ಚಹರ್​, ಶಾರ್ದೂಲ್​ ಬೆಸ್ಟ್ ಪರ್ಫಾಮೆನ್ಸ್​ ಬೆನ್ನಲ್ಲೇ ಬೆಂಗಳೂರಿಗೆ ಹಾರಿದ ಪಾಂಡ್ಯ ಏನ್ಮಾಡ್ತಿದ್ದಾರೆ ಗೊತ್ತಾ?

ಚಹರ್​, ಶಾರ್ದೂಲ್​ ಬೆಸ್ಟ್ ಪರ್ಫಾಮೆನ್ಸ್​ ಬೆನ್ನಲ್ಲೇ ಬೆಂಗಳೂರಿಗೆ ಹಾರಿದ ಪಾಂಡ್ಯ ಏನ್ಮಾಡ್ತಿದ್ದಾರೆ ಗೊತ್ತಾ?

ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯಗೆ ವಿಶ್ವಕಪ್​ ಟಿಕೆಟ್​​ ಸಿಗುತ್ತಾ ಇಲ್ವಾ.? ಬಹು ದಿನದಿಂದ ಚರ್ಚೆಯಲ್ಲಿರೋ ವಿಚಾರ ಇದು. ದೀಪಕ್​ ಚಹರ್​, ಶಾರ್ದೂಲ್​ ಠಾಕೂರ್​​ ಬ್ಯಾಟ್​​ ಮತ್ತು ಬೌಲ್​ ಎರಡರಲ್ಲೂ ಮ್ಯಾಜಿಕ್​ ಮಾಡಿದ ಮೇಲೆ ಟಿಕೆಟ್​​ ಸಿಗಲ್ಲ ಅನ್ನೋ ನಿರ್ಧಾರಕ್ಕೆ ಹಲವರು ಬಂದಾಗಿದೆ ಕೂಡ. ಆದ್ರೆ ಹಾರ್ದಿಕ್​ ಪಾಂಡ್ಯ ವಿಶ್ವಕಪ್​ ತಂಡ ಸೇರೋದು ಪಕ್ಕಾ.! ಅದ್ಹೇಗೆ ಹೇಳ್ತಿರಾ ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ..

blank

2ನೇ ಹಂತದ 14ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​​ ಲೀಗ್​ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಕೆಲ ಫ್ರಾಂಚೈಸಿಗಳು ಅರಬ್ಬರ ನಾಡಿಗೆ ಕಾಲಿಟ್ಟಿದ್ರೆ, ಇನ್ನು ಕೆಲ ತಂಡಗಳು ಫ್ಲೈಟ್​​ ಏರೋ ತಯಾರಿಯಲ್ಲಿದೆ. ಸತತ 3ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್ ಕೂಡ ಲಭ್ಯ ಇರೋ ಆಟಗಾರರೊಂದಿಗೆ ಈಗಾಗಲೇ ಯುಇಎಗೆ ಪ್ರಯಾಣ ಬೆಳೆಸಿದೆ. ಆದ್ರೆ, ತಂಡದ ಸ್ಟಾರ್​ ಪ್ಲೇಯರ್​ ಹಾರ್ದಿಕ್ ಪಾಂಡ್ಯ ಯುಇಎಗೆ ಗೆ ತೆರಳದೆ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಯುಇಎಗೆ ಹಾರಿದ ತಂಡ, ಬೆಂಗಳೂರಿಗೆ ಬಂದಿಳಿದ ಪಾಂಡ್ಯ.!
ಐಪಿಎಲ್​ ಅಲ್ಲ..! ಹಾರ್ದಿಕ್​ ಟಾರ್ಗೆಟ್ ಟಿ-20 ವಿಶ್ವಕಪ್..!

ಯೆಸ್​​..! ತಂಡದಲ್ಲಿ ಲಭ್ಯವಿರೋ ಆಟಗಾರರೊಂದಿಗೆ ಮುಂಬೈ ಫ್ರಾಂಚೈಸಿ ಈಗಾಗಲೇ ಯುಎಇ ತಲುಪಿದೆ. ಕ್ವಾರಂಟೀನ್​ ಮುಗಿಸಿ ಅಭ್ಯಾಸಕ್ಕೂ ಇಳಿದಿದೆ. ಆದ್ರೆ, ತಂಡದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಮಾತ್ರ ಬೇರೆಯದೇ ಯೋಜನೆ ಹಾಕಿಕೊಂಡಂತಿದೆ. ಹೀಗಾಗಿಯೇ ತಂಡ ಅರಬ್ಬರ ನಾಡಿನ ಕಡೆ ಹಾರಿದ್ರೆ, ಬೆಂಗಳೂರಿನ ನ್ಯಾಷನಲ್​ ಕ್ರಿಕೆಟ್​​ ಅಕಾಡೆಮಿಗೆ ಪಾಂಡ್ಯ ಬಂದಿಳಿದ್ದಾರೆ. ಇದಕ್ಕೆ ಕಾರಣವೂ ಇದೆ.

blank

ಆಲ್​ರೌಂಡರ್​ ಕೋಟಾದಲ್ಲಿ ಟೀಮ್​ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ತಾ ಇರೋ ಹಾರ್ದಿಕ್​ ಪಾಂಡ್ಯ ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರ ತಂಡಕ್ಕೆ ನೆರವಾಗ್ತಿದ್ದಾರೆ. ಸುದೀರ್ಘ ವಿರಾಮದ ಬಳಿಕ ಲಂಕಾ ಸರಣಿಯಲ್ಲಿ ಬೌಲಿಂಗ್​ ಮಾಡಿದ್ರೂ ಸಂಪೂರ್ಣ ಕೋಟಾ ಮುಗಿಸಲಿಲ್ಲ. ಇದಲ್ಲದೇ ಬೌಲಿಂಗ್​ ಮಾಡುವಾಗ ಆಯಾಸಗೊಂಡಿದ್ದೂ ಕಂಡು ಬಂತು. ಹೀಗಾಗಿ ಬೌಲಿಂಗ್​ ಫಿಟ್​ನೆಸ್​​ ಕಂಡುಕೊಳ್ಳದ ಹಾರ್ದಿಕ್​, ವಿಶ್ವಕಪ್​ ಆಡೋದು​ ಅನುಮಾನ ಎನ್ನಲಾಗಿತ್ತು.

ಬೌಲಿಂಗ್​ ಬ್ಯಾಟಿಂಗ್​ ಎರಡರಲ್ಲೂ ಶಾರ್ದೂಲ್​ ಠಾಕೂರ್​​, ದೀಪಕ್​ ಚಹರ್​ ಕಮಾಲ್​ ಮಾಡಿದ್ದು ಕೂಡ ಹಾರ್ದಿಕ್​ಗೆ ಸ್ಥಾನ ಕುತ್ತು ತಂದಿದೆ. ಇದೀಗ ಸ್ಥಾನಕ್ಕಿರುವ ಈ ಕಾಂಪಿಟೇಶನ್​ ಹಾಗೂ ತನ್ನ ದೌರ್ಬಲ್ಯದ ಬಗ್ಗೆ ಸ್ಪಷ್ಟವಾಗೇ ಅರಿತಿರುವ ಪಾಂಡ್ಯ ಫಿಟ್​ನೆಸ್​​ ಕಂಡುಕೊಳ್ಳೋ ಯತ್ನಕ್ಕೆ ಬಿದ್ದಿದ್ದಾರೆ. ಹೀಗಾಗಿ ಇದೀಗ ಹಾರ್ದಿಕ್​ ಪಾಂಡ್ಯ ಎನ್​ಸಿಎ ಕ್ಯಾಂಪ್​ ಸೇರಿದ್ದಾರೆ. ಬೌಲಿಂಗ್​ ಫಿಟ್​ನೆಸ್​ ಕಂಡುಕೊಳ್ಳೋ ನಿಟ್ಟಿನಲ್ಲಿ, ಕೋಚ್​ ಪರಾಸ್​ ಮಾಂಬ್ರೆ ಗರಡಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

‘ವಿಶ್ವಕಪ್​ನಲ್ಲಿ ಹಾರ್ದಿಕ್ ಪಾತ್ರ ನಿರ್ಣಾಯಕ’

‘ಹಾರ್ದಿಕ್​ ವಿಚಾರದಲ್ಲಿ ನಿಧಾನವಾಗಿ ಎಲ್ಲವೂ ನಡೆಯುತ್ತಿದೆ. ನಾನು ಆತನನ್ನ ಹಾಕಿದ ಓವರ್​​ಗಳ ಆಧಾರದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ಆದ್ರೆ, ನಾವು ಹೇಗೆ ಆತನ ಮೇಲೆ ವರ್ಕೌಟ್​​ ಮಾಡಬೇಕು ಎಂಬ ಪ್ರಯೋಗ ನಡೆಯುತ್ತಿದೆ. ವಿಶ್ವಕಪ್​ ಬರುತ್ತಿದೆ. ಟೀಮ್​ ಇಂಡಿಯಾದಲ್ಲಿ ಹಾರ್ದಿಕ್​ ಪಾತ್ರ ಮಹತ್ವದ್ದು. ಹೀಗಾಗಿ ಆತನ ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​​​ ಬಗ್ಗೆ ಗಮನ ಹರಿಸುತ್ತಿದ್ದೇವೆ’
                                                                                                  -ಪರಾಸ್​ ಮಾಂಬ್ರೆ, ಎನ್​ಸಿಎ ಕೋಚ್​

blank

ಕೇವಲ ಹಾರ್ದಿಕ್​ ಪಾಂಡ್ಯ ಮಾತ್ರವಲ್ಲ.! ಟೀಮ್​ ಇಂಡಿಯಾಗೂ ಹಾರ್ದಿಕ್​ ಸೇವೆ ಅಗತ್ಯವಾಗಿಬೇಕಿದೆ. ಕೆಳ ಕ್ರಮಾಂಕದಲ್ಲಿ ಸ್ಫೋಟಕ ಇನ್ನಿಂಗ್ಸ್​ ಕಟ್ಟಬಲ್ಲ, ಫಿನಿಷರ್​ ಪಾತ್ರವನ್ನ ಸಮರ್ಥವಾಗಿ ಎದುರಿಸಬಲ್ಲ ಪಾಂಡ್ಯ ವಿಶ್ವಕಪ್​ನಂತಹ ಮಹತ್ವದ ಟೂರ್ನಿಗೆ ಬೇಕೆ ಬೇಕು. ಹಾಗಾಗಿಯೇ ಟೀಮ್​ ಮ್ಯಾನೇಜ್​ಮೆಂಟ್​​ ಸ್ವತಃ ಮುತುವರ್ಜಿ ವಹಿಸಿ ಐಪಿಎಲ್​ಗೂ ಮುನ್ನ ಪಾಂಡ್ಯರನ್ನ ಎನ್​ಸಿಎ ಕ್ಯಾಂಪ್​ಗೆ ಕಳಿಸಿದೆ ಅನ್ನೋದು ಕೂಡ ಮೂಲಗಳ ಮಾಹಿತಿಯಾಗಿದೆ.

ಒಟ್ಟಿನಲ್ಲಿ ಇಡೀ ತಂಡ ಐಪಿಎಲ್​ಗೆ ತೆರಳಿದೆ. ಹಾರ್ದಿಕ್​ ಪಾಂಡ್ಯ ಎನ್​​ಸಿಎಗೆ ಬಂದಿದ್ದು, ಬೌಲಿಂಗ್​ ಫಿಟ್​ನೆಸ್​​ ತಯಾರಿ ನಡೀತಾ ಇರೋದರ ಟಾರ್ಗೆಟ್​​​ ವಿಶ್ವಕಪ್​ ಅನ್ನೋದಂತೂ ಸ್ಪಷ್ಟ. ಅದರ ಜೊತೆಗೆ ಬಿಸಿಸಿಐ, ಟೀಮ್​ ಮ್ಯಾನೇಜ್​ಮೆಂಟ್​ ನೀಡ್ತಾ ಇರೋ ಸಹಕಾರ ನೋಡಿದ್ರೆ ತಂಡದಲ್ಲಿ ಹಾರ್ದಿಕ್​ಗೆ ಸ್ಥಾನ ಖಚಿತ ಅನ್ನೋ ಅನುಮಾನ ಬರದೇ ಇರಲ್ಲ..!

ಇದನ್ನೂ ಓದಿ:  RCBಗೆ ಬಲ ತಂದ ಆಲ್​ರೌಂಡರ್ಸ್.. IPL​​ ಕಿರೀಟಕ್ಕೆ ಮುತ್ತಿಕ್ಕಲು ಗೇಮ್​ ಪ್ಲಾನ್​..!

Source: newsfirstlive.com Source link