ಪಂಜ್​​ಶಿರ್ ಪ್ರಾಂತ್ಯ ವಶಕ್ಕೆ ಪಡೆಯಲು ಕುತಂತ್ರ -ಮಹಿಳೆ, ಮಕ್ಕಳನ್ನೇ ಗುರಾಣಿಯಾಗಿ ಬಳಸಿಕೊಳ್ತಿರೋ ತಾಲಿಬಾನ್​​

ಪಂಜ್​​ಶಿರ್ ಪ್ರಾಂತ್ಯ ವಶಕ್ಕೆ ಪಡೆಯಲು ಕುತಂತ್ರ -ಮಹಿಳೆ, ಮಕ್ಕಳನ್ನೇ ಗುರಾಣಿಯಾಗಿ ಬಳಸಿಕೊಳ್ತಿರೋ ತಾಲಿಬಾನ್​​

ತಾಲಿಬಾನ್​ ಕಳೆದೊಂದು ವಾರದಿಂದ ವಿಶ್ವದ ಜನರ ಚಿತ್ತವನ್ನ ತನ್ನತ್ತ ತಿರುಗಿಸಿಕೊಂಡಿರುವ ಕ್ರೂರ ಪಡೆ. ಅಫ್ಘಾನಿಸ್ತಾನದಲ್ಲಿ ಹಮ್ಮುರಾಬಿ ಶಾಸನವನ್ನ ಕೈಗೆತ್ತಿಕೊಂಡು ಇನ್ನಿಲ್ಲದಂತೆ ಅಲ್ಲಿನ ಜನರ ಪಾಲಿಗೆ ನರಕ ದರ್ಶನ ಮಾಡಿಸ್ತಿರೋ ಈ ನರರಾಕ್ಷಸರಿಗೀಗ ಪಂಜ್​ಶೀರ್​ ಸಿಂಹಗಳು ದುಸ್ವಪ್ನವಾಗಿವೆ.

ರಣಹೇಡಿ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಸಿ ಮೆರೆದಾಡುತ್ತಿದ್ದಾರೆ. ಆದರೆ ಅಫ್ಘಾನಿಸ್ತಾನದಲ್ಲಿ ಪಂಜ್​ಶಿರ್ ಪ್ರಾಂತ್ಯದ ಸಿಂಹಗಳು ತಾಲಿಬಾನಿಗಳಿಗೆ ದುಸ್ವಪ್ನವಾಗಿ ಕಾಡುತ್ತಿದೆ. ಆದರೆ ಹೇಗಾದ್ರು ಮಾಡಿ ಪ್ರಾಂತ್ಯವನ್ನು ವಶಕ್ಕೆ ಪಡೆಯಲೇಬೇಕು ಎಂದು ಕುತಂತ್ರ ನಡೆಸಲು ಮುಂದಾಗಿದ್ದು, ಪಂಜ್​​ಶಿರ್ ಪ್ರಾಂತ್ಯದ ಅಂದರಬ್ ಕಣಿವೆ ಆಹಾರ ಹಾಗೂ ಇಂಧನ ಪೂರೈಕೆಯಾಗದಂತೆ ತಡೆಯೊಡ್ಡಿದೆ.

ಈ ಕುರಿತು ಮಾಹಿತಿ ನೀಡಿರುವ ಅಫ್ಘಾನಿಸ್ತಾನ ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್, ತಾಲಿಬಾನಿಗಳು ಆಹಾರ ಹಾಗೂ ಇಂಧನಗಳನ್ನು ಅಂದರಬ್​ ಕಣಿವೆಗೆ ಸಾಗಾಟ ಮಾಡದಂತೆ ತಡೆಯೊಡ್ಡಿದ್ದಾರೆ. ಅಫ್ಘಾನ್​ ಪರಿಸ್ಥಿತಿ ಭೀಕರವಾಗಿದೆ. ಸಾವಿರಾರು ಮಹಿಳೆ ತಮ್ಮ ಮಕ್ಕಳನ್ನು ಕರೆದುಕೊಂಡು ಪರ್ವತ ಪ್ರದೇಶಗಳಿಗೆ ಪಲಾಯನ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ತಾಲಿಬಾನಿಗಳು ಮಹಿಳೆಯರು ಹಾಗೂ ಮಕ್ಕಳನ್ನು ಅಪಹರಣ ಮಾಡಿ, ಅವರನ್ನು ಗುರಾಣಿಯಾಗಿ ಬಳಸಿಕೊಂಡು ಕಣಿವೆಯ ಒಳ ನುಸುಳಲು ಹಾಗೂ ಮನೆ ಮನೆಯನ್ನು ಹುಡುಕಾಟ ನಡೆಸಲು ಮುಂದಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Source: newsfirstlive.com Source link