‘ಮಾಲ್ಡೀವ್ಸ್ ಒಳ್ಳೆ ಸ್ಥಳ, ಎಲ್ಲರೂ ನೋಡುವಂಥದ್ದು’ -ಮಾಜಿ ಸಿಎಂ ಬಿಎಸ್​​ವೈ

‘ಮಾಲ್ಡೀವ್ಸ್ ಒಳ್ಳೆ ಸ್ಥಳ, ಎಲ್ಲರೂ ನೋಡುವಂಥದ್ದು’ -ಮಾಜಿ ಸಿಎಂ ಬಿಎಸ್​​ವೈ

ಬೆಂಗಳೂರು: ಯಡಿಯೂರಪ್ಪನವರ ರಾಜಕಿಯ ಜೀವನದ ಸೆಕೆಂಡ್​ ಇನ್ನಿಂಗ್ಸ್​ಗೆ ಅಖಾಡ ಸಿದ್ಧವಾಗಿದೆ. ಅಂದಹಾಗೇ, ಪಕ್ಷ ಸಂಘಟನೆಗೆ ಸಕಲ ರೀತಿಯಲ್ಲೂ ಸಜ್ಜಾಗಿರುವ ಯಡಿಯೂರಪ್ಪನವ್ರು, ತಮ್ಮ ಹೊಸ ಕಾರಿನಲ್ಲೇ ರಾಜ್ಯ ಪ್ರವಾಸಕ್ಕಾಗಿ ಮುಂದಾಗಿದ್ದಾರೆ.

5 ದಿನಗಳ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್​ ಆದ ಯಡಿಯೂರಪ್ಪನವರು ನಿನ್ನೆ ರಾಜ್ಯ ಪ್ರವಾಸದ ಬಗ್ಗೆ ಮಾಹಿತಿ ಕೊಟ್ಟಿದ್ದು, 20 ದಿನಗಳ ನಂತರ ರಾಜ್ಯ ಪ್ರವಾಸ ಮಾಡೋದಾಗಿ ಮತ್ತು ಒಂದೊಂದು ಜಿಲ್ಲೆಗೆ ಒಂದೊಂದು ದಿನ ಪ್ರವಾಸ ಹೋಗುತ್ತೇನೆ ಅಂತಾ ತಿಳಿಸಿದ್ದಾರೆ. ಇನ್ನು, ರಾಜ್ಯ ಪ್ರವಾಸಕ್ಕೆ ಯಡಿಯೂರಪ್ಪನವರು ತೆರಳಿದಾಗ ಕಾರಿನಿಂದಲೇ ನಿಂತು ಜನರತ್ತ ಕಣ್ಣಾಯಿಸಲು ಸನ್​ರೂಫ್​ ಸಿಸ್ಟಮ್ ಕೂಡ ಈ ಕಾರಿನಲ್ಲಿದೆ.

blank

ಆಗಸ್ಟ್ 18ರಂದು ಯಡಿಯೂರಪ್ಪ ಅವರು ಕುಟುಂಬ ಸಮೇತರಾಗಿ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದರು. ನಿನ್ನೆ ರಾತ್ರಿ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಈ ವೇಳೆ ಮಾತನಾಡಿದ ಸಿಎಂ, ಬಹಳ ದಿನಗಳ ನಂತರ ನಾನು ವಿದೇಶ ಪ್ರವಾಸಕ್ಕೆ ಹೋಗಿದ್ದೆ. ಸ್ನೇಹಿತರು, ಕುಟುಂಬಸ್ಥರ ಒತ್ತಾಯದ ಮೇರೆ ಪ್ರವಾಸ ಹೋಗಿದ್ದೆ. ಮಾಲ್ಡೀವ್ಸ್ ಒಳ್ಳೆ ಸ್ಥಳ, ಎಲ್ಲರೂ ನೋಡುವಂಥದ್ದು.. ನಾನೂ ಖುಷಿ ಪಟ್ಟೆ ಅಂತ ಅನುಭವ ಹಂಚಿಕೊಂಡರು.

Source: newsfirstlive.com Source link