ಪಾಕ್‌, ಚೀನಾ ತಂತ್ರ ಅರಿಯಲು ಫೇಲ್: ಅಫ್ಘಾನ್ ಪ್ರಜೆಗಳ ನಡು ನೀರಲ್ಲಿ ಕೈಬಿಟ್ಟ ಅಮೆರಿಕ

ಪಾಕ್‌, ಚೀನಾ ತಂತ್ರ ಅರಿಯಲು ಫೇಲ್: ಅಫ್ಘಾನ್ ಪ್ರಜೆಗಳ ನಡು ನೀರಲ್ಲಿ ಕೈಬಿಟ್ಟ ಅಮೆರಿಕ

ಅಮೆರಿಕ ಮಾಡಿದ ಎಡವಟ್ಟಿನಿಂದ ಇಂದು ಅಫ್ಘಾನ್‌ ತಾಲಿಬಾನಿಗಳ ವಶವಾಗಿದೆ. ಅಷ್ಟೇ ಅಲ್ಲ, ಪಾಕಿಸ್ತಾನವನ್ನು ನಂಬಿದ ಅಮೆರಿಕ ಮತ್ತೊಮ್ಮೆ ಹಳ್ಳಕ್ಕೆ ಬಿದ್ದಿದೆ. ಇದರ ಪರಿಣಾಮ ಅಫ್ಘಾನ್‌ನ ಸಾಮಾನ್ಯ ನಾಗರಿಕರು ಅಕ್ಷರಶಃ ನರಕ ಅನುಭವಿಸುತ್ತಿದ್ದಾರೆ. ಅಷ್ಟಕ್ಕೂ ದೊಡ್ಡಣ್ಣ ಮಾಡಿದ ಆ ಎಡವಟ್ಟುಗಳು ಏನು? ಅದರಿಂದಾದ ದುಷ್ಪರಿಣಾಮ ಏನು?

blank

ದೊಡ್ಡಣ್ಣ.. ಸೂಪರ್ ಪವರ್​​.. ಸೂಪರ್ ರಿಚ್​​.. ಪಕ್ಕಾ ಮ್ಯಾಡ್.. ಹೀಗೆ ಇದಕ್ಕಿದ್ದ ವಿಭಿನ್ನ ಬ್ರಾಂಡ್​​ಗಳನ್ನ ಅಫ್ಘಾನಿಸ್ತಾನ ಬೆಳವಣಿಗೆ ಮಣ್ಣುಪಾಲು ಮಾಡಿ ಬಿಟ್ಟಿದೆಯಾ? ಅಷ್ಟಕ್ಕೂ ತನ್ನ ಬ್ರಾಂಡ್​ ಅನ್ನೇ ರಿಸ್ಕ್​​ಗೆ ಒಡ್ಡಿದ್ದು ಯಾಕೆ ಅಮೆರಿಕಾ? ಇನ್​ಫ್ಯಾಕ್ಟ್​ ಅಮೆರಿಕಾ ಮಾಡಿದ ಆ ಮೂರು ಯಡಟವಟ್ಟುಗಳು.. ನೂರು ವರ್ಷದಿಂದ ಇದು ಗಳಿಸಿಕೊಂಡಿದ್ದ ಬ್ರಾಂಡ್​​ ವ್ಯಾಲ್ಯೂವನ್ನ ನೆಗೆಟಿವ್​ಗೆ ತೆಗೆದುಕೊಂಡು ಹೋಗಿ ಬಿಟ್ಟಿದೆಯಾ? ಹೌದು, ಅಂತಿದೆ ಇಡೀ ಜಗತ್ತು..! ಹಾಗಿದ್ರೆ ಅಮೆರಿಕಾ ಮಾಡಿದ ಯಡವಟ್ಟಾದ್ರೂ ಏನು? ಅದನ್ನು ಹೇಳ್ತೀವಿ ಅದಕ್ಕೂ ಮುನ್ನ ಪಾಕಿಸ್ತಾನ ನಂಬಿ ಅಮೆರಿಕ ತನ್ನ ಬ್ರಾಂಡ್‌ ವ್ಯಲ್ಯೂ ಕೆಳೆದುಕೊಂಡಿದ್ದು ಹೇಗೆ ಅಂತ ಹೇಳ್ತೀವಿ ನೋಡಿ.

blank

ತಾಲಿಬಾನಿಗಳಿಗೆ ನೆರವು ನೀಡಿದ್ದೇ ಪಾಕಿಸ್ತಾನ
ಒಳಗಿನಿಂದಲೇ ಇತ್ತು ಡ್ರ್ಯಾಗನ್‌ ಚೀನಾ ನೆರವು
ಪಾಕ್‌, ಚೀನಾ ನಡೆ ಗುರುತಿಸುವಲ್ಲಿ ಅಮೆರಿಕ ಎಡವಿತಾ?

ಅಮೆರಿಕ ಸೇನೆ 20 ವರ್ಷಗಳ ಕಾಲ ತಾಲಿಬಾನ್‌ ವಿರುದ್ಧ ದಾಳಿ ನಡೆಸುತ್ತಿತ್ತು. ಆದ್ರೂ ತಾಲಿಬಾನಿಗಳನ್ನು ಮಟ್ಟಹಾಕಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ಅಮೆರಿಕ ಸೇನೆ ವಾಪಸ್‌ ಆದ ತಕ್ಷಣವೇ ಅಫ್ಘಾನ್‌ ತಾಲಿಬಾನಿಗಳ ವಶವಾಯ್ತು. ಹಾಗಾದ್ರೆ, ತಾಲಿಬಾನಿಗಳಿಗೆ ಅಷ್ಟೊಂದು ಶಕ್ತಿ ತುಂಬಿದವರು ಯಾರು? ಅಷ್ಟೊಂದು ಶಸ್ತ್ರಾಸ್ತ್ರ ಪೂರೈಸಿದವರು ಯಾರು? ಗುಪ್ತದಳ ಮಾಹಿತಿ ಕೊಟ್ಟವರು ಯಾರು? ಇಂತಹ ಹತ್ತಾರು ಪ್ರಶ್ನೆಗಳು ಎದುರಾಗುತ್ತವೆ. ಇದೆಲ್ಲದ್ದಕ್ಕೂ ಉತ್ತರ ಪಾಕಿಸ್ತಾನ ಮತ್ತು ಚೀನಾ ಅನ್ನೋದ್ರಲ್ಲಿ ಯಾವುದೇ ಡೌಟ್‌ ಇಲ್ಲ. ಪಾಕಿಸ್ತಾನದ ಐಎಸ್‌ಐ ಕಾಲಕಾಲಕ್ಕೆ ತಾಲಿಬಾನಿಗಳಿಗೆ ಗುಪ್ತಚರ ಮಾಹಿತಿ ರವಾನಿಸುತ್ತಿತ್ತು. ಪಾಕ್‌ ಹಿಂದೆ ಚೀನಾ ಇತ್ತು. ಆದ್ರೆ, ಈ ನಡೆಯನ್ನು ಗುರುತಿಸಲಾಗದೇ ದೊಡ್ಡಣ್ಣ ಪಲ್ಟಿ ಹೊಡಿದ್ದಾನೆ. ದುರಾದೃಷ್ಯ ಅಂದ್ರೆ, ಪಾಕಿಸ್ತಾನದ ಕುತಂತ್ರ ನಡೆ ಗೊತ್ತಿದ್ರೂ ಎಡವಿದ್ದು ಅಚ್ಚರಿ ತಂದಿದೆ. ಜೊತೆಗೆ ವಿಶ್ವದಲ್ಲಿ ತನ್ನ ಬ್ರಾಂಡ್‌ ಮೌಲ್ಯವನ್ನು ಮಣ್ಣುಪಾಲು ಮಾಡಿಕೊಂಡಿದೆ. ಆದ್ರೆ, ಈಗ ನೆಪಮಾತ್ರಕ್ಕೆ ಅಮೆರಿಕ ವೈಫಲ್ಯದ ಬಗ್ಗೆ ಕೆಲವೊಂದಷ್ಟು ಗೂಬೆ ಕೂರಿಸುವ ಕೆಲಸಗಳು ನಡೆಯುತ್ತಿವೆ.

blank

ಅಫ್ಘಾನ್‌ ಸೇನೆ ಮೇಲೆ ನಂಬಿಕೆ ಇಟ್ಟು ಹಿಂದೆ ಸರಿಯಿತಂತೆ?

ಅಮೆರಿಕ ಸೇನೆ ಮಾಡಿದ ಮೊದಲನೇ ಎಡವಟ್ಟು ಅಂದ್ರೆ, ಅಫ್ಘಾನ್‌ ಸೇನೆಯ ಮೇಲೆ ಅತಿಯಾದ ನಂಬಿಕೆ ಇಟ್ಟುಕೊಂಡಿದ್ದು ಅಂತ ಹೇಳಲಾಗುತ್ತಿದೆ. ತಮ್ಮ ಸೇನೆಯನ್ನು ವಾಪಸ್‌ ಪಡೆದ್ರೆ ತಾಲಿಬಾನಿ ಉಗ್ರರ ದಾಳಿ ಜೋರಾಗುತ್ತೆ ಅನ್ನೋ ಅರಿವು ಅಮೆರಿಕಗೆ ಇತ್ತು. ಆದ್ರೆ, ಅಫ್ಘಾನ್‌ ಸೇನಾ ಪಡೆ ತಾಲಿಬಾನಿಗಳ ವಿರುದ್ಧ ಹೋರಾಡುತ್ತದೆ. ಅಷ್ಟು ಸುಲಭದಲ್ಲಿ ತಾಲಿಬಾನಿಗಳಿಗೆ ಅಫ್ಘಾನ್‌ ವಶಪಡಿಸಿಕೊಳ್ಳಲು ಬಿಟ್ಟುಕೊಡುವುದಿಲ್ಲ ಅಂತ ನಂಬಿಕೊಂಡಿತ್ತಂತೆ. ಇದೇ ಕಾರಣಕ್ಕೆ ಅಮೆರಿಕ ತನ್ನ ಸೇನೆಯನ್ನು ವಾಪಸ್‌ ಪಡೆದಿತ್ತಂತೆ. 20 ವರ್ಷಗಳ ಕಾಲ ಅಫ್ಘಾನ್‌ನಲ್ಲಿ ಬೀಡು ಬಿಟ್ಟಿದ್ದ ಅಮೆರಿಕಗೆ ಅಫ್ಘಾನ್‌ ಸೇನೆಯ ಶಕ್ತಿಯ ಇಂಚಿಂಚೂ ಮಾಹಿತಿಯೂ ಇತ್ತು. ಆದ್ರೆ, ಅಫ್ಘಾನ್‌ ಸೇನೆಯ ಮೇಲೆ ಅತಿಯಾದ ನಂಬಿಕೆ ಇಟ್ಟುಕೊಂಡಿತ್ತು ಅನ್ನೋ ಕುಂಟು ನೆಪವನ್ನು ಹೇಳಲಾಗುತ್ತಿದೆ. ಅಂತಾರಾಷ್ಟ್ರೀಯ ಮಧ್ಯಮಗಳಲ್ಲಿ ಅದನ್ನೇ ವಿಶ್ಲೆಷಣೆ ಮಾಡಲಾಗುತ್ತಿದೆ.

blank

ಅಶ್ರಫ್‌ ಘನಿ ಮೇಲೆ ನಂಬಿಕೆ ಇಟ್ಟು ಹಿಂದೆ ಸರಿಯಲಾಯ್ತಾ?

ಅಮೆರಿಕ ಮಾಡಿರೋ ಮತ್ತೊಂದು ಪ್ರಮುಖ ಎಡವಟ್ಟು ಅಂದ್ರೆ, ಅಫ್ಘಾನ್‌ ಅಧ್ಯಕ್ಷನಾಗಿದ್ದ ಅಶ್ರಫ್‌ ಘನಿಯ ಮೇಲೆ ನಂಬಿಕೆ ಇಟ್ಟಿದ್ದು ಅಂತ ಹೇಳಲಾಗುತ್ತಿದೆ. 2014 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದ ಅಶ್ರಫ್‌ ಘನಿ ಖಡಕ್‌ ನಾಯಕ ಅಂತಲೇ ಅಮೆರಿಕ ನಂಬಿಕೆ ಇಟ್ಟಿತ್ತು. ತಾಲಿಬಾನಿಗಳ ವಿರುದ್ಧ ಹೋರಾಟ ಮಾಡುತ್ತಾರೆ, ಅಫ್ಘಾನ್‌ ವಶಪಡಿಸಿಕೊಳ್ಳಲು ಉಗ್ರರಿಗೆ ನೀಡುವುದಿಲ್ಲ. ಶಾಂತಿ ಸ್ಥಾಪನೆಯನ್ನು ಕಾಯ್ದುಕೊಳ್ಳುತ್ತಾರೆ ಅಂತ ನಂಬಿಕೆ ಇಟ್ಟಿತ್ತು ಅಂಥ ಹೇಳಲಾಗುತ್ತಿದೆ. ಆದ್ರೆ, ವಾಸ್ತವಾಂಶವೇ ಬೇರೆ ಇದೆ, ಅಶ್ರಫ್‌ ಘನಿಯ ಆಡಳಿತ ವೈಖರಿ ಏನು? ಆತನ ಸಾಮರ್ಥ್ಯ ಏನು ಅನ್ನೋದು ಕೂಡ ಅಮೆರಿಕಾಗೆ ಗೊತ್ತಿತ್ತು. ಹಾಗಿದ್ದ ಮೇಲೆ ಏಕಾಏಕಿ ಸೇನೆಯನ್ನು ವಾಪಸ್‌ ಪಡೆದಿದ್ದು ಯಾಕೆ ಅನ್ನೋ ಪ್ರಶ್ನೆ ಮೂಡಿದೆ.

ತಾಲಿಬಾನಿಗಳ ಪ್ರಾಬಲ್ಯದ ಬಗ್ಗೆ ಸ್ಪಷ್ಟ ಅರಿವು ಇರಲಿಲ್ವ?
ಅಮೆರಿಕ ಮಾಡಿರೋ ಮತ್ತೊಂದು ಎಡವಟ್ಟು ಅಂದ್ರೆ, ತಾಲಿಬಾನಿಗಳ ಪ್ರಾಬಲ್ಯದ ಬಗ್ಗೆ ಸ್ಪಷ್ಟ ಅರಿವು ಹೊಂದಿಲ್ಲದಿರುವುದು. 20 ವರ್ಷಗಳ ಕಾಲ ತಾಲಿಬಾನಿಗಳ ಶಿಬಿರಗಳ ಮೇಲೆ ದಾಳಿ ನಡೆಸಲಾಗಿತ್ತು. ಸಾವಿರಾರು ತಾಲಿಬಾನಿಗಳನ್ನು ಸಾಯಿಸಲಾಗಿತ್ತು. ಆದ್ರೆ, ತಾಲಿಬಾನಿಗಳು ಪ್ರತಿರೋಧ ತೋರುತ್ತಲೇ ಇದ್ರು. ಮತ್ತೊಂದೆಡೆ ಪಾಕಿಸ್ತಾನ, ಚೀನಾ ಒಳಗಿಂದೊಳಗೆ ತಾಲಿಬಾನಿಗಳಿಗೆ ಬೆಂಬಲ ನೀಡುತ್ತಿತ್ತು. ಇದೀಗ ಅಮೆರಿಕ ಮಾಡಿದ ಎಡವಟ್ಟುಗಳಿಂದ ಇಂದು ಅಫ್ಘಾನ್‌ನ ಸಾಮಾನ್ಯ ನಾಗರಿಕರು ನರಕ ಅನುಭವಿಸಬೇಕಾಗಿದೆ.

ಸೇನೆ ವಾಪಸ್‌ ಪಡೆಯುವಾಗ ಅಮೆರಿಕ ಏನು ಮಾಡ್ಬೇಕಿತ್ತು?
ಅಫ್ಘಾನ್‌ ಜನರನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದೇಕೆ?

ಖರ್ಚು ವೆಚ್ಚ ಹೆಚ್ಚಾಗುತ್ತಿದೆ, ತನ್ನ ದೇಶದ ಮೇಲೆ ಆರ್ಥಿಕ ಹೊರ ಬೀಳುತ್ತಿದೆ. ಯಾವುದೋ ದೇಶಕ್ಕಾಗಿ ತನ್ನ ದೇಶದ ಸೈನಿಕರನ್ನು ಯಾಕೆ ಕಳೆದುಕೊಳ್ಳಬೇಕು ಅನ್ನೋದು ಅಮೆರಿಕದ್ದಾಗಿತ್ತು. ಇದೇ ಕಾರಣಕ್ಕೆ ಅದು ಸೇನೆಯನ್ನು ವಾಪಸ್‌ ಪಡೆದಿದೆ. ಇಲ್ಲಿ ಅಮೆರಿಕ ಸೇನೆ ವಾಪಸ್‌ ಪಡೆದಿರುವುದಕ್ಕೆ ಯಾವುದೇ ಟೀಕೆ ಇಲ್ಲ. ಆದ್ರೆ, ಅದು ವಾಪಸ್‌ ಹೋದ ರೀತಿಗೆ ಟೀಕೆ ಇದೆ. ಹೌದು, ಅಮೆರಿಕ ಸೇನೆ ವಾಪಸ್‌ ಹೋಗುವ ಮುನ್ನ ವ್ಯವಸ್ಥಿತ ಕೆಲಸ ಮಾಡಿ ಹೋಗಬೇಕಿತ್ತು. ಅಂದೇನಂದ್ರೆ, ಮೊದಲನೆದಾಗಿ ಅಫ್ಘಾನ್‌ನಿಂದ ಸೇನೆ ವಾಪಸ್‌ ಪಡೆಯುತ್ತೇವೆ ಅಂತ ಏಕಾಏಕಿ ವಾಪಸ್‌ ಪಡೆಯಬಾರದಿತ್ತು. ಅದರ ಬದಲು ಪರಿಸ್ಥಿತಿ ನೋಡಿಕೊಂಡು ಹಂತಹಂತವಾಗಿ ಸೇನೆಯನ್ನು ವಾಪಸ್‌ ಪಡೆಯಬೇಕಿತ್ತು. ಅಷ್ಟರೊಳಗೆ ಅಫ್ಘಾನ್‌ ಸೈನಿಕರಿಗೆ ತಾಲಿಬಾನಿಗಳ ವಿರುದ್ಧ ಹೋರಾಡಲು ಬೇಕಾದ ಎಲ್ಲಾ ಅಸ್ತ್ರವನ್ನು ನೀಡಬೇಕಿತ್ತು. ಬೇಕಾದ ಗುಪ್ತಚರ ಮಾಹಿತಿಯನ್ನು ನೀಡುವ ಕೆಲಸ ಮಾಡಬೇಕಿತ್ತು. ಅವರಲ್ಲಿ ಆತ್ಮವಿಶ್ವಾಸ ತುಂಬಬೇಕಿತ್ತು. ಆದ್ರೆ, ಅಮೆರಿಕ ಆ ಕೆಲಸ ಮಾಡಲೇ ಇಲ್ಲ. ದಿಢೀರ್‌ ಅಂತ ಸೇನೆ ವಾಪಸ್‌ ಪಡೆದು ಬಿಡ್ತು. ಕಾಟಾಚಾರಕ್ಕೆ ಹಂತಹಂತವಾಗಿ ವಾಪಸ್‌ ಪಡೆಯುತ್ತೇವೆ ಅಂದಿತ್ತು. ಆದ್ರೆ, ಅದು ಹಾಗಾಗಲೇ ಇಲ್ಲ. ಮೊದಲನೇ ಬಾರಿಗೆ ದೊಡ್ಡ ಪ್ರಮಾಣದ ಸೈನಿಕರನ್ನು ವಾಪಸ್‌ ಪಡೆದುಕೊಂಡು ಬಿಡ್ತು. ಇತ್ತ ಅಮೆರಿಕ ಸೇನಾ ಬಲವಿಲ್ಲದೇ ಅಫ್ಘಾನ್‌ ಸೈನಿಕರು ನಲುಗಿ ಹೋಗಿ ಬಿಟ್ರು.

ದೊಡ್ಡಣ್ಣನ ಸ್ಥಾನ ಕಳೆದುಕೊಳ್ಳುತ್ತಾ ಅಮೆರಿಕ?
ಜೋ ಬೈಡನ್‌ ಹೇಳಿಕೆ ಏನನ್ನು ಸೂಚಿಸುತ್ತೆ?

ಕೊರೊನಾ ಸಂಕಷ್ಟದಿಂದ ಅಮೆರಿಕ ನಲುಗಿ ಹೋಗಿದೆ. ಏನೇ ಮಾಡಿದ್ರೂ ಸೋಂಕು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಜಗತ್ತಿನಲ್ಲಿಯೇ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದ್ದು, ಗರಿಷ್ಠ ಸಾವು ಸಂಭವಿಸಿದ್ದು ಅಮೆರಿಕದಲ್ಲಿ. ಇದರಿಂದ ಆರ್ಥಿಕ ಪರಿಸ್ಥಿತಿಯ ಮೇಲೆ ಭಾರೀ ಪರಿಣಾಮ ಬೀರಿದೆ. ಜೊತೆ ಮಿಲಿಟರಿ ವೆಚ್ಚ ವಿಪರೀತವಾಗಿ ಹೆಚ್ಚಾಗುತ್ತಿತ್ತು. ಅಫ್ಘಾನ್‌ವೊಂದರಲ್ಲಿಯೇ ಬರೋಬ್ಬರಿ ಮೂರು ಟ್ರಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಹಣ ವೆಚ್ಚ ವಾಗಿತ್ತು……ಇದೆಲ್ಲದರ ಪರಿಣಾಮವೇ ಅಫ್ಘಾನ್‌ನಿಂದ ಸೇನೆಯನ್ನು ವಾಪಸ್‌ ಪಡೆದಿರುವುದು. ಯಾವುದೇ ದೇಶದಲ್ಲಿ ಅರಾಜಕತೆ ಉಂಟಾದ್ರೆ ಅಲ್ಲಿ ಅಮೆರಿಕ ಎಂಟ್ರಿ ಆಗ್ತಾ ಇತ್ತು. ಅಲ್ಲಿ ಶಾಂತಿ ಸ್ಥಾಪಿಸಲು ಶ್ರಮಿಸುತ್ತಿತ್ತು. ಆದ್ರೆ, ಈಗ ಪರಿಸ್ಥಿತಿ ಬದಲಾಗಿ ಬಿಟ್ಟಿದೆ. ಅಮೆರಿಕದ ಈಗಿನ ನಡೆ ನೋಡಿದ್ರೆ ಅಮೆರಿಕ ತನ್ನ ದೊಡ್ಡಣ್ಣನ ಸ್ಥಾನವನ್ನು ಕಳೆದುಕೊಳ್ಳುವ ಕಾಲ ದೂರ ಇಲ್ಲ.

Source: newsfirstlive.com Source link