ಬೆಂಗಳೂರು ಬಾಯ್ಲರ್​​ ಸ್ಫೋಟ ಪ್ರಕರಣ; ನಾಲ್ಕಕ್ಕೇರಿದ ಸಾವಿನ ಸಂಖ್ಯೆ, ಫ್ಯಾಕ್ಟರಿ ಮಾಲೀಕ ಪರಾರಿ

ಬೆಂಗಳೂರು ಬಾಯ್ಲರ್​​ ಸ್ಫೋಟ ಪ್ರಕರಣ; ನಾಲ್ಕಕ್ಕೇರಿದ ಸಾವಿನ ಸಂಖ್ಯೆ, ಫ್ಯಾಕ್ಟರಿ ಮಾಲೀಕ ಪರಾರಿ

ಬೆಂಗಳೂರು: ನಗರದ ಮಾಗಡಿ ರಸ್ತೆಯ ಗೋಪಾಲಪುರದ 5ನೇ ಅಡ್ಡರಸ್ತೆಯ ಎಂಎಂ ಫುಡ್​ ಫ್ಯಾಕ್ಟರಿಯಲ್ಲಿ ಸಂಭವಿಸಿದ್ದ ಬಾಯ್ಲರ್​ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ.

ನಿನ್ನೆ ನಡೆದ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಚಿನ್ ಹಾಗೂ ಧನಲಕ್ಷ್ಮಿ ಎಂಬವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಿನ್ನೆ ಸೌರಬ್ (21) ಮತ್ತು ಮನೀಶ್ (20) ಮೃತರಾಗಿದ್ದರು.

blank

ಘಟನೆ ಸಂಬಂಧ ಮಾಗಡಿ ರಸ್ತೆ ಪೊಲೀಸ್​ ಠಾಣೆಯಲ್ಲಿ ಸ್ಥಳದ ಮಾಲೀಕ ಹಾಗೂ ಕಾರ್ಖಾನೆ ಮಾಲೀಕರ ಮೇಲೆ ಎಫ್.ಐ.ಆರ್ ದಾಖಲು ಮಾಡಲಾಗಿದೆ. ದುರ್ಘಟನೆ ನಡೆಯುತ್ತಿದಂತೆ ಕಂಪನಿ ಮಾಲೀಕ ವಿಜಯ್ ಮೆಹ್ತಾ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಮಾಲೀಕ ವಿಜಯ್ ಮೆಹ್ತಾಗಾಗಿ ಪೊಲೀಸರು ಸದ್ಯ ಹುಡುಕಾಟ ನಡೆಸಿದ್ದಾರೆ.

Source: newsfirstlive.com Source link