ಡ್ರಗ್ಸ್ ಕೇಸ್ – ಸಂಜನಾ, ರಾಗಿಣಿ ದ್ವಿವೇದಿಗೆ ಸಂಕಷ್ಟ!

– ಡ್ರಗ್ಸ್ ಸ್ಯಾಂಪಲ್ಸ್ ವರದಿ ಪಾಸಿಟಿವ್!

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರ ಬಂದಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಮತ್ತೆ ಸಂಕಷ್ಟ ಎದುರಾಗಿದೆ. ಎಫ್‍ಎಸ್‍ಎಲ್ ವರದಿಯಲ್ಲಿ ಇಬ್ಬರು ನಟಿಯರು ಡ್ರಗ್ಸ್ ಸೇವನೆ ಮಾಡಿರೋದು ದೃಢವಾಗಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹೈದರಾಬಾದ್ ನ ಸಿಎಸ್‍ಎಫ್‍ಎಲ್‍ನ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿಣಿ, ಸಂಜನಾಗೆ ರಾಜಾತಿಥ್ಯ

ಆರೋಪಿ ಡ್ರಗ್ಸ್ ಸೇವನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವರ್ಷಾನುಗಟ್ಟಲೇ ತಲೆ ಮರಿಸಿಕೊಳ್ಳುತ್ತಿದ್ದರು. ಆದ್ದರಿಂದ ಮಾದಕ ವಸ್ತು ಸೇವನೆ ಮಾಡಿರೋದು ದೃಢಪಡಿಸೋದು ಕಷ್ಟವಾಗುತ್ತಿತ್ತು. ಆ ಕಾರಣ ಸಿಸಿಬಿ ಪೊಲೀಸರು ತಲೆ ಕೂದಲಿನ ಸ್ಯಾಂಪಲ್ ಪಡೆದು ಹೈದರಾಬಾದ್ ಎಫ್‍ಎಸ್‍ಎಲ್ ಗೆ ಕಳಿಸಿಕೊಡಲಾಗಿತ್ತು. ಇದನ್ನೂ ಓದಿ: ರಾಗಿಣಿ, ಸಂಜನಾಗೆ ಬಿಗ್ ಶಾಕ್ – ಮೊಬೈಲ್‍ನಲ್ಲಿ ಸಿಕ್ಕಿದೆ ಸ್ಫೋಟಕ ಸಾಕ್ಷ್ಯ!

Source: publictv.in Source link