ಕಳ್ಳತನ, ನಕಲಿ ನೋಟು ದಂಧೆ ನಡೆಸ್ತಿದ್ದ ಆರೋಪಿಗಳಿಂದ ₹1 ಕೋಟಿ ಮೌಲ್ಯದ ರತ್ನ ವಶಕ್ಕೆ

ಕಳ್ಳತನ, ನಕಲಿ ನೋಟು ದಂಧೆ ನಡೆಸ್ತಿದ್ದ ಆರೋಪಿಗಳಿಂದ ₹1 ಕೋಟಿ ಮೌಲ್ಯದ ರತ್ನ ವಶಕ್ಕೆ

ಚಿಕ್ಕಮಗಳೂರು: ವಿವಿಧ ಅಪರಾದ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ದುಷ್ಕರ್ಮಿಗಳ ಬಳಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಪುರಾತನ ರತ್ನ ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ 5.5 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರು, ಮೈಸೂರು ಶಿವಮೊಗ್ಗ, ಹಾಸನ ಸೇರಿ ಹಲವೆಡೆ ಈ ಗ್ಯಾಂಗ್​ ಸಕ್ರಿಯವಾಗಿತ್ತು. ಈ ಆರೋಪಿಗಳ ಗ್ಯಾಂಗ್​ ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ 510.60 ಕ್ಯಾರೆಟ್​​ನ ರತ್ನ ಕಳ್ಳತನ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

blank

ಮನೆಗೆ ನುಗ್ಗಿ ನಾಯಿಗಳಿಗೆ ವಿಷ ಹಾಕುತ್ತಿದ್ದ ಆರೋಪಿಗಳು ಆ ಬಳಿಕ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಆರೋಪಿಗಳಿಂದ 3 ಕಾರು, 5 ಮೊಬೈಲ್, ನಕಲಿ ನೋಟು ಮುದ್ರಿಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್ ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಮಗಳೂರು ಸಿ.ಇ.ಎನ್ ಇನ್ಸ್ ಪೆಕ್ಟರ್ ರಕ್ಷಿತ್ ಹಾಗೂ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಕೇರಳದ ಹೈಟೆಕ್ ವೇಶ್ಯವಾಟಿಕೆ ದಂಧೆಯಲ್ಲೂ ಭಾಗಿಯಾಗಿ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

blank

Source: newsfirstlive.com Source link