ಈ ಪೋಸ್ಟರ್ ಸಖತ್ ವೈರಲ್ ಆಗ್ತಿದೆ.

Source: newsfirstlive.com Source link