ನಯನತಾರ, ವಿಘ್ನೇಶ್ ಶಿವನ್ ಜೊತೆ ಸಮಂತಾ ಕಾಣಿಸಿಕೊಂಡಿದೇಕೆ?

ನಯನತಾರ, ವಿಘ್ನೇಶ್ ಶಿವನ್ ಜೊತೆ ಸಮಂತಾ ಕಾಣಿಸಿಕೊಂಡಿದೇಕೆ?

ಸಮಂತಾ ಅಕ್ಕಿನೇನಿ ಕಳೆದ ವಾರವಷ್ಟೇ ದಿ ಫ್ಯಾಮಿಲಿ ಮ್ಯಾನ್ 2 ಸೀರಿಸ್​ ನಟನೆಗಾಗಿ ಮೆಲ್ಬೋರ್ನ್‌ನ ಭಾರತೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದರು. ಇನ್ನು ಈ ಸಂಭ್ರಮವನ್ನು ಸಮಂತಾ, ನಯನತಾರಾ, ವಿಘ್ನೇಶ್ ಶಿವನ್ ಮತ್ತು ವಿಜಯ್ ಸೇತುಪತಿ ಅವರ ಜೊತೆ ಆಚರಿಸಿಕೊಂಡಿದ್ದಾರೆ.

ಹೌದು, ನಟಿ ಸಮಂತಾ ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕಾತುವಾಕುಲ ರೆಂಡು ಕಾದಲ್’​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟಿ ನಯನತಾರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿ್ಗ್ಉ, ವಿಜಯ್ ಸೇತುಪತಿ, ಸಮಂತಾ ಅಕ್ಕಿನೇನಿ, ನಯನತಾರಾ ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಸದ್ಯ ಚೆನ್ನೈನಲ್ಲಿ ‘ಕಾತುವಾಕುಲ ರೆಂಡು ಕಾದಲ್’​ ಸಿನಿಮಾದ ಶೂಟಿಂಗ್​ ನಡಿಯುತ್ತಿದ್ದು, ಚಿತ್ರದ ನಿರ್ದೇಶಕ ವಿಘ್ನೇಶ್ ಶಿವನ್, ವಿಜಯ್ ಸೇತುಪತಿ ಮತ್ತು ನಯನತಾರಾ ಶೂಟಿಂಗ್​ ಸೆಟ್​ಗೆ ಕೇಕ್​ ತರಿಸಿ ಸಮಂತಾ ಕೈಯಲ್ಲಿ ಕೇಕ್​ ಕತ್ತರಿಸುವ ಮೂಲಕ ಅವರಿಗೆ ಶುಭಾಶಯ ಕೋರಿದ್ದಾರೆ.

 

Source: newsfirstlive.com Source link