ಸ್ಯಾಂಡಲ್​​ವುಡ್​​ ಡ್ರಗ್ ಕೇಸ್: ಆರೋಪಿಗಳು ಡ್ರಗ್ ಸೇವಿಸಿರೋದು FSL ವರದಿಯಲ್ಲಿ ದೃಢ!

ಸ್ಯಾಂಡಲ್​​ವುಡ್​​ ಡ್ರಗ್ ಕೇಸ್: ಆರೋಪಿಗಳು ಡ್ರಗ್ ಸೇವಿಸಿರೋದು FSL ವರದಿಯಲ್ಲಿ ದೃಢ!

ಬೆಂಗಳೂರು: ಸ್ಯಾಂಡಲ್​​ವುಡ್​ ಡ್ರಗ್​ ಪ್ರಕರಣದಲ್ಲಿ ಬಂಧನವಾಗಿದ್ದ ಆರೋಪಿಗಳ ಸಿಎಸ್​​ಎಫ್​ಎಲ್​​ ವರದಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದ್ದು, ವರದಿಯಲ್ಲಿ ಆರೋಪಿಗಳು ಡ್ರಗ್ಸ್​ ಸೇವನೆ ಮಾಡಿರುವುದು ದೃಢವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣದಲ್ಲಿ ರಾಗಿಣಿ, ಸಂಜನಾ, ವೀರೇನ್ ಖನ್ನಾ ಸೇರಿದಂತೆ ಹಲವು ಆರೋಪಿಗಳ ಹೇರ್ ಸ್ಯಾಂಪಲ್ ಗಳನ್ನು ಸಿಸಿಬಿ ಪೊಲೀಸರು ಪರೀಕ್ಷೆಗಾಗಿ ಹೈದ್ರಾಬಾದ್ ನ CSFL ಕಚೇರಿಗೆ ಕಳುಹಿಸಿದ್ದರು. 2020ರ ಅಕ್ಟೋಬರ್ ನಲ್ಲಿ ಕಳುಹಿಸಿದ್ದ ಹೇರ್ ಸ್ಯಾಂಪಲ್​​​ಗಳಲ್ಲಿ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರೋದು ಕನ್ಫರ್ಮ್ ಆಗಿದೆ ಎನ್ನಲಾಗಿದೆ.

ಬರೋಬ್ಬರಿ 10 ತಿಂಗಳ ಬಳಿಕ ಎಫ್ಎಸ್ಎಲ್ ರಿಪೋರ್ಟ್ ಸಿಸಿಬಿ ಪೊಲೀಸರ ಕೈ ಸೇರಿದ್ದು, ಪ್ರಕರಣದ ತನಿಖಾಧಿಕಾರಿ ಇನ್ಸ್​​ಪೆಕ್ಟರ್ ಪುನೀತ್ ಅವರು ಎಫ್​​ಎಸ್​ಎಲ್​​ ವರದಿಯನ್ನು ಕೋರ್ಟ್​​ಗೆ ಸಲ್ಲಿಕೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿಯರಾದ ರಾಗಿಣಿ, ಸಂಜನಾ ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

Source: newsfirstlive.com Source link