ನಿಮ್ಮನ್ನು ಮದುವೆಯಾಗುತ್ತೇನೆ ಎಂದ ಅಭಿಮಾನಿಗೆ ಖುಷ್ಬೂ ಉತ್ತರ

ಬೆಂಗಳೂರು: ರಣಧೀರ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿರುವ ನಟಿ ಖುಷ್ಬೂ ಸುಂದರ್ ಅವರನ್ನು ಮದುವೆಯಾಗಲು ಬಯಸಿದ ಅಭಿಮಾನಿಯೊಬ್ಬರಿಗೆ ಕೊಟ್ಟಿರುವ ಉತ್ತರ ಸಖತ್ ವೈರಲ್ ಆಗುತ್ತಿದೆ.

ಖುಷ್ಬೂ ಸುಂದರ್ ಅವರು 10 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿರುವ ವಿಚಾರವನ್ನು ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಂಡಿದ್ದರು. ಹೊಸ ಲುಕ್ ಮೂಲಕವಾಗಿ ಅಭಿಮಾನಿಗಳ ಗಮನ ಸೆಳೆಯುತ್ತಿರುವ ಖುಷ್ಬೂ ಅವರಿಗೆ ಅಭಿಮಾನಿ ಮದುವೆಯೆ ಪ್ರಪೋಸಲ್‍ಅನ್ನು ಸೋಶಿಯಲ್ ಮೀಡಿಯಾದಲ್ಲಿ ಇಟ್ಟಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ, ದೇಹ ಇಲ್ಲೇ ಮಣ್ಣಾದರೂ ಸೈ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್

ನಾನು ನಿಮ್ಮನ್ನು ಮದುವೆಯಾಗಲೂ ಬಯಸಿದ್ದೇನೆ ಮೇಡಂ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖುಷ್ಬೂ ಓ..ಓ.. ಕ್ಷಮಿಸಿ ನೀವು ತುಂಬಾ ತಡವಾಗಿ ಹೇಳಿದ್ದೀರ. ಸರಿಯಾಗಿ 21 ವರ್ಷ ತಡವಾಗಿ ಹೇಳಿದ್ದೀರ. ನನ್ನ ಗಂಡನೊಂದಿಗೆ ಈ ವಿಚಾರವಾಗಿ ಪರಿಶಲೀಸೋಣ ಎಂದು ಟ್ವೀಟ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ಸಂಜನಾ, ರಾಗಿಣಿ ದ್ವಿವೇದಿಗೆ ಸಂಕಷ್ಟ!

10 ಕೆಜಿ ತೂಕವನ್ನು ವರ್ಕೌಟ್ ಮೂಲಕವಾಗಿ ಇಳಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 10 ಕೆಜಿ ತೂಕವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದಾರೆ. ನಟಿ ಖುಷ್ಬೂ ಸುಂದರ್ ಅವರ ಸಣ್ಣಗಾಗಿ ಅಚ್ಚರಿ ಮೂಡಿಸಿದ್ದಾರೆ. ಇದೀಗ ಕಠಿಣ ಪರಿಶ್ರಮವು ಫಲಿತಾಂಶಗಳನ್ನು ನೀಡಿದಾಗ, ಸಂತೋಷವನ್ನು ವಿವರಿಸಲು ಸಾಧ್ಯವಿಲ್ಲ ಎಂದು ತೂಕ ಇಳಿಸಿಕೊಂಡ ನಂತರ ತೆಗೆಸಿರುವ ಕೆಲವು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೇಗೆ ಖುಷ್ಬೂ ಸುಂದರ್ ತೂಕ ಇಳಿಸಿಕೊಂಡರು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ತೂಕ ಕಳೆದುಕೊಂಡ ರಣಧೀರ ನಟಿ

Source: publictv.in Source link