ಪಾಕ್ ಮಹಿಳಾ ಟಿಕ್​​ಟಾಕರ್ ಬಟ್ಟೆ ಹರಿದ ಪ್ರಕರಣ- ಟಿಕ್​ಟಾಕ್ ಮಾಡೋಕ್ಕೆ ನಿಷೇಧ ಹೇರಿದ ಸರ್ಕಾರ

ಪಾಕ್ ಮಹಿಳಾ ಟಿಕ್​​ಟಾಕರ್ ಬಟ್ಟೆ ಹರಿದ ಪ್ರಕರಣ- ಟಿಕ್​ಟಾಕ್ ಮಾಡೋಕ್ಕೆ ನಿಷೇಧ ಹೇರಿದ ಸರ್ಕಾರ

ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ದಿನ ಒಬ್ಬ ಯುವತಿ ಮೇಲೆ ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪ್ರಕರಣ ಬೆನ್ನಲ್ಲೇ ಪಾಕ್ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಟಿಕ್​ಟಾಕ್​ ಮಾಡೋದನ್ನ ನಿಷೇಧಿಸಿದೆ. ಟಿಕ್​ಟಾಕ್ ಸ್ಟಾರ್​ಗಳು ವಿಡಿಯೋ ಮಾಡಲು ಸಾರ್ವಜನಿಕ ಸ್ಥಳಗಳಿಗೆ ಬರಬಾರದು ಅಂತಾ ಹೇಳಿದೆ.

ಆಗಸ್ಟ್ 14ರಂದು ಲಾಹೋರ್‌ನ ಮಿನಾರ್-ಇ-ಪಾಕಿಸ್ತಾನದಲ್ಲಿ ಯುವತಿಯೊಬ್ಬಳು ಟಿಕ್​ಟಾಕ್​ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಆಕೆಯ ಮೇಲೆ ನೂರಾರು ಮಂದಿ ದಾಳಿ ನಡೆಸಿದ್ದರು. ಅಲ್ಲದೇ ಆಕೆಯ ಬಟ್ಟೆಗಳನ್ನು ಹರಿದು ಹಾಕಿದ್ದರು. ಆದ್ರೆ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕಾದ ಸರ್ಕಾರ ಸದ್ಯ ಟಿಕ್​​ಟಾಕರ್​​​ಗಳ ಮೇಲೆ ಕ್ರಮಕ್ಕೆ ಮುಂದಾಗಿದೆ. ಇದರಂತೆ ಎಲ್ಲಾ ಟಿಕ್‌ಟಾಕರ್​ಗಳು, ಪಾರ್ಕ್‌ಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ, ಪ್ರವೇಶಿಸುವ ಮುನ್ನ ಪಂಜಾಬ್ ಪಾರ್ಕ್ಸ್ ಮತ್ತು ತೋಟಗಾರಿಕೆ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು ಎಂದು ಹೇಳಿದೆ.

ಕೆಲ ದಿನಗಳ ಹಿಂದೆ ಯುವತಿಯೊಬ್ಬರು ತಮ್ಮ ದೂರಿನಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯಂದು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಲಾಹೋರ್‌ನ ಮಿನಾರ್-ಇ-ಪಾಕಿಸ್ತಾನದಲ್ಲಿ 300-400 ಜನರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು. ಅಲ್ಲದೇ ಘಟನೆ ಸಂಬಂಧ ಆಕೆಯ ಬಟ್ಟೆಗಳು ಹರಿದುಹೋಗಿದ್ದು, ಆಕೆಗೆ ಮೈಯೆಲ್ಲಾ ಗಾಯಗಳಾಗದ್ದವು. ಆಕೆಯನ್ನು ಅಷ್ಟು ಮಂದಿ ಗಾಳಿಯಲ್ಲಿ ತೆಲಿಸಿದ್ದರು ಅಂತಲೂ ತನ್ನ ದೂರಿನಲ್ಲಿ ಯುವತಿ ದೂರಿನಲ್ಲಿ ಹೇಳಿದ್ರು. ಅಷ್ಟೇ ಅಲ್ಲದೇ, ಘಟನೆಯ ವೇಳೆ ತನ್ನ ಜೊತೆಗಿದ್ದ ಆಕೆಯ ಸ್ನೇಹಿತನ ಮೇಲೂ ಹಲ್ಲೆ ನಡೆಸಿದ್ದರು ಅಂತಾ ಆಕೆ ಆರೋಪಿಸಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿತ್ತು.

ಇದನ್ನೂ ಓದಿ: 400ಕ್ಕೂ ಹೆಚ್ಚು ಜನ ನನ್ನ ಬಟ್ಟೆ ಹರಿದು ಹಾಕಿದರು -ಪಾಕಿಗಳ ಕರಾಳ ಮುಖ ಬಿಚ್ಚಿಟ್ಟ ಟಿಕ್​ಟಾಕ್ ಸ್ಟಾರ್

Source: newsfirstlive.com Source link