ಅಫ್ಘಾನ್ ಸೇನೆ-ತಾಲಿಬಾನ್​ ಸಂಘರ್ಷ: 200 ವರ್ಷಗಳ ಕಾಲದ ಕಾದಾಟದ ಸ್ವಾರಸ್ಯಕರ ಕಥೆ

ಅಫ್ಘಾನ್ ಸೇನೆ-ತಾಲಿಬಾನ್​ ಸಂಘರ್ಷ: 200 ವರ್ಷಗಳ ಕಾಲದ ಕಾದಾಟದ ಸ್ವಾರಸ್ಯಕರ ಕಥೆ

2 ದಶಕಗಳ ಕಾಲ ಅಫ್ಘಾನ್​ನಲ್ಲಿದ್ದ ವಾತಾವರಣ ಕೇವಲ ಎರಡೇ ವಾರದಲ್ಲಿ ತಾಲಿಬಾನ್​ಗಳು ಬದಲಾಯಿಸಿ ಬಿಟ್ಟಿದ್ದಾರೆ. ತಾಲಿಬಾನ್​ಗಳ ಅಟ್ಟಹಾಸಕ್ಕೆ ಬೆದರಿದ ಅಫ್ಘಾನ್ ಅಧ್ಯಕ್ಷರೇ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಎರಡು ದಶಕಗಳ ಕಾಲ ರಕ್ಷಣಾ ತಡೆಗೋಡೆಯಂತ್ತಿದ್ದ ಅಮೆರಿಕ ಸೇನೆ ಅಫ್ಘಾನ್​ ಜನರನ್ನ ನಡುನೀರಲ್ಲೆ ಕೈ ಬಿಟ್ಟು ತವರು ಸೇರಿದೆ. ಅಷ್ಟಕ್ಕೂ 200 ವರ್ಷಗಳ ಕಾಲ ಅಫ್ಘಾನ್ ಸೇನೆ ಹಾಗೂ ತಾಲಿಬಾನ್​ ನಡುವೆ ನಡೆದಿದ್ದೇನು ಅನ್ನೋದೇ ಒಂದು ಇಂಟ್ರೆಸ್ಟಿಂಗ್​ ಸ್ಟೋರಿ.

ವಿಶ್ವದ ದೊಡ್ಡಣ್ಣನ ಸೇನೆ ಅಫ್ಘಾನ್ ನೆಲದಿಂದ ಹೆಜ್ಜೆ ಹಿಂದಿಟ್ಟಿದ್ದೆ ತಡ, ಅಫ್ಘಾನ್ ಚಿತ್ರಣವವೇ ಬದಲಾಗಿ ಬಿಟ್ಟಿದೆ. ತಾಲಿಬಾನ್​ಗಳು ಕಂಡ ಕಂಡವರ ಮೇಲೆ ದಾಳಿ ನಡೆಸಿ, ನೆತ್ತರು ಹರಿಸುತ್ತಿದ್ದಾರೆ. ತಾಲಿಬಾನ್​ಗಳ ರಕ್ಕಸ ಬಂದೂಕಿನಿಂದ ಅಮಾಯಕರು ಬೀದಿ ಬೀದಿಯಲ್ಲೇ ಹೆಣವಾಗುತ್ತಿದ್ದಾರೆ. ಅಮೆರಿಕದ ಎರಡು ದಶಕಗಳ ಕಾಲ ಅಫ್ಘಾನ್​ನಲ್ಲಿ ತನ್ನ ಸೇನೆಯ ಮೂಲಕ ಅಲ್ಲಿಯ ಜನರಿಗೆ ಸರ್ಪಗಾವಲು ಹಾಕಿ ರಕ್ಷಣೆ ನೀಡಿತ್ತು. ದೊಡ್ಡಣ್ಣನ ಸೇನೆ ಅಫ್ಘಾನ್​ನಲ್ಲಿದ್ದ ಸಂದರ್ಭದಲ್ಲಿ ಬಾಲ ಮುದುಡಿಕೊಂಡು ಬಿಲದಲ್ಲಿ ಅಡಗಿದ್ದ ಈ ತಾಲಿಬಾನ್​ಗಳು ಇದೀಗ ಬಂದೂಕು ಇಡ್ಕೊಂಡು ಅಟ್ಟಹಾಸ ಶುರು ಮಾಡಿದ್ದಾರೆ.

blank

ಯೆಸ್​.. ಅಂದು ಅಮೆರಿಕವೇ ಅನ್ನ ನೀರು ಕೊಟ್ಟು ಪೋಷಿಸಿದ್ದ ತಾಲಿಬಾನ್​ ಎಂಬ ಕೆಟ್ಟ ಕೂಸು, ನಂತರ ಅಮೆರಿಕಗೆ ಹದ್ದಾಗಿ ಕುಕ್ಕಿತ್ತು. ಅಂದು ಅಂಬೆಗಾಲುಡುತ್ತಿದ್ದ ಈ ತಾಲಿಬಾನ್​ಗಳ ಕೈಗೆ ಶಸ್ತ್ರಾಸ್ತ್ರ ಕೊಟ್ಟು ಹಿಂಸಾಚಾರ ನಡೆಸಲು ಪ್ರೋತ್ಸಾಯಿಸಿದ್ದೆ ಅಮೆರಿಕ. ಯಾವಾಗ ಉಗ್ರರು ತನಗೆ ಸವಾಲೊಡ್ಡಲು ಶುರು ಮಾಡಿದ್ದಾರೆ ಅನ್ನೋದು ಅಮೆರಿಕದ ಅರಿವಿಗೆ ಬರಲು ಶುರವಾಯ್ತೋ… ಆಗ ಇದೇ ಅಮೆರಿಕ ತಾಲಿಬಾನ್​ಗಳ ವಿರುದ್ಧ ದಂಡಯಾತ್ರೆ ಕೈಗೊಂಡಿತ್ತು.

1996ರಲ್ಲಿ ಅಫ್ಘಾನ್ ತಾಲಿಬಾನ್ ತೆಕ್ಕೆಗೆ
ದೊಡ್ಡಣ್ಣನ ಶ್ರೀರಕ್ಷೆಯಿಂದ ಅಫ್ಘಾನ್ 1996 ರಲ್ಲಿ ತಾಲಿಬಾನ್​ ತೆಕ್ಕೆಗೆ ಜಾರಿತ್ತು. ಅಧಿಕಾರದ ಗದ್ದುಗೆ ಹಿಡಿದ ತಾಲಿಬಾನ್​ಗಳು, ಬರೋಬ್ಬರಿ ಐದು ವರ್ಷಗಳ ಕಾಲ ಅಕ್ಷರಶಃ ದಮನಕಾರಿ ಆಡಳಿತ ನಡೆಸಿದ್ರು. ಅಫ್ಘಾನ್​ ಮಹಿಳೆಯರಿಗೆ ನಿಜಕ್ಕೂ ಆ ಐದು ವರ್ಷ ನರಕದರ್ಶನವಾಗಿತ್ತು. ಅಫ್ಘಾನ್​ನಲ್ಲಿ ತಾಲಿಬಾನ್​ಗಳ ಅಧಿಕಾರದ ಚುಕ್ಕಾಣಿ ಹಿಡಿದ ಕಾರಣ ಇತರೆ ಉಗ್ರ ಸಂಘಟನೆಗಳಿಗೆ ರೆಕ್ಕೆ ಪುಕ್ಕ ಬಂದತ್ತಾಗಿ, ಅವುಗಳು ಚಿಗುರಿಗೊಂಡಿತ್ತು. ಅಲ್ಲದೇ ತಾಲಿಬಾನ್​ಗಳ ಆಶ್ರಯದಲ್ಲಿದ್ದ ಅಲ್​ಖೈದಾ ಸಂಘಟನೆ ಅಮೆರಿಕವನ್ನೇ ಅಲುಗಾಡಿಸಿ ಬಿಟ್ಟಿತ್ತು.

2001 ರಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ
ತಾಲಿಬಾನ್​​ ಮೇಲೆ ದಂಡೆತ್ತಿ ಹೋದ ದೊಡ್ಡಣ್ಣ

2001ರ ಸೆಪ್ಟೆಂಬರ್ 11ರಂದು ವರ್ಲ್ಡ್‌ ಟ್ರೇಡ್‌ ಸೆಂಟರ್‌ನ ದಾಳಿ ನಡೆಸಿದ್ದ ಉಗ್ರರು ಮೂರು ಸಾವಿನ ಜನರನ್ನ ಬಲಿ ಪಡೆದುಕೊಂಡ್ರು. ಈ ಭೀಕರ ದಾಳಿಗೆ ಪ್ರತೀಕಾರದ ಪ್ರತಿಜ್ಷೆ ಮಾಡಿದ ಅಮೆರಿಕ ಸೇನೆ, ಅಫ್ಘಾನ್ ಮೇಲೆ ದಂಡೆತ್ತಿ ಹೋದ್ರು. 2001ರ ದಾಳಿಯನ್ನ ತನ್ನ ಪ್ರತಿಷ್ಠೇ , ಯಜಮಾನಿಕೆಗೆ ಬಿದ್ದ ಏಟು ಎಂದು ಪರಿಗಣಿಸಿದ್ದ ವಿಶ್ವದ ದೊಡ್ಡಣ್ಣ ತಾಲಿಬಾನ್​ ವಿರುದ್ಧ ದಂಡಯಾತ್ರೆ ಕೈಗೊಂಡ್ರು. 2001ರ ಅಕ್ಟೋಬರ್ 7ರಂದು ಬ್ರಿಟಿಷ್ ಮಿಲಿಟರಿ ಸಹಾಯದೊಂದಿಗೆ ಅಮೆರಿಕ ಸೇನೆ ತಾಲಿಬಾನ್ ಪಡೆಗಳ ವಿರುದ್ಧ ಅಫ್ಗಾನಿಸ್ತಾನದಲ್ಲಿ ಸಮರ ಆರಂಭಿಸಿತು. ಭೀಕರ ಬಾಂಬ್ ದಾಳಿಗೆ ತಾಲಿಬಾನ್ ಬೆಚ್ಚಿಬಿತ್ತು.
blank
ಅಮೆರಿಕದ ದಾಳಿಗೆ ಬೆದರಿದ ತಾಲಿಬಾನ್​ ಕೈಯಲ್ಲಿದ್ದ ಬಂದೂಕುಗನ್ನ ಬಿಸಾಕಿ ಗೂಡು ಸೇರ್ಕೊಂಡು ಬಿಟ್ಟಿದ್ರು. ಅಮೆರಿಕ ತಾಲಿಬಾನ್​ಗಳ ವಿರುದ್ಧ ಮಾಡಿದ್ದ ಈ ಆಪರೇಷನ್ ಹೆಸರು ‘ಆಪರೇಷನ್ ಎಂಡ್ಯೂರಿಂಗ್ ಫ್ರೀಡಮ್’ . ಈ ಆಪರೇಷನ್ ‘ಆಪರೇಷನ್ ಎಂಡ್ಯೂರಿಂಗ್ ಫ್ರೀಡಮ್’ ಗೆ ಕೆನಡಾ ಜೊತೆಗೆ ಆಸ್ಟ್ರೇಲಿಯಾ, ಜರ್ಮನಿ ಹಾಗೂ ಫ್ರಾನ್ಸ್ ಹೆಗಲು ಕೊಟ್ಟಿತ್ತು. ಅಮೆರಿಕ ಈ ಕಾರ್ಯಾಚರಣೆಗೆ ಬೆದರಿದ ತಾಲಿಬಾನ್​ಘಳು ಅಮೆರಿಕ ಎದರು ಮಂಡಿವೂರಿ ಶರಣಾಯಿತು. ಅಫ್ಘಾನ್ ರಾಜಧಾನಿ ಕಾಬೂಲ್ನಲ್ಲಿ 2001 ನವೆಂಬರ್ 11 ರಂದು ತಾಲಿಬಾನ್ ಹಿಡಿತ ಕೊನೆಯಾಗಿ, ಅಲ್ಲಿ ಅಮೆರಿಕ ಸೇನೆ ತನ್ನ ಕೈವಶ ಮಾಡ್ಕೊಂಡಿತ್ತು.

ಅಫ್ಘಾನಿಸ್ತಾನಲ್ಲಿ ಅಮೆರಿಕ ಸೇನೆ ನಿಯೋಜನೆ
ತಾಲಿಬಾನ್​ ವಿರುದ್ಧ ತೊಡೆ ತಟ್ಟಿದ್ದ ಅಮೆರಿಕ, ಅಫ್ಘಾನ್ ನೆಲದಲ್ಲಿ ತನ್ನ ಸೇನೆಯನ್ನ ಕಾವಲಿಗೆ ಇಟ್ಟಿತ್ತು. 2001ರಲ್ಲಿ ತನ್ನ 67 ಸಾವಿರ ಸೈನಿಕರನ್ನ ಅಮೆರಿಕದಲ್ಲಿ ನಿಯೋಜನೆ ಮಾಡಿದ್ದ ಅಂದಿನ ಅಧ್ಯಕ್ಷ ಬುಷ್, ತಾಲಿಬಾನ್​ ವಿರುದ್ಧ ಸೈನಿಕ ರಕ್ಷಣೆ ಗೋಡೆ ನಿರ್ಮಿಸಿದ್ರು. ಇದೇ ವೇಳೇ ಅಮೆರಿಕ ರಾಜಕೀಯದಲ್ಲೂ ಬಹುದೊಡ್ಡ ಬದಲಾವಣೆಯಾಯಿತು. ಅಮೆರಿಕದ ಅಧಿಕಾರ ಚುಕ್ಕಾಣಿ ಹಿಡಿದ ಬರಾಕ್ ಓಬಾಮ ತಾಲಿಬಾನ್​ ವಿರುದ್ಧದ ಸಮರವನ್ನ ಮತ್ತಷ್ಟು ಬಲ ಪಡಿಸಿದ್ರು. 67 ಸಾವಿರವಿದ್ದ ಸೈನಿಕರನ್ನ ಒಂದು ಲಕ್ಷಕ್ಕೆ ಏರಿಸಿದ್ರು. ಸೈನಿಕರ ಸಂಖ್ಯೆಯನ್ನ ಹೆಚ್ಚಳ ಮಾಡುವ ಮೂಲಕ ಅಫ್ಘಾನ್​ ಗಲ್ಲಿ ಗಲ್ಲಿಯಲ್ಲಿ ಲಾಡೆನ್ ನ ಹುಡುಕಾಟ ಶುರುಮಾಡ್ಕೊಂಡಿದ್ರು. ಆದ್ರೆ ಲಾಡೆನ್​ ಅದಾಗ್ಲೆ ಪಾಕಿಸ್ತಾನ ಸೇರ್ಕೊಂಡಿದ್ದ. ಲಾಡೆನ್ ಪಾಕಿಸ್ತಾನದಲ್ಲಿದ್ದಾನೆ ಅನ್ನೋ ಮಾಹಿತಿ ಕನ್ಫರ್ಮ್​​ ಆಗ್ತಿದ್ದಂಗೆ ಅಮೆರಿಕ ಲಾಡೆನ್​ ಕೋಟೆಗೆ ನುಗ್ತಿತ್ತು. ಪಾಕಿಸ್ತಾನದಲ್ಲಿ ಕೂತೇ ವಿಷ ವ್ಯೂಹ ಹೆಣೆಯುತ್ತಿದ್ದ ಲಾಡೆನನ್ನ ಅಮೆರಿಕ ಸೇನೆ ಅವನದ್ದೇ ಅಡಗುತಾಣದಲ್ಲೆ ಹತ್ಯೆ ಮಾಡಿತ್ತು.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಸುನೀಗುತ್ತಿವೆ ಕಂದಮ್ಮಗಳು.. ದಯನೀಯ ಸ್ಥಿತಿ ತಲುಪಿದ ಅಲ್ಪಸಂಖ್ಯಾತರ ಪಾಡು

blank

ತಾಲಿಬಾನ್​ಗಳ ವಿರುದ್ಧ ಮುಂದುವರೆದ ದೊಡ್ಡಣ್ಣನ ಹೋರಾಟ
ಹಂತ ಹಂತವಾಗಿ ಸೈನಿಕರ ಸಂಖ್ಯೆಯನ್ನ ಹೆಚ್ಚು ಮಾಡಿದ್ದ ಅಮೆರಿಕ

ಲಾಡೆನ್ ಹತ್ಯೆ ನಂತರ ಕೂಡ ಅಮೆರಿಕ ತಾಲಿಬಾನ್​ ವಿರುದ್ಧ ತನ್ನ ಹೋರಾಟವನ್ನ ಮುಂದುವರೆಸಿತ್ತು. ಯಾವುದಾದ್ರು ತಾಲಿಬಾನ್​​ ಕ್ರಿಮಿ,ಅಫ್ಘಾನ್ ನಾಗರಿಕ ಸಮಾಜಕ್ಕೆ ಸವಾಲೊಡ್ಡುತ್ತಾನೆ ಅನ್ನೋದು ಗೊತ್ತಾದ್ರೆ ಸಾಕು.. ಅಮೆರಿಕ ಸೇನೆ ಅಲ್ಲಿಯೇ ತಾಲಿಬಾನ್​ ಉಗ್ರರ ಬೇಟೆಯಾಡ್ತಿತ್ತು. ಈ ಮೂಲಕ ತಾಲಿಬಾನ್​ಗಳ ಹುಟ್ಟಗಿಸಲು ಒಂದು ಹಂತದಲ್ಲಿ ಅಮೆರಿಕ ಸೈನಿಕರು ಸಕ್ಸಸ್ ಕಂಡಿತ್ತು.

2015ರಲ್ಲಿ ಸೈನಿಕರ ಸಂಖ್ಯೆಯನ್ನ ಕಡಿತಗೊಳಿಸಿದ ಟ್ರಂಪ್
2017ಲ್ಲಿ ಮತ್ತೆ 14 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ

ಲಾಡೆನ್ ಹತ್ಯೆ ಮಾಡಿದ ನಾಲ್ಕು ವರ್ಷ ನಂತರ,ಅಂದ್ರೆ 2015ರಲ್ಲಿ ಅಫ್ಘಾನ್​ನಲ್ಲಿದ್ದ ತನ್ನ ಸೈನಿಕರ ಸಂಖ್ಯೆಯನ್ನ ಅಂದಿನ ಅಮೆರಿಕ ಅಧ್ಯಕ್ಷ ಟ್ರಂಪ್ ಕಡಿಮೆಗೊಳಿಸಿದ್ರು. ಆದ್ರೆ ಟಂಪ್​ಗೆ ತಾನು ಮಾಡಿತ ತಪ್ಪು ಬಹುಬೇಗನೆ ಅರಿವಾಗತೊಡಗಿತ್ತು. 2015ರಲ್ಲಿ ಮತ್ತೆ 14 ಸಾವಿರ ಸೇನೆಯನ್ನ ಹೆಚ್ಚುವರಿಯಾಗಿ ನೇಮಕ ಮಾಡಿದ್ದ ಟ್ರಂಪ್ ತಾಲಿಬಾನ್​ಗಳ ಸದ್ದಡಗಿಸಲು ಹೊರಟು ನಿಂತ್ರು. ಹೀಗೆ 2001 ರಿಂದ 2019 ರ ತನಕ 18 ವರ್ಷಗಳ ಕಾಲ ಅಫ್ಘಾನ್ ನೆಲದಲ್ಲಿ ತಾಲಿಬಾನ್​ ವಿರುದ್ಧ ಅಲ್ಲಿಯ ಜನರಿಗೆ ರಕ್ಷಣೆ ನೀಡಿದ್ದ ಅಮೆರಿಕ ಸೇನೆ 2019 ರಲ್ಲಿ ತಾಲಿಬಾನ್​ ವಿರುದ್ಧ ಮೃಧು ಧೋರಣೆ ತಾಳಲು ಶುರುಮಾಡಿತ್ತು.

2019 ರಲ್ಲಿ ಟ್ರಂಪ್ ನೇತೃತ್ವದಲ್ಲಿ ನಡೆಯಿತು ಒಪ್ಪಂದ
ಅಮೆರಿಕ ಸೇನೆಯನ್ನ ಹಿಂತೆಗೆದುಕೊಳ್ಳಲು ಪ್ಲಾನ್

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಸುನೀಗುತ್ತಿವೆ ಕಂದಮ್ಮಗಳು.. ದಯನೀಯ ಸ್ಥಿತಿ ತಲುಪಿದ ಅಲ್ಪಸಂಖ್ಯಾತರ ಪಾಡು

2019 ರಲ್ಲಿ ಸೆಪ್ಟಂಬರ್ 9 ರಂದು ತಾಲಿಬಾನ್​ ಟ್ಯಾಕ್ ಮಾಡಿ ಯುಎಸ್​ ಪಡೆ ಮೇಲೆ ಅಟ್ಯಾಕ್​ ಮಾಡಿತ್ತು. ನಂತರ 2020 ಕೆಲವೊಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು .ಈ ವೇಳೇ ಅಂದಿನ ಅಮೆರಿಕ ಅಧ್ಯಕ್ಷ, ಅಮೆರಿದಲ್ಲಿರುವ ತನ್ನ ಸೇನೆಯನ್ನ ವಾಪಸ್ ಕರೆಸಿಕೊಳ್ಳುವುದಾಗಿ ಒಪ್ಪಂದ ಮಾಡ್ಕೊಂಡಿದ್ರು. ಆ ಒಪ್ಪಂದದಂತೆ, 2021 ರಲ್ಲಿ ಏಪ್ರಿಲ್ ನಿಂದ ಸೆಫ್ಟೆಂಬರ್ ಒಳಗಾಗಿ ಅಮೆರಿಕ ಸೇನೆಯನ್ನ ಅಫ್ಘಾನ್ ನೆಲದಿಂದ ಹಿಂತೆಗೆಯುವುದಾಗಿ ಹೇಳಿತ್ತು. ಒಪ್ಪಂದದಂತೆ ಅಮೆರಿಕ ಸೇನೆಯು ಅಫ್ಘಾನ್ ನೆಲದಿಂದ ಹಂತ ಹಂತವಾಗಿ ತವರಿಗೆ ಮರಳುತ್ತಿದೆ. ಆದ್ರೆ ಇದೇ ವೇಳೇ ಅಮೆರಿಕ ಸೇನೆ ಎಸಗಿದ ಪ್ರಮಾದಗಳು, ಇಂದು ವಿಶ್ವವೇ ಅಮೆರಿಕ ವಿರುದ್ಧ ಕೆಂಡ ಕಾರುವಂತೆ ಮಾಡಿದೆ.

ಇದನ್ನೂ ಓದಿ: 27ರ ಹರೆಯದ ಬಾಯ್​​ಫ್ರೆಂಡ್​ ತುಟಿಗೆ ತುಟಿಯೊತ್ತಿ 63ನೇ ಬರ್ತ್​ಡೇ ಆಚರಿಸಿಕೊಂಡ ಪಾಪ್​ ಕ್ವೀನ್ ಮಡೋನಾ..!

blank

ಸೇನೆ ಹಿಂಪಡೆಯುವ ವೇಳೇ ಜೋ ಬಿಡೆನ್ ಎಡವಟ್ಟು
ಒಪ್ಪಂದ ಪ್ರಕಾರ ತನ್ನೆಲ್ಲಾ ಸೈನಿಕರನ್ನ ಕರೆಸಿಕೊಳ್ಳುತ್ತಾ ಅಮೆರಿಕ?

ಒಪ್ಪಂದದಂತೆ ಅಮೆರಿಕ ಸೇನೆ ಅಫ್ಘಾನ್ ನೆಲದಿಂದ ತವರಿಗೆ ಮರಳುತ್ತಿದೆ. ಆದ್ರೆ ಅಮೆರಿಕ ಸೇನೇ ಏಕಾ ಏಕಿ ಅಫ್ಘಾನ್​ ನಿಂದ ಜಾಗ ಖಾಲಿ ಮಾಡಿದ್ದು, ತಾಲಿಬಾನ್​ಗಳು ಚಿಗುರಿಕೊಳ್ಳಲು ಕಾರಣವಾಗಿದೆ. ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ತವರಿಗೆ ಮರಳುವ ಕಾರ್ಯ ಆರಂಭವಾಗಿದ್ರು,ಅದು ಇನ್ನೂ ಕೂಡ ಕಂಪ್ಲೀಟ್ ಆಗಿಲ್ಲ. ಅದಾಗ್ಲೆ ಅಫ್ಘಾನ್ ತಾಲಿಬಾನ್ ತೆಕ್ಕೆಗೆ ಜಾರಿ ಬಿಟ್ಟಿದೆ. ಅಫ್ಘಾನ್​ನಲ್ಲಿರುವ ತನ್ನ ಸೇನೆಯನ್ನ ಅಮೆರಿಕ ಸಂಪೂರ್ಣವಾಗಿ ಕರೆಸಿಕೊಳ್ಳುತ್ತಾ ಅಥವಾ ಮತ್ತೆ ಕೆಲವು ತಿಂಗಳುಗಳ ಕಾಲ ತಾಲಿಬಾನ್​ ವಿರುದ್ಧ ಜನರಿಗೆ ಕಾವಲು ನೀಡುತ್ತಾ ಅನ್ನೋದಕ್ಕೆ ಸದ್ಯಕ್ಕಿರುವ ಕುತೂಹಲ.. ಈ ಪ್ರಶ್ನೆಗೆ ಮುಂದಿನ ದಿನಗಳಲ್ಲೆ ಉತ್ತರ ಸಿಗಲಿದೆ.

ಇದನ್ನೂ ಓದಿ: 4 ವರ್ಷ ಸಂಸಾರ ಮಾಡಿ..ಇನ್ನೊಂದು ಮದುವೆಯಾದ ಪತ್ನಿ.. ಹಾಸ್ಯನಟ ಕಂಗಾಲು..!

blank

ಅಮೆರಿಕ ತನ್ನ ಸೇನೆಯನ್ನ ವಾಪಸ್ ಕರೆಸಿಕೊಳ್ಳುವ ವೇಳೆ ಎಸಗಿರುವ ಎಡವಟ್ಟಿನಿಂದ ಇಂದು ಇಡೀ ಜಗತ್ತೆ ಅಮೆರಿಕದ ವಿರುದ್ಧ ಕೆಂಡ ಕಾರುವಂತ್ತಾಗಿದೆ. ಅಫ್ಘಾನ್​ನಲ್ಲಿರುವ ಉಳಿದ ಅಮೆರಿಕ ಸೇನೆಯನ್ನ ಜೋ ಬೈಡೆನ್ ಅಫ್ಘಾನ್​ ಮುಂದಿನ ತಿಂಗಳ ಒಳಗಾಗಿ ವಾಪಸ್ ಕರೆಸಿಕೊಳ್ತಾರಾ ಅಥವಾ ಅಲ್ಲೆ ಉಳಿಸ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ಮೂವರು ಪತ್ನಿಯರಿಗೆ ಮೋಸ ಮಾಡಿ 4ನೇ ಮದುವೆಗೆ ರೆಡಿಯಾದ ಭೂಪ; ಪ್ರೇಯಸಿ ಜತೆಗೆ ಎಸ್ಕೇಪ್

Source: newsfirstlive.com Source link