ಇಂದು G-7 ರಾಷ್ಟ್ರಗಳ ಶೃಂಗಸಭೆ; ಉಗ್ರರ​ ಡೆಡ್​​ಲೈನ್​ಗೆ ಮಣಿಯುತ್ತಾರಾ ಬೈಡನ್​?

ಇಂದು G-7 ರಾಷ್ಟ್ರಗಳ ಶೃಂಗಸಭೆ; ಉಗ್ರರ​ ಡೆಡ್​​ಲೈನ್​ಗೆ ಮಣಿಯುತ್ತಾರಾ ಬೈಡನ್​?

ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ರಕ್ತಪಾತ ಮಾಡುತ್ತಿರುವ ತಾಲಿಬಾನಿಗಳು ಆಗಸ್ಟ್​ 31ರೊಳಗೆ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಅಂತಾ ಅಮೆರಿಕಾಗೆ ಡೆಡ್​ಲೈನ್​ ನೀಡಿದ್ದಾರೆ. ಈ ನಡುವೆ ಇವತ್ತು ನಡೆಯಲಿರುವ ಜಿ7 ಶೃಂಗ ಸಭೆಯೂ ಮಹತ್ವ ಪಡೆದುಕೊಂಡಿದ್ದು, ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

ಇನ್ನು ತಾಲಿಬಾನ್​ ನೀಡಿರುವ ಡೆಡ್​ಲೈನ್​ಗೆ ಮಣಿಯದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್​​ಗೆ ಜಾಗತಿಕವಾಗಿ ಒತ್ತಡ ಹಾಕಲಾಗ್ತಿದೆ. ಅಮೆರಿಕ ಸೈನ್ಯ ಸಂಪೂರ್ಣ ಹಿಂದಿರುಗಿದರೆ ಅಲ್ಲಿನ ಜನರನ್ನ ದೇವರೇ ಕಾಪಾಡಬೇಕು ಅನ್ನೋ ಮಾತುಗಳು ಕೇಳಿ ಬರ್ತಿವೆ.

ಇಂದಿನ ಜಿ-7 ನಾಯಕರ ಶೃಂಗಸಭೆಯಲ್ಲಿ ಅಫ್ಘಾನಿಸ್ತಾನದ ಬಿಕ್ಕಟ್ಟಿನ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಇನ್ನು, ಶೃಂಗಸಭೆಗೂ ಮುನ್ನ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜೋ ಬೈಡನ್​ ಜೊತೆಗೆ ಫೋನ್​ ಮಾಡಿ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದು, ವಿಶ್ವ ನಾಯಕರ ಇಂದಿನ ನಿರ್ಧಾರ ಕುತೂಹಲ ಕೆರಳಿಸಿದೆ.

Source: newsfirstlive.com Source link