‘ನನ್ನ ಹೃದಯ ಸದಾ ನಿಮ್ಮೊಂದಿಗೆ ಇರುತ್ತದೆ’.. ಕಣ್ಣೀರಿಟ್ಟು ಅಫ್ಘಾನ್​ನಿಂದ ಪಲಾಯನ ಮಾಡಿದ ಪಾಪ್​ ಸಿಂಗರ್

‘ನನ್ನ ಹೃದಯ ಸದಾ ನಿಮ್ಮೊಂದಿಗೆ ಇರುತ್ತದೆ’.. ಕಣ್ಣೀರಿಟ್ಟು ಅಫ್ಘಾನ್​ನಿಂದ ಪಲಾಯನ ಮಾಡಿದ ಪಾಪ್​ ಸಿಂಗರ್

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗಳ ಅಟ್ಟಹಾಸ ಮುಂದುವರಿದಿದೆ. ಕ್ರೂರತೆಯ ಕರಾಳ ದಿನಗಳನ್ನ ಅಘ್ಫಾನಿಸ್ತಾನರು ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿ ಅಫ್ಘಾನಿಸ್ತಾನದ ಖ್ಯಾತ ಪಾಪ್ ಸಿಂಗರ್​ ಅರ್ಯಾನಾ ಸಯೀದ್​ರವರಿಗೂ ತಪ್ಪಿಲ್ಲ.

ಈ ಹಿನ್ನೆಲೆಯಲ್ಲಿ ಅವರು ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ್ದಾರೆ. ಈ ಸಂಬಂಧ ಭಾವನಾತ್ಮಕ ಪೋಸ್ಟ್ ಒಂದನ್ನ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿ, ತಾಯ್ನಾಡಿನ ಕರುಣಾಜನಕ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಕಾಬೂಲ್ ಅನ್ನ ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಿದ್ದಂತೆಯೇ ತಮ್ಮ ಪತಿಯೊಂದಿಗೆ ಅರ್ಯನಾ ಸಯೀದ್ ದೇಶ ತೊರೆದು ಪ್ರಾಣ ಉಳಿಸಿಕೊಂಡಿದ್ದಾರೆ.

ಈ ವೇಳೆ ಬರೆದ ತಮ್ಮ ಪೋಸ್ಟ್‌ನಲ್ಲಿ  ‘ದೇಶದಲ್ಲಾದ ಭಯಾನಕ ಬದಲಾವಣೆಗಳ ತುಂಬಾ ಪರಿಣಾಮ ಬೀರುತ್ತಿವೆ. ನನ್ನ ಪ್ರೀತಿಯ ಜನರು ಯಾವುದೇ, ಭಯವಿಲ್ಲದೇ, ಶಾಂತಿಯುತ ಜೀವನ ಪ್ರಾರಂಭಿಸಲು ಸಾಧ್ಯವಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಹೃದಯ, ನನ್ನ ಪ್ರಾರ್ಥನೆ ಮತ್ತು ನನ್ನ ಆಲೋಚನೆಗಳು ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಅಫ್ಘಾನಿಸ್ತಾನದಲ್ಲಿ ನನ್ನ ಇರುವಿಕೆಯ ಬಗ್ಗೆ ಕಾಳಜಿ ಹೊಂದಿ ಶುಭ ಹಾರೈಸಿದ ಮತ್ತು ಪ್ರಾರ್ಥನೆ ಮಾಡಿದ್ದ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.

 

Source: newsfirstlive.com Source link