‘ಈ ಸಲ ಕಪ್​ ನಮ್ದಾಗದಿದ್ರೆ’ ಕ್ಯಾಪ್ಟನ್ಸಿಯಿಂದ ಕೊಹ್ಲಿಗೆ ಗೇಟ್​ಪಾಸ್​​?

‘ಈ ಸಲ ಕಪ್​ ನಮ್ದಾಗದಿದ್ರೆ’ ಕ್ಯಾಪ್ಟನ್ಸಿಯಿಂದ ಕೊಹ್ಲಿಗೆ ಗೇಟ್​ಪಾಸ್​​?

ಕಳಪೆ ಫಾರ್ಮ್​ನಿಂದ ಕಂಗೆಟ್ಟಿರುವ ಕೊಹ್ಲಿ ಟೀಮ್​ ಇಂಡಿಯಾ ನಾಯಕನ ಸ್ಥಾನದಿಂದ ಕೆಳಗಿಳಿತಾರಾ ಅನ್ನೋ ಚರ್ಚೆ ಹಲವು ದಿನಗಳಿಂದಲೂ ನಡೀತಾ ಇದೆ. ಇದೀಗ ಐಪಿಎಲ್​ನಲ್ಲೂ ಈ ಬಾರಿ ‘ಕಪ್​ ನಮ್ದಾಗದಿದ್ರೆ’ ವಿರಾಟ್​​ ಕ್ಯಾಪ್ಟೆನ್ಸಿಯಿಂದ ಕೆಳಗಿಳಿಯೋದು ಕನ್​ಫರ್ಮ್​​ ಅನ್ನೋ ಸುದ್ದಿ ಸದ್ದು ಮಾಡ್ತಿದೆ. ನಿಜಕ್ಕೂ ಫ್ರಾಂಚೈಸಿ ಕೊಹ್ಲಿಯನ್ನ ಕೆಳಗಿಳಿಸೋ ಲೆಕ್ಕಾಚಾರದಲ್ಲಿದ್ಯಾ.?

ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಪಾಲಿಗೆ ಮುಂಬರುವ 3 ರಿಂದ 4 ತಿಂಗಳುಗಳು ಟೆಸ್ಟಿಂಗ್​ ಟೈಮ್​ ಅಂದ್ರೆ ತಪ್ಪಾಗಲ್ಲ. ಮುಂದಿನ 4 ತಿಂಗಳಲ್ಲಿ ನೀಡೋ ಪ್ರದರ್ಶನ ಕೊಹ್ಲಿಯ ಕರಿಯರ್​​​ಯನ್ನೇ ಬದಲಾಯಿಸಲಿದೆ. ಸದ್ಯ ಇಂಗ್ಲೆಂಡ್​​​ ಪ್ರವಾಸದಲ್ಲಿರುವ ಕೊಹ್ಲಿ ಗಮನ ಕೇವಲ ಆಂಗ್ಲರ ವಿರುದ್ಧ ಸರಣಿ ಗೆಲುವಿನ ಮೇಲಿದೆ ಎಂದು ನೀವು ಅಂದುಕೊಂಡಿದ್ರೆ ಅದು ಖಂಡಿತಾ ತಪ್ಪು.! ಟೆಸ್ಟ್​​ ಸರಣಿ ಗೆಲುವಿನೊಂದಿಗೆ ತನ್ನ ಭವಿಷ್ಯದ ವಿಚಾರ ಕೊಹ್ಲಿಯನ್ನ ಗೊಂದಲದಲ್ಲಿರಿಸಿದೆ.

blank

ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಶತಕ ಸಿಡಿಸಿ 2 ವರ್ಷಗಳು ಉರುಳಿವೆ. ಕಳೆದ 2 ವರ್ಷಗಳಲ್ಲಿ ರನ್​ಗಳಿಕೆಯ ಸರಾಸರಿ ಕುಸಿದಿದೆ. ತನ್ನ ಕಳಪೆ ಪ್ರದರ್ಶನ ತಂಡಕ್ಕೆ ಹಿನ್ನಡೆಯಾಗ್ತಿದೆ. ಸದ್ಯ ಕೊಹ್ಲಿಯನ್ನ ಕಾಡ್ತಿರೋ ಪ್ರಮುಖ ವಿಚಾರಗಳಿವು. ಇದರ ಜೊತೆಗೆ ನಾಯಕನಾಗಿ ಯಾವುದೇ ಐಸಿಸಿ ಟ್ರೋಫಿಯನ್ನ ಗೆಲ್ಲಲು ವಿಫಲವಾಗಿರೋದು ಕೂಡ ಕೊಹ್ಲಿಗೆ ಹಿನ್ನಡೆಯಾಗಿದೆ. ಹೀಗಾಗಿಯೇ ಟಿ20 ವಿಶ್ವಕಪ್​ನಲ್ಲಿ ಭಾರತ ಚಾಂಪಿಯನ್​ ಪಟ್ಟಕ್ಕೇರದಿದ್ರೆ, ಕೊಹ್ಲಿ ನಾಯಕನ ಪಟ್ಟದಿಂದ ಇಳೀತಾರೆ ಅನ್ನೋ ಸುದ್ದಿಗಳು ಓಡಾಡ್ತಿವೆ.

ವಿರಾಟ್​​ ಕೊಹ್ಲಿಯ ಐಪಿಎಲ್​ ನಾಯಕನ ಪಟ್ಟವೂ ಅಭದ್ರ..!
ಕಪ್​ ನಮ್ದಾಗದಿದ್ರೆ ಕ್ಯಾಪ್ಟನ್ಸಿಯಿಂದ ಕೊಹ್ಲಿಗೆ ಗೇಟ್​ಪಾಸ್​​..?

ಯೆಸ್​​​..! ಇಷ್ಟು ದಿನ ಕೊಹ್ಲಿಯ ಟೀಮ್​ ಇಂಡಿಯಾ ನಾಯಕನ ಸ್ಥಾನ ಚರ್ಚೆಗೆ ಕಾರಣವಾಗಿತ್ತು. ಇದೀಗ ಐಪಿಎಲ್​ ನಾಯಕನ ಪಟ್ಟದ ಚರ್ಚೆಯೂ ಹುಟ್ಟಿಕೊಂಡಿದೆ. ನಾಯಕನಾಗಿ ಒಂದೇ ಒಂದು ಬಾರಿ ತಂಡಕ್ಕೆ ಕೊಹ್ಲಿ ಕಪ್​ ಗೆಲ್ಲಿಸಿ ಕೊಟ್ಟಿಲ್ಲ ಅನ್ನೋದೇ ಇದಕ್ಕೆ ಕಾರಣವಾಗಿರೋದು. ಒಂದು ವೇಳೆ ಈ ಬಾರಿಯೂ ಕೊಹ್ಲಿ ತಂಡವನ್ನ ಚಾಂಪಿಯನ್​ ಮಾಡಲಿಲ್ಲ ಅಂದ್ರೆ, ನಾಯಕನ ಸ್ಥಾನದಿಂದ ತಲೆದಂಡ ಖಚಿತ ಅನ್ನೋದು ಕ್ರಿಕೆಟ್​ ವಲಯದ ಸುದ್ದಿಯಾಗಿದೆ.

ಸದ್ಯ ಕೊಹ್ಲಿ ಫಾರ್ಮ್​​ನಲ್ಲಿಲ್ಲ, ಐಸಿಸಿ ಟ್ರೊಫಿ ಗೆದ್ದಿಲ್ಲ ಅನ್ನೋದು ಕೊಹ್ಲಿ ತಲೆ ದಂಡಕ್ಕೆ ಕಾರಣವಾಗಿರೋ ವಿಚಾರ ಅಲ್ಲವೇ ಅಲ್ಲ. ಆರ್​ಸಿಬಿಯನ್ನ ನಾಯಕನಾಗಿ ಕೊಹ್ಲಿ ಮುನ್ನಡೆಸಿದ ಆವೃತ್ತಿಯಿಂದ ಈವರೆಗೆ ತಂಡ ನೀಡಿದ ಪ್ರದರ್ಶನದ ಆಧಾರವನ್ನೇ ಇಟ್ಟುಕೊಂಡು ನಾಯಕನ ಬದಲಾವಣೆಯ ನಿರ್ಧಾರಕ್ಕೆ ಆರ್​ಸಿಬಿ ಬಂದಿದೆ. 2012ರ ಬಳಿಕ ಪೂರ್ಣ ಪ್ರಮಾಣದ ನಾಯಕನಾಗಿ ಜವಾಬ್ದಾರಿ ಹೊತ್ತ ಕೊಹ್ಲಿ ತಂಡವನ್ನ ಒಂದು ಬಾರಿ ಮಾತ್ರ ಫೈನಲ್ಸ್​​ವರೆಗೆ ಕೊಂಡೊಯ್ದಿದ್ದಾರೆ. ಉಳಿದಂತೆ 2 ಬಾರಿ ತಂಡ ಪ್ಲೆ ಆಫ್​​ ಪ್ರವೇಶಿಸಿದ್ರೆ, ಬರೋಬ್ಬರಿ 5 ಬಾರಿ ಲೀಗ್​ ಹಂತದಿಂದಲೇ ನಿರ್ಗಮಿಸಿದೆ.

blank

ಸರಣಿಯ ಲೆಕ್ಕಾಚಾರ ಮಾತ್ರವಲ್ಲ, ಪಂದ್ಯಗಳ ಲೆಕ್ಕಾಚಾರದಲ್ಲೂ ಕೊಹ್ಲಿ ನಾಯಕತ್ವದಲ್ಲಿ ತಂಡ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚಾಗಿದೆ. ಆರ್​​​ಸಿಬಿ ಪರ ತಂಡವನ್ನ 132 ಪಂದ್ಯಗಳಲ್ಲಿ ಮುನ್ನಡೆಸಿರುವ ಕೊಹ್ಲಿ, 48.04ರ ಗೆಲುವಿನ ಸರಾಸರಿ ಹೊಂದಿದ್ದಾರೆ. ಕೊಹ್ಲಿಗೆ ಹೋಲಿಸಿದ್ರೆ, ಡೇನಿಯಲ್​ ವೆಟ್ಟೋರಿ 53.57, ಅನಿಲ್​ ಕುಂಬ್ಳೆ 54.28ರ ಗೆಲುವಿನ ಸರಾಸರಿಯೊಂದಿಗೆ ಮುಂದಿದ್ದಾರೆ.

ನಾಯಕನಾಗಿ ವಿರಾಟ್​ ಕೊಹ್ಲಿ​ ಮುನ್ನಡೆಸಿದ 132 ಪಂದ್ಯಗಳ ಪೈಕಿ ಆರ್​ಸಿಬಿ 60 ಪಂದ್ಯ ಗೆದ್ದಿದ್ರೆ, 65 ಪಂದ್ಯಗಳಲ್ಲಿ ಸೋಲುಂಡಿದೆ. ಇನ್ನುಳಿದಂತೆ 3 ಪಂದ್ಯ ಟೈನಲ್ಲಿ ಅಂತ್ಯವಾಗಿದ್ರೆ, 4 ಪಂದ್ಯ ರದ್ದಾಗಿವೆ. ಇಷ್ಟೇ ಅಲ್ಲ.. 14ನೇ ಆವೃತ್ತಿಯ ಮೊದಲ ಹಂತದ ಪಂದ್ಯಗಳಲ್ಲಿ ಕೊಹ್ಲಿ ಬಿಗ್​ ಇನ್ನಿಂಗ್ಸ್​ ಕಟ್ಟುವಲ್ಲಿ ಎಡವಿದ್ದು ಕೂಡ ಒಂದು ಕಾರಣವಾಗಿದೆ. ಮೊದಲ ಹಂತದಲ್ಲಿ ಆಡಿದ 7 ಪಂದ್ಯಗಳಲ್ಲಿ ಕೊಹ್ಲಿ ಕಲೆ ಹಾಕಿದ್ದು ಕೇವಲ 198 ರನ್​..!

blank

ಈ ಅಂಕಿ-ಅಂಶಗಳು ಫಲಿತಾಂಶದ ಆಧಾರದಲ್ಲಿ ಕೊಹ್ಲಿಯನ್ನ ನಾಯಕತ್ವದಿಂದ ಕೆಳಗಿಳಿಸೋದು ಅಷ್ಟು ಸುಲಭದ ನಿರ್ಧಾರವಲ್ಲ. ಅಂಕಿ-ಅಂಶಗಳೇನೋ ಕೊಹ್ಲಿಯ ವಿರುದ್ಧವಾಗಿಯೇ ಇವೆ. ಆದ್ರೆ, ವಿವಿಧ ಮೂಲಗಳಿಂದ ತಂಡಕ್ಕೆ ಬರ್ತಾ ಇರೋ ​ಆದಾಯದ ಮೂಲ ಕೊಹ್ಲಿಯೇ ಆಗಿದ್ದಾರೆ ಅನ್ನೋದನ್ನ ಮರೆಯುವಂತಿಲ್ಲ. ಹೀಗಾಗಿ ಮೆಗಾ ಆಕ್ಷನ್​ಗೂ ಮುಂಚೆ ಏನಾಗಬಹುದು ಅನ್ನೋದು ಸದ್ಯದ ಕುತೂಹಲವಷ್ಟೇ!

Source: newsfirstlive.com Source link