ವೃದ್ಧ ದಂಪತಿಯ ಮರ್ಡರ್​ ಕೇಸ್: ಬಾಡಿಗೆ ಇದ್ದವನಿಂದಲೇ ಕೃತ್ಯ..! ನಾಲ್ವರು ಅರೆಸ್ಟ್​

ವೃದ್ಧ ದಂಪತಿಯ ಮರ್ಡರ್​ ಕೇಸ್: ಬಾಡಿಗೆ ಇದ್ದವನಿಂದಲೇ ಕೃತ್ಯ..! ನಾಲ್ವರು ಅರೆಸ್ಟ್​

ಬೆಂಗಳೂರು: ನಗರದಲ್ಲಿ ವೃದ್ದ ದಂಪತಿ ಶಾಂತರಾಜು ಪ್ರೇಮಲತಾರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ, ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ನಾರಾಯಣಪ್ಪ ಸೇರಿ ನಾಲ್ವರನ್ನು ಬಂಧಿಸಿರುವ ಪೊಲೀಸರು, ಹಿಂದೂಪುರ ಮೂಲದವನಾದ ನಾರಾಯಣಪ್ಪ, ಏಳು ವರ್ಷಗಳಿಂದ ವೃದ್ಧ ದಂಪತಿ ಮನೆಯಲ್ಲಿ ಬಾಡಿಗೆ ಇದ್ದ. ಇತ್ತೀಚಿಗೆ ವಿಪರೀತ ಸಾಲಕ್ಕೆ ಸಿಲುಕಿ ಸ್ನೇಹಿತರ ಜೊತೆ ಸೇರಿ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಪೊಲೀಸ್​ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಹಾಡಹಗಲೇ ವೃದ್ಧ ದಂಪತಿಯನ್ನು ಬರ್ಬರವಾಗಿ ಕೊಂದ ದುಷ್ಕರ್ಮಿಗಳು

ಆರೋಪಿ ನಾರಾಯಣಪ್ಪನಿಗೆ ವೃದ್ಧ ದಂಪತಿ ಚಿನ್ನಾಭರಣ ಎಲ್ಲಿಟ್ಟಿದ್ದಾರೆ ಮತ್ತು ಅವರ ಎಲ್ಲ ಹಣಕಾಸು ವ್ಯವಹಾರ ತಿಳಿದಿತ್ತು ಎನ್ನಲಾಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನದಂದು ಇಬ್ಬರನ್ನು ಕೊಲೆ ಮಾಡಿದ್ದ ಆರೋಪಿಗಳು ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ಹಣ ದೋಚಿ ಪರಾರಿಯಾಗಿದ್ದರು.

Source: newsfirstlive.com Source link