ಮಂತ್ರ ಹೇಳುತ್ತಲೇ ಕೊಡ್ತಿದ್ದ ‘ಲವ್ ಟಾನಿಕ್’; ಮೂವರು ಪತ್ನಿ ಹೊಂದಿದ್ದ ಮೋಸಗಾರನ ‘ಅಸಲಿ ಪ್ರೀತಿಯ ಕಥೆ’

ಮಂತ್ರ ಹೇಳುತ್ತಲೇ ಕೊಡ್ತಿದ್ದ ‘ಲವ್ ಟಾನಿಕ್’; ಮೂವರು ಪತ್ನಿ ಹೊಂದಿದ್ದ ಮೋಸಗಾರನ ‘ಅಸಲಿ ಪ್ರೀತಿಯ ಕಥೆ’

ಚಿಕ್ಕಮಗಳೂರು: ಮೂವರು ಪತ್ನಿಯರನ್ನು ಬಿಟ್ಟು ಭೂಪನೋರ್ವ ನಾಲ್ಕನೇ ಮದುವೆಗೆ ಸಿದ್ಧನಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಯೂಸುಫ್ ಹೈದರ್ ಎಂಬಾತ ಮೂವರು ಪತ್ನಿಯರಿಗೆ ವಂಚನೆ ಮಾಡಿ ನಾಲ್ಕನೇ ಮದುವೆಗೆ ಓಡಿ ಹೋಗಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ.

ತಲೆಗೆ ಟೋಪಿ ಹಾಕಿಕೊಂಡು ಮೇಲಿನ ಫೋಟೋ ಫ್ರೇಮ್​ನಲ್ಲಿರುವ ಈ ವ್ಯಕ್ತಿಯ ಹೆಸರು ಯೂಸೂಫ್ ಹೈದರ್. ಇವನು ಅಂತಿತಹ ಗಿರಾಕಿ ಅಲ್ಲ.. ಒಮ್ಮೆ ಕ್ಯಾನ್ಸರ್​ಗೆ ಔಷಧಿ ಕೊಡೋ ಡಾಕ್ಟರ್ ಆಗ್ತಾನೆ.. ಮತ್ತೊಮ್ಮೆ ಮಂತ್ರವಾದಿಯಾಗ್ತಾನೆ.. ಮಗದೊಮ್ಮೆ ಧರ್ಮಗುರುವಿನ ವೇಷ ಕೂಡ ಧರಿಸ್ತಾನೆ.

ಇದನ್ನೂ ಓದಿ:ತಮ್ಮದೇ ಮನೆ ಕ್ಲೀನ್​​ ಮಾಡಿಕೊಂಡ ಹಾಟ್ ಬ್ಯೂಟಿ.. ಇವಱರು ನೆನಪಿದ್ಯಾ?!

blank
ಆರೋಪಿ

ಹೇಳಿಕೊಳ್ಳೋಕೆ ಧರ್ಮಗುರು ಈ ಯೂಸುಫ್ ಹೈದರ್
ಹುಡುಗಿಯರನ್ನ ಪಟಾಯಿಸುದರಲ್ಲಿ ಇವನು ಪಂಟರ್
ನಾಲ್ಕು ಹೆಂಡತಿಯರ ಮುದ್ದಿನ ಗಂಡ ಮಾಡಿದ್ದೇನು?

ಮಂತ್ರವಾದಿಯಂತೆ ಮಂತ್ರವಾದಿ. ಈ ಹೈದರ್ ಮಂತ್ರ ಹೇಳೋಕೆ ಕೂತ್ರೆ ಭಕ್ತ ಸಮೂಹವೇ ಪ್ರಾರ್ಥನೆಯಲ್ಲಿ ಮುಳುಗಿ ಹೋಗಬೇಕು. ದೇವರೇ ಪ್ರತ್ಯಕ್ಷನಾಗಿ ಹೇಳಿ “ಯೂಸುಫ್​.. ಏನ್ ವರ ಬೇಕೆಂದು ಕೇಳಬೇಕು”. ಹೀಗೆ ಮಂತ್ರ ಹೇಳುತ್ತಾ ಯುವತಿಯರನ್ನ ಪಟಾಯಿಸುತ್ತಿದ್ದ ಈ ಆಸಾಮಿಯ ಭಕ್ತಿಗೆ , ಆ ದೇವರು ಮೆಚ್ಚಿದ್ನೋ ಇಲ್ವೋ ಗೊತ್ತಿಲ್ಲ.. ಆದ್ರೆ ಮೂವರು ಯುವತಿಯರು ಮಾತ್ರ ಈ ಭಕ್ತಿಗೆ ಮೆಚ್ಚಿ ಇಂದು ಬೀದಿಪಾಲಾಗಿದ್ದು ನಿಜ..

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಸುನೀಗುತ್ತಿವೆ ಕಂದಮ್ಮಗಳು.. ದಯನೀಯ ಸ್ಥಿತಿ ತಲುಪಿದ ಅಲ್ಪಸಂಖ್ಯಾತರ ಪಾಡು

ಮಂತ್ರ ಹೇಳುತ್ತಲೆ ಹುಡುಗಿಯರನ್ನ ಬಲೆಗೆ ಬೀಳಿಸುತ್ತಿದ್ದ
ಮೂವರ ಜೊತೆ ಮದುವೆ, ಮತ್ತೊಬ್ಬಳ ಜೊತೆ ಎಸ್ಕೇಪ್
ಬಡ ಹೆಣ್ಣುಮಕ್ಕಳೇ ಈ ಯೂಸುಫ್ ಹೈದರ್​​ನ ಟಾರ್ಗೆಟ್

ನಿಜಕ್ಕೂ ಇವ್ನೇ ಬೇರೆ,.. ಇವನು ಯುವತಿಯನ್ನ ಪಟಾಯಿಸುತ್ತಿದ್ದ ಸ್ಟೈಲೈ ಬೇರೆ. ಒಂದಲ್ಲ ಎರಡಲ್ಲ.. ಬರೋಬ್ಬರಿ ನಾಲ್ಕು ಮದುವೆಯಾಗಿರೋ ಇವನ ಸ್ಟೋರಿ ಆರಂಭವಾಗುವುದು ಕಾಫಿ ನಾಡು ಚಿಕ್ಕಮಗಳೂರಿನಿಂದ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಅಕ್ಷರನಗರದ ಸೋ ಕಾಲ್ಡ್ ಈ ಧರ್ಮ ಗುರು ಈ ಯೂಸುಫ್ ಹೈದರ್.. ಮಂತ್ರ ತಂತ್ರ ಕುತಂತ್ರ ಮಾಡಿ ನಾಲ್ವರು ಯುವತಿಯರನ್ನ ಅದೇಗೆ ವಂಚಿಸಿದ್ದಾನೆ ನೋಡಿ.. ಬಡ ಕುಟುಂಬದ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡ್ತಿದ್ದ ಇವನು, ಅಲ್ಲಿ ತರ ತರಹದ ಮಂತ್ರ ಕುತಂತ್ರ ಮಾಡಿ ಹುಡುಗಿಯರನ್ನ ತನ್ನ ಬಲೆಗೆ ಬೀಳಿಸುತ್ತಿದ್ದ. ಒಬ್ಬರ ಜೊತೆ ಮದುವೆ ಒಂದು ವರ್ಷ ಸಂಸರಾ.. ಮತ್ತೊಬ್ಬರ ​ ಆರು ತಿಂಗಳ ಸಂಸಾರ. ಹೀಗೆ ಟೈಂ ಫಿಕ್ಸ್​​ ಮಾಡಿ ಸಂಸಾರ ನಡೆಸುವುದೇ ಈ ಮಳ್ಳನ ಕಾಯಕ .

ಇದನ್ನೂ ಓದಿ: 27ರ ಹರೆಯದ ಬಾಯ್​​ಫ್ರೆಂಡ್​ ತುಟಿಗೆ ತುಟಿಯೊತ್ತಿ 63ನೇ ಬರ್ತ್​ಡೇ ಆಚರಿಸಿಕೊಂಡ ಪಾಪ್​ ಕ್ವೀನ್ ಮಡೋನಾ..!

blank

ನಾಲ್ವರನ್ನ ಬಲೆಗೆ ಬೀಳಿಸಿದ್ದೇಗೆ?
ಮೂರು ಯುವತಿಯರಿಗೆ ಮಕ್ಮಲ್ ಟೋಪಿ ಹಾಕಿದ್ದ ಈ ಟೋಪಿವಾಲ, ಮಾಟ ಮಂತ್ರ ಮಾಡಿನೇ ಹುಡುಗಿಯರೇ ತನ್ನತ್ತ ವಾಲುವಂತೆ ಮಾಡ್ತಿದ್ದ. ಆರಂಭದಲ್ಲಿ ಸಕಲೇಶಪುರದ ಹುಡುಗಿಯನ್ನು ಮದುವೆಯಾದ ಈ ಆಸಾಮಿ ಎರಡು ವರ್ಷ ಸಂಸಾರ ಮಾಡಿದ್ದ. ಆದ್ರೆ ಎರಡು ವರ್ಷದ ನಂತರ ಈ ಮಳ್ಳನಿಗೆ ಸಂಸಾರ ಬೋರಾಯ್ತು ಅನ್ಸುತ್ತೆ.. ಇಬ್ಬರು ಮಕ್ಕಳನ್ನ ಕೊಟ್ಟು ಅಲ್ಲಿಂದ ಕಾಲೆತ್ತಿದ್ದ. ನಂತರ ಸೋ ಕಾಲ್ಡ್ ಈ ಧರ್ಮ ಗುರು ,ಮೂಡಿಗೆರೆಯಲ್ಲಿ ಹೊಸ ಬಿಸಿನೆಸ್ ಶುರು ಮಾಡ್ಕೊಂಡಿದ್ದ. ನನ್ನ ಬಳಿ ಕ್ಯಾನ್ಸರ್​​ಗೆ ಮದ್ದು ಇದೆ ಅನ್ನುತ್ತಿದ್ದ ಇವನು, ಮದ್ದು ಕೊಡುವ ಸೋಗಿನಲ್ಲಿ ಜನರಿಗೆ ಹತ್ತಿರವಾಗ್ತಿದ್ದ. ನಂತರ ಮಾಟ, ಮಂತ್ರ ,ಮದ್ದು ಎಂದು ಹೇಳಿ ಮನೆಗಳಿಗೆ ಎಂಟ್ರಿ ಕೊಡ್ತಿದ್ದ. ಹೀಗೆ ಅದ್ಯಾರದ್ದೋ ಮನೆಗೆ ಹೋದ ಸಂದರ್ಭದಲ್ಲಿ ಅದೊಬ್ಬಳ ಯುವತಿಯ ಮೇಲೆ ಇವನ ಕೆಟ್ಟ ಕಣ್ಣು ಬಿದ್ದಿತ್ತು. ಹೇಗಾದ್ರು ಮಾಡಿ ಆ ಯುವತಿಯನ್ನ ತನ್ನ ಬಲೆಗೆ ಬೀಳಿಸ್​ಬೇಕು ಅನ್ಕೊಂಡ ಇವ್ನು ,ಹೊಸ ಮಂತ್ರವಾದಿಯ ರೂಪ ತಾಳಿದ್ದ. ಸುಂದರ ಸಂಸಾರಕ್ಕೆ ಹುಳಿ ಹಿಂಡಿ ಬಿಟ್ಟಿದ್ದ. ತಾನು ಕಣ್ಣಾಕಿದ್ದ ಯುವತಿಯನ್ನ ಆಕೆಯ ಗಂಡನಿಗೆ ಡೆವರ್ಸ್​ ಕೊಡುವಂತೆ ಮಾಡಿ, ನಂತರ ಆಕೆಯ ಜೊತೆ ಪ್ರಣಯ ಶುರುಮಾಡ್ಕೊಂಡಿದ್ದ.. ಅಷ್ಟೇ ಅಲ್ಲ.. ಮುಂದೇ ಅದೇ ಯುವತಿಯನ್ನ ತಾನೆ ಮದುವೆಯಾಗಿ ಸಂಸಾರ ಮಾಡಿದ್ದ ಎನ್ನಲಾಗಿದೆ. ಮೂಡಿಗೆರೆಯ ಯುವತಿಗೂ ಕೈ ಕೊಟ್ಟ ಈ ಆಸಾಮಿ ನಂತರ ಮೂರನೇ ಮದುವೆಯಾಗಿದ್ದ. ಊರಿನಲ್ಲಿದ್ದ ಅನಾಥ ಹೆಣ್ಣುಮಗುವಿಗೆ ಬಾಳು ಕೊಡುವುದಾಗಿ ಹೇಳಿ,ಆಕೆಯನ್ನ ವರಿಸಿದ್ದ. ಮದುವೆಯಾಗಿ ಆರು ತಿಂಗಳು ಅಷ್ಟೇ.. ಆಕೆಗೆ ಕೊಡ್ಬಾರ್ದಾ ಟಾರ್ಚರ್ ಕೊಟ್ಟು ಅಲ್ಲಿಂದಲೂ ಪಲಾಯನ ಗೈದಿದ್ದ.. ಹೀಗೆ ಮೂರು ಮದುವೆಯಾಗಿನೂ ಸುಮ್ಮನಾಗದ ಈ ಚಟಾಧೀಶ್ವರ ಆಗಸ್ಟ್​ 16 ರಂದು ಮತ್ತೊಬ್ಬಳು ಯುವತಿಯ ಜೊತೆ ಎಸ್ಕೇಪ್ ಆಗಿದ್ಧಾನೆ. ಮದುವೆಯಾಗಿದ್ದ ಕಳಸದ ಯುವತಿಯ ಜೊತೆ ಓಡಿ ಹೋಗಿದ್ದಾನೆ.

ಈ ಪುಣ್ಯಾತ್ಮನ ಮಂತ್ರಕ್ಕೆ ಯುವತಿಯರು ತನ್ನ ಗಂಡನನ್ನ ಬಿಟ್ಟು ಇವ್ನ ಜೊತೆ ಓಡಿ ಹೋಗ್ತಾರೆ ಅಂದ್ರೆ, ಈತ ಅದ್ಯಾವ ರೀತಿಯ ಮಂತ್ರ ಪಟಿಸಿದ್ದ ಅನ್ನೋದನ್ನ ನೀವೇ ಯೋಚ್ನೇ ಮಾಡಿ.. ಆಗಸ್ಟ್​ 16 ರಂದು ಕಳಸದ ಯುವತಿಯ ಜೊತೆ ಓಡಿ ಹೋದ ಈ ಯೂಸುಫ್ ಹೈದರ್ ವಿರುದ್ಧ ಯುವತಿಯ ತಂದೆನೇ ಇದೀಗ ಕಳಸ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.

blank

ಧರ್ಮಗುರುವಿನ ಹಿಂದೆ ಇದೆಯಂತೆ ದೊಡ್ಡ ಗ್ಯಾಂಗ್
ಅಮಾಯಕ ಯುವತಿಯರ ಬಾಳಲ್ಲಿ ಚೆಲ್ಲಾಟವಾಡ್ತಿರುವ ಈ ಪುಣ್ಯಾತ್ಮನ ಹಿಂದೆ ದೊಡ್ಡ ಗ್ಯಾಂಗ್ ಇದೆ . ಇವನ ಹಿಂದಿರುವ ಗ್ಯಾಂಗ್, ಆತ ಮೋಸ ಮಾಡಿದ್ದ ಕಡೆಯಲ್ಲೆಲ್ಲಾ ಹೋಗಿ ದುಡ್ಡು ಕೊಟ್ಟು ಕೇಸ್ ಕೊಡದಂತೆ ಮ್ಯಾಟರ್ ಕ್ಲೋಸ್ ಮಾಡ್ತಾರೆ ಅನ್ನೋದು , ದೂರುದಾರರಾಗಿರುವ ರಜಾಕ್ ಅವರ ಆರೋಪ. ಇದೀಗ ಕಳಸದ ಯುವತಿಯ ಜೊತೆ ಎಸ್ಕೇಪ್ ಆಗಿರುವ ಈ ಯೂಸುಫ್ ಹೈದರ್ ವಿರುದ್ಧ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಇವ್ನ ವಿರುದ್ಧ ಹಾಸನ ಎನ್​​.ಆರ್​​ ಪುರ ಮೂಡಿಗೆರೆಯಲ್ಲಿ ನ್ಯಾಯಾಲಯ ಗಳಲ್ಲಿ ಕೂಡ ಇವ್ನ ವಿರುದ್ಧ ಕೇಸ್​ಗಳಿವೆ.

ಇದನ್ನೂ ಓದಿ: 4 ವರ್ಷ ಸಂಸಾರ ಮಾಡಿ..ಇನ್ನೊಂದು ಮದುವೆಯಾದ ಪತ್ನಿ.. ಹಾಸ್ಯನಟ ಕಂಗಾಲು..!

ಒಟ್ಟಾರೆ ಮೂರನೇ ಮದುವೆಯಾಗಿ ನಾಲ್ಕನೇ ಮದುವೆಯಾಗೋಕೆ ಹೊರಟ್ಟಿದ್ದಾನೆ ಅನ್ನೋ ಆರೋಪ ಇವ್ನ ಮೇಲೆ ಕೇಳಿ ಬಂದಿದ್ದು, ಇದೀಗ ಈತನ ಹುಡುಕಾಟ ನಡೆಸುತ್ತಿದ್ದಾರೆ. ನಾಲ್ವರು ಹೆಂಡತಿಯರ ಮುದ್ದಿನ ಗಂಡನಿಗೆ ಪೊಲೀಸರು ಕೂಡ ಬಲೆ ಬೀಸಿ ಬಂಧಿಸಿದ್ದಾರೆ. ಸದ್ಯ ತನಿಖೆ ನಡೆಸುತ್ತಿರೋ ಪೊಲೀಸರು ಆತನಿಗೆ ಮಾಹಿತಿ ಕಲೆ ಹಾಕೋದಕ್ಕೆ ಮುಂದಾಗಿದ್ದಾರೆ. ಬಳಿಕ ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರ ಬರುವ ಸಾಧ್ಯತೆ ಇದೆ.

blank

ಇಂತವರು ಜೈಲಲ್ಲಿದ್ರೆ ನೆಮ್ಮದಿ. ಇದ್ರಿಂದ ಮತ್ತಷ್ಟು ಅಮಾಯಕರ ಜೀವನ ಬರ್ಬಾದ್ ಆಗೋದು ತಪ್ಪುತ್ತೆ. ಇವನು ಇನ್ನು ಎಲ್ಲೆಲ್ಲಿ ಕದ್ದು ಮುಚ್ಚಿ ಮದುವೆಯಾಗಿದ್ದಾನೆ ಅನ್ನೋದು ಪೊಲೀಸ್ ತನಿಖೆಯಿಂದಷ್ಟೇ ಹೊರ ಬರಬೇಕಾಗಿದೆ. ಇಂಥವರು ಸುಮಾರು ಮಂದಿ ಇದ್ದಾರೆ, ಇಂಥವರನ್ನ ನಂಬಿ ಮೋಸ ಹೋಗದೆ ಇರಲಿ ಅನ್ನೋದೆ ನಮ್ಮ ಆಶಯ.

ಇದನ್ನೂ ಓದಿ: ಮೂವರು ಪತ್ನಿಯರಿಗೆ ಮೋಸ ಮಾಡಿ 4ನೇ ಮದುವೆಗೆ ರೆಡಿಯಾದ ಭೂಪ; ಪ್ರೇಯಸಿ ಜತೆಗೆ ಎಸ್ಕೇಪ್

Source: newsfirstlive.com Source link