ಮಾಲ್ವೀವ್ಸ್​​ನಿಂದ ಮರಳಿದ ಯಡಿಯೂರಪ್ಪರನ್ನ ಕರೆದ್ಯೊಯ್ಯಲು ಬಂದ ಹೊಚ್ಚ ಹೊಸ ‘ರಥ’

ಮಾಲ್ವೀವ್ಸ್​​ನಿಂದ ಮರಳಿದ ಯಡಿಯೂರಪ್ಪರನ್ನ ಕರೆದ್ಯೊಯ್ಯಲು ಬಂದ ಹೊಚ್ಚ ಹೊಸ ‘ರಥ’

ಬೆಂಗಳೂರು: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬೊಮ್ಮಾಯಿಯವರನ್ನು ಗದ್ದುಗೆಗೇರಿಸಿದ ಯಡಿಯೂರಪ್ಪನವರು ವಿದೇಶದಲ್ಲಿ ವಿಶ್ರಾಂತಿ ಪಡೆದು ವಾಪಾಸ್ಸಾಗಿದ್ದಾರೆ. ಮಾಲ್ಡೀವ್ಸ್​​ನಿಂದ ಬರ್ತಿದ್ದಂತೆ ಮಾಜಿ ಮುಖ್ಯಮಂತ್ರಿಗಳು ರಾಜ್ಯ ರಾಜಕಾರಣದ ಪಟ್ಟು ಹಾಕಿದ್ದಾರೆ. ವರಿಷ್ಠರು ಹಾಗೂ ಜನರಿಗೆ ಕೊಟ್ಟಿರುವ ಮಾತಿನಂತೆ ರಾಜ್ಯಪ್ರವಾಸಕ್ಕೆ ಅಣಿಯಾಗಿದ್ದಾರೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬಸವರಾಜ್​​ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ತೆಗೆದುಕೊಂಡ ಬಳಿಕ ಬಿಎಸ್​ವೈ ನಿರಾಳರಾಗಿದ್ರು. ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯುವ ಆಲೋಚನೆಯಲ್ಲಿದ್ರು. ಅದರಂತೆ ಐದಾರು ದಿನಗಲ ಹಿಂದೆ ಮಾಲ್ಡೀವ್ಸ್​ ಪ್ರವಾಸಕ್ಕೆ ತೆರಳಿದ್ರು. ಸಣ್ಣ ಬ್ರೇಕ್​ನ ಬಳಿಕ ಯಡಿಯೂರಪ್ಪನವರು ರಾಜ್ಯಕ್ಕೆ ಮರಳಿದ್ದಾರೆ. ವಿಶೇಷ ಅಂದ್ರೆ, ಮುಖ್ಯಮಂತ್ರಿ ಯಡಿಯೂರಪ್ಪನವರನ್ನ ಕರೆದೊಯ್ಯಲು ಬಂದಿದ್ದ ಹೊಚ್ಚ ಹೊಸ ರಥ ಗಮನ ಸಾಕಷ್ಟು ಸೆಳೆದಿದೆ. ಅಂದಹಾಗೇ, ಪಕ್ಷ ಸಂಘಟನೆಗೆ ಸಕಲ ರೀತಿಯಲ್ಲೂ ಸಜ್ಜಾಗಿರುವ ಯಡಿಯೂರಪ್ಪನವ್ರು, ರಾಜ್ಯ ಪ್ರವಾಸಕ್ಕಾಗಿ ಹೊಸ ಕಾರು ಖರೀದಿಸಿದ್ದಾರೆ.

blank

1 ಕೋಟಿ ರೂಪಾಯಿ ಬೆಲೆ ಬಾಳುವ ಹೊಚ್ಚ ಹೊಸ ಕಾರು ಖರೀದಿ
ಬಿಎಸ್​ವೈಗಾಗಿ ಬರೋಬ್ಬರಿ 1 ಕೋಟಿ ರೂಪಾಯಿ ಬೆಲೆ ಬಾಳುವ ಹೊಚ್ಚ ಹೊಸ ಕಾರು ಖರೀದಿಸಲಾಗಿದ್ದು, ಟೊಯೋಟಾ ಸಂಸ್ಥೆಯ ವೆಲ್​ಫೈರ್ ಎಡಿಷನ್ ಇದಾಗಿದೆ. ಯಡಿಯೂರಪ್ಪನವರ ರಾಜ್ಯ ಪ್ರವಾಸಕ್ಕೆ ಇದೇ ಕಾರು ಬಳಕೆ ಮಾಡಿಕೊಳ್ತಾರೆ ಅಂತಾ ಹೇಳಲಾಗಿದ್ದು, KA -05- ND – 4545 ನಂಬರ್​​ನಲ್ಲಿ ರಿಜಿಸ್ಟರ್ ಆಗಿದೆ.

ಇನ್ನು, ಕಾರಿನ ವಿಶೇಷತೆಗಳನ್ನ ಗಮನಿಸುವುದಾದರೆ, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಹಾಗೂ ಪವರ್ ವಿಂಡೋಸ್​ ವ್ಯವಸ್ಥೆ ಹೊಂದಿದೆ. ಡ್ರೈವರ್ ಹಾಗೂ ಪ್ಯಾಸೆಂಜರ್​ ಏರ್​ಬ್ಯಾಗ್​ ವ್ಯವಸ್ಥೆಯೂ ಕಾರಿನಲ್ಲಿದ್ದು, ಪವರ್ ರೆಕ್ಲೈನ್​ ಲ್ಯಾವಿಶ್​ ಸೀಟ್​ಗಳು ಕಾರಿನಲ್ಲಿವೆ. ಇನ್ನು, ಹಿಂಬದಿ ಪ್ರಯಾಣಿಕರ ಅನುಕೂಲಕ್ಕಾಗಿ ಲಾಂಗ್​ ಸ್ಲೈಡ್​ ಸೀಟ್ಸ್​ ಕೂಡ ಇದ್ದು, ಮಲಗಿ ನಿದ್ರಿಸಲು ಲಾರ್ಜ್​ ಹೆಡ್​ರೆಸ್ಟ್​ ವ್ಯವಸ್ಥೆ ಕೂಡ ಇದೆ. ಇನ್ನು, ರಾಜ್ಯ ಪ್ರವಾಸಕ್ಕೆ ಯಡಿಯೂರಪ್ಪನವರು ತೆರಳಿದಾಗ ಕಾರಿನಿಂದಲೇ ನಿಂತು ಜನರತ್ತ ಕಣ್ಣಾಯಿಸಲು ಸನ್​ರೂಫ್​ ಸಿಸ್ಟಮ್ ಕೂಡ ಇದರಲ್ಲಿದೆ.

blank

ಯಡಿಯೂರಪ್ಪನವರ ರಾಜಕೀಯ ಜೀವನದ ಸೆಕೆಂಡ್​ ಇನ್ನಿಂಗ್ಸ್​ಗೆ ಅಖಾಡ ಸಿದ್ಧವಾಗಿದೆ. ಈ ಬಗ್ಗೆ ಖುದ್ದು ಯಡಿಯೂರಪ್ಪನವರೇ ನಿನ್ನೆ ಮಾಹಿತಿ ಕೊಟ್ಟಿದ್ದು, 20 ದಿನಗಳ ನಂತರ ರಾಜ್ಯ ಪ್ರವಾಸ ಮಾಡೋದಾಗಿ ತಿಳಿಸಿದ್ದಾರೆ.

ರಾಜ್ಯ ಬಿಜೆಪಿಯ ಏಕಮೇವಾದ್ವಿತೀಯ ನಾಯಕನಾಗಿರೋ ಯಡಿಯೂರಪ್ಪನವರು ನಾಡದೊರೆಯ ಗದ್ದುಗೆಯಿಂದ ಕೆಳಗಿಳಿದಿದ್ರೂ ಅವರು ಪಕ್ಷದ ಪವರ್ ಸೆಂಟರ್ ಅನ್ನೋದನ್ನ ತಳಿ ಹಾಕೋ ಹಾಗಿಲ್ಲ. ಯಾಕಂದ್ರೆ, ಯಡಿಯೂರಪ್ಪನವರ ಶಕ್ತಿ ಎಂಥದ್ದು ಅಂತಾ ದೆಹಲಿ ದೊರೆಗಳಿಗೂ ಚೆನ್ನಾಗಿ ತಿಳಿದಿದ್ದು, ಪಕ್ಷ ಸಂಘಟನೆಗಾಗಿ ಬಿಎಸ್​ವೈ ಎಂಟ್ರಿ ಕೊಟ್ರೆ ಪಕ್ಷಕ್ಕೆ ಹೊಸ ಚೈತನ್ಯ ಬರುವುದರಲ್ಲಿ ಸಂದೇಹವಿಲ್ಲ. ಮಾಸ್ ಲೀಡರ್ ಪ್ರವೇಶದಿಂದ ಪಕ್ಷಕ್ಕೆ ದೊಡ್ಡ ಲಾಭವೇ ಆಗಲಿದ್ದು ತಮ್ಮ ಮುಂದಿನ ರಾಜಕಾರಣದ ಪಟ್ಟು ಹಾಕಲು ಮಾಜಿ ಮುಖ್ಯಮಂತ್ರಿಗಳು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

blank

Source: newsfirstlive.com Source link