ಆಸ್ತಿಗಾಗಿ ಭಾವನಿಂದ್ಲೇ ನಾದಿನಿ, ಆಕೆ ಪತಿಯ ಕೊಲೆ -ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​

ಆಸ್ತಿಗಾಗಿ ಭಾವನಿಂದ್ಲೇ ನಾದಿನಿ, ಆಕೆ ಪತಿಯ ಕೊಲೆ -ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​

ಹಾಸನ: ಆಸ್ತಿ ವಿಚಾರಕ್ಕೆ ಸಂಬಂಧಿಸಿ, ಟಾಟಾ ಸುಮೋ ಹಾಯಿಸಿ ನಾದಿನಿ ಹಾಗೂ ಆಕೆಯ ಪತಿಯನ್ನು ಕೊಲೆ ಮಾಡಿದ್ದ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಚನ್ನರಾಯಪಟ್ಟಣದ ತಾಲೂಕು ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಉಪ್ಪಿನಹಳ್ಳಿ ಗ್ರಾಮದ ನಾಗರಾಜ, ಜಗದೀಶ, ಲತೇಶ, ದೀಪಕ್‌ ಶಿಕ್ಷೆಗೊಳಗಾದವರು. 2015ರ ಏಪ್ರಿಲ್ 17ರಂದು ಮೋಹನ್ ಮತ್ತು ಪವಿತ್ರ ಎಂಬುವವರು ಸ್ಕೂಟರ್‌ನಲ್ಲಿ ಹೋಗುವಾಗ ಹಿಂದಿನಿಂದ ಟಾಟಾ ಸುಮೋ ವಾಹನ ಗುದ್ದಿಸಿ ಕೊಲ್ಲಲಾಗಿತ್ತು. ತದನಂತರ ಅದನ್ನು ಆಕಸ್ಮಿಕ ಅಪಘಾತ ಎಂದು ಬಿಂಬಿಸಲಾಗಿತ್ತು.

ಪೊಲೀಸ್ ತನಿಖೆ ವೇಳೆ ಆಸ್ತಿಗಾಗಿ ಕೊಲೆ ಮಾಡಿರುವುದು ಪತ್ತೆಯಾಗಿದೆ. ಶಿಕ್ಷೆಗೊಳಗಾಗಿರುವ ನಾಗರಾಜ, ಕೊಲೆಯಾದ ಪವಿತ್ರ ಅವರ ಸ್ವಂತ ಅಕ್ಕನನ್ನು ಮದುವೆಯಾಗಿದ್ದ. ತನ್ನ ಹೆಂಡತಿಯ ತಂಗಿ ಮತ್ತು ಆಕೆಯ ಗಂಡನನ್ನು ಕೊಂದರೆ ಮಾವನ ಮನೆ ಆಸ್ತಿ ತನಗೆ ಸೇರುತ್ತೆ ಎಂದು ಆಸೆ ಪಟ್ಟಿದ್ದ. ಹೀಗಾಗಿ ನಾಗರಾಜ್​, ಜಗದೀಶ್, ಲತೇಶ್, ದೀಪಕ್‌ಗೆ ಹಣದ ಆಮಿಷ ತೋರಿಸಿ ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ. ಪೊಲೀಸ್ ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿತ್ತು.

ಇದನ್ನೂ ಓದಿ: ಮಾಲ್ಡೀವ್ಸ್​​ನಿಂದ ಮರಳಿದ ಯಡಿಯೂರಪ್ಪರನ್ನ ಕರೆದ್ಯೊಯ್ಯಲು ಬಂದ ಹೊಚ್ಚ ಹೊಸ ‘ರಥ’

Source: newsfirstlive.com Source link