ಮೆಗಾಸ್ಟಾರ್​ ಬರ್ತ್​​​ಡೇ ಸಂಭ್ರಮದಲ್ಲಿ ಒಂದಾಯ್ತು ಕೊನಿಡೆಲಾ ಕುಟುಂಬ!

ಮೆಗಾಸ್ಟಾರ್​ ಬರ್ತ್​​​ಡೇ ಸಂಭ್ರಮದಲ್ಲಿ ಒಂದಾಯ್ತು ಕೊನಿಡೆಲಾ ಕುಟುಂಬ!

ಟಾಲಿವುಡ್​ನ ಮೆಗಾಸ್ಟಾರ್​ ಜಿರಂಜೀವಿ ಮೊನ್ನೆಯಷ್ಟೇ 66ನೇ ವಸಂತಕ್ಕೆ ಕಾಲಿಟ್ಟಿದ್ರು. ಈ ವೇಳೆ ಟಾಲಿವುಡ್​ನ ಪ್ರತಿಯೊಬ್ಬ ನಟ- ನಟಿಯರು ಚಿರಂಜೀವಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು. ಇನ್ನು ಚಿರು ಬರ್ತ್​ಡೇ ಅಂದ್ರೆ ಇಡೀ ಟಾಲಿವುಡ್​ ಅಂಗಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಿರ್ಮಾಪಕ ದಿಲ್ ರಾಜು, ನಿರ್ದೇಶಕ ಕೊರಟಾಲ ಶಿವ ಹೀಗೆ ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಚಿರು ಮನೆಗೆ ಭೇಟಿ ನೀಡಿ ಮೆಗಾಸ್ಟಾರ್​ ಹುಟ್ಟುಹಬ್ಬದ ಶುಭ ಕೋರಿದ್ದರು.

ವಿಶೇಷ ಎಂದರೇ ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ ಕೊನಿಡೆಲಾ ಕುಟುಂಬಸ್ಥರೆಲ್ಲರೂ ಒಟ್ಟಿಗೆ ಸೇರಿ ಸಂಭ್ರಮಾಚಾರಣೆ ಮಾಡಿದ್ದಾರೆ. ಚಿರು ಸಹೋದರರಾದ ನಾಗಬಾಬು, ಟಾಲಿವುಡ್ ಪವರ್​ ಸ್ಟಾರ್ ಪವನ್​ ಕಲ್ಯಾಣ್​, ಚಿರು ಪುತ್ರ ರಾಮ್ ಚರಣ್, ಸೊಸೆ ಉಪಾಸನಾ ಸೇರಿದಂತೆ ಅಲ್ಲು ಕುಟುಂಬದಿಂದ ಅಲ್ಲು ಅರವಿಂದ್ ಸೇರಿದಂತೆ ವರುಣ್ ತೇಜ್, ಸಾಯಿ ಧರಮ್ ತೇಜ್, ವೈಷ್ಣವ್, ನಿಹಾರಿಕಾ, ಸುಶ್ಮಿತಾ ಕೊನಿಡೆಲಾ ಎಲ್ಲರ ಸಮ್ಮುಖದಲ್ಲಿ ಚಿರು ಕೇಕ್​ ಕತ್ತರಿಸಿ ತಮ್ಮ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

 

View this post on Instagram

 

A post shared by Sai Dharam Tej (@jetpanja)

Source: newsfirstlive.com Source link