4 ಬೈಕ್ ಕದ್ದು ಜಜ್ಜಿ ಹೊಲದಲ್ಲಿ ಬಿಟ್ಟು ಹೋದ ದುಷ್ಕರ್ಮಿಗಳು

ಚಿಕ್ಕಮಗಳೂರು: ಮನೆ ಮುಂದೆ ನಿಲ್ಲಿಸಿದ್ದ ನಾಲ್ಕ ಬೈಕ್ ಗಳನ್ನ ಕದ್ದ ದುಷ್ಕರ್ಮಿಗಳು ಸಂಪೂರ್ಣ ಜಖಂ ಮಾಡಿ ಹೊಲದಲ್ಲಿ ಬಿಟ್ಟು ಹೋಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ನಿಡಘಟ್ಟ ಗ್ರಾಮದಲ್ಲಿ ನಡೆದಿದೆ.

ನಾಲ್ಕು ಬೈಕ್‍ಗಳನ್ನ ಕದ್ದಿರೋ ದುಷ್ಕರ್ಮಿಗಳು ಕದ್ದು ತೆಗೆದುಕೊಂಡು ಹೋಗಲು ಆಗಿಲ್ಲ. ನಾಲ್ಕೂ ಬೈಕ್‍ಗಳನ್ನೂ ಜಜ್ಜಿ, ಮಾಸ್ಕ್, ಹೆಡ್‍ಲೈಟ್, ಇಂಡಿಕೇಟರ್ ಲೈಟ್, ಪೆಟ್ರೋಲ್ ಟ್ಯಾಂಕ್ ಸೇರಿದಂತೆ ಬೈಕನ್ನ ಸಂಪೂರ್ಣ ಜಖಂ ಮಾಡಿ ಜಜ್ಜಿ ಹೊಲದಲ್ಲಿ ಬಿಟ್ಟು ಹೋಗಿದ್ದಾರೆ. ಮೇಲ್ನೋಟಕ್ಕೆ ಇದು ಕಳ್ಳರ ಕೆಲಸವಲ್ಲ. ಸ್ಥಳೀಯರು ಅಥವಾ ಅಕ್ಕಪಕ್ಕದ ಊರಲ್ಲಿ ಯಾರೋ ಆಗದವರು ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸ್ಥಳೀಯರು ಸಖರಾಯಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

ಒಂದು ಎಕ್ಸ್ ಎಲ್, ಒಂದು ಡಿಯೋ, ಒಂದು ಸಿಡಿ ಡಾನ್ ಹಾಗೂ ಒಂದು ಸ್ಪ್ಲೈಂಡರ್ ಬೈಕ್ ಒಟ್ಟು ನಾಲ್ಕು ಬೈಕ್‍ಗಳನ್ನ ಹೊಲದಲ್ಲಿ ಜಜ್ಜಿ ಬಿಟ್ಟು ಹೋಗಿದ್ದಾರೆ. ದೂರು ದಾಖಲಿಸಿರುವ ಸ್ಥಳೀಯರು ಕೂಡಲೇ ಪೊಲೀಸರು ಯಾರು ಇಂತಹಾ ಕೆಲಸ ಮಾಡಿದ್ದಾರೆ ಎಂಬುದನ್ನ ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಂಡು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಆ. 31ರೊಳಗೆ ನಿಮ್ಮ ಸೇನೆ ಇಲ್ಲಿಂದ ಕಾಲ್ಕಿತ್ತಬೇಕು- ಅಮೆರಿಕಾಗೆ ತಾಲಿಬಾನಿಗಳ ಬೆದರಿಕೆ

Source: publictv.in Source link