RCB ತಂಡಕ್ಕೆ ಪವರ್ ಪ್ಲೇಯರ್ ಎಂಟ್ರಿ.. ಮ್ಯಾಕ್ಸಿ, ABDಯಷ್ಟೇ ಅಪಾಯಕಾರಿಯಾದ ಆಟಗಾರ ಯಾರು ಗೊತ್ತಾ?

RCB ತಂಡಕ್ಕೆ ಪವರ್ ಪ್ಲೇಯರ್ ಎಂಟ್ರಿ.. ಮ್ಯಾಕ್ಸಿ, ABDಯಷ್ಟೇ ಅಪಾಯಕಾರಿಯಾದ ಆಟಗಾರ ಯಾರು ಗೊತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪವರ್ ಫುಲ್​ ಪ್ಲೇಯರ್​ ಒಬ್ಬನ ಎಂಟ್ರಿಯಾಗಿದೆ. ಈತನ ಎಂಟ್ರಿ ಆರ್​ಸಿಬಿಯ ಮಧ್ಯಮ ಕ್ರಮಾಂಕದ ಬಲ ಹೆಚ್ಚಿಸಿದೆ. ಸ್ವತಃ ಕೋಚ್​ ಮೈಕ್​ ಹಸನ್​ರೇ ಇತನ್ನನ್ನ ಮ್ಯಾಕ್ಸ್​ವೆಲ್​, ಎಬಿಡಿಗೂ ಪರ್ಯಾಯ ಆಟಗಾರ ಎಂದಿದ್ದಾರೆ. ಹಾಗಾದ್ರೆ ಸ್ಟಾರ್​​ಗಳನ್ನೇ ರಿಪ್ಲೇಸ್​ ಮಾಡಬಲ್ಲ ಪವರ್ ಪ್ಲೇಯರ್ ಯಾರು..?

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಸಾಧಾರಣ ಬ್ಯಾಟಿಂಗ್​ ಲೈನ್​​ಅಪ್ ಹೊಂದಿರುವ ತಂಡಗಳಲ್ಲಿ ಒಂದು..! ಟಾಪ್ ಆರ್ಡರ್​​ನಲ್ಲಿ ವಿರಾಟ್​ ಕೊಹ್ಲಿ, ಪಡಿಕ್ಕಲ್​ರಂಥ ದಾಂಡಿಗರ ಬಲ ಹೊಂದಿರೋ ಆರ್​​ಸಿಬಿ ಮಿಡಲ್ ಆರ್ಡರ್​​ನಲ್ಲಿ ಮ್ಯಾಕ್ಸ್​ವೆಲ್, ಎಬಿ ಡಿವಿಲಿಯರ್ಸ್​ ಅಂತಾ ಹೊಡಿಬಡಿ ದಾಂಡಿಗರನ್ನೇ ಹೊಂದಿದೆ. ಏಕಾಂಗಿಯಾಗಿ ಪಂದ್ಯವನ್ನ ಗೆಲ್ಲಿಸಿಕೊಡುವ ಈ ಇಬ್ಬರ ಜೊತೆಗೆ ಇದೀಗ ಮತ್ತೊಬ್ಬ ಪವರ್ ಪ್ಲೇಯರ್ ಆರ್​ಸಿಬಿ ತಂಡಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿದ್ದಾನೆ…! ಅದು ಬೇಱರು ಅಲ್ಲ.. ಟಿಮ್ ಡೇವಿಡ್…!

blank

ಹೌದು..! 14ನೇ ಆವೃತ್ತಿಯ ಸಕೆಂಡ್ ಫೇಸ್​ ಆರಂಭಕ್ಕೂ ಮುನ್ನ ಮೂವರು ಆಟಗಾರರನ್ನ ಸೇರಿಸಿಕೊಂಡಿರುವ ಆರ್​ಸಿಬಿ, ತಂಡದ ಬಲ ಹೆಚ್ಚಿಸಿದೆ. ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ, ದುಶ್ಮಂತ ಚಮೀರಾ ಜೊತೆಗೆ ಸಿಂಗಪುರದ ಟಿಮ್ ಡೇವಿಡ್​ರನ್ನ ಕರೆತಂದು ತಂಡಕ್ಕೆ ಹೊಸ ರೂಪವನ್ನೇ ನೀಡಿದೆ. ಆದ್ರೆ, ಈ ಮೂವರ ಪೈಕಿ 25 ವರ್ಷದ ಸಿಂಗಪೂರ್​​​ ಆಲ್​​ರೌಂಡರ್​​ ಟಿಮ್​​​​​​​ ಡೇವಿಡ್ ಆಗಮನ, ರಾಯಲ್ ಚಾಲೆಂಜರ್ಸ್​ನ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​​ ಪವರ್ ಹೆಚ್ಚಿಸಿದೆ.

ಅಷ್ಟೇ ಅಲ್ಲ..! ಈತನೇ ರಾಯಲ್​​​ ಚಾಲೆಂಜರ್ಸ್​ ತಂಡದ ನ್ಯೂ ಮ್ಯಾಚ್​ ವಿನ್ನರ್ ಅಂತಾನೇ ಭವಿಷ್ಯ ನುಡಿಯಲಾಗ್ತಿದೆ. ಸ್ವತಃ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಮೈಕ್ ಹೆಸ್ಸನ್ ಕೂಡ ಇದೇ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. .

‘ಟಿಮ್​ ಡೇವಿಡ್​​, ಈತ ಮ್ಯಾಕ್ಸ್​ವೆಲ್ ಹಾಗೂ ಡಿವಿಲಿಯರ್ಸ್​​ಗೆ ಪರ್ಯಾಯವಾಗಬಲ್ಲ ಆಟಗಾರ. ಮಧ್ಯಮ ಕ್ರಮಾಂಕದಲ್ಲಿ ನಮಗೆ ನೆರವಾಗಬಲ್ಲ. ನಾವು ತಂಡದ ಮಧ್ಯಮ ಕ್ರಮಾಂಕವನ್ನ ಬಲಪಡಿಸಲು ಪ್ರಯತ್ನಿಸಿದ್ದೇವೆ. ಇಂಜುರಿ ಸಮಸ್ಯೆಗಳು ಬರುವ ಸಾಧ್ಯತೆ ಇರುವುದರಿಂದ ಈತನನ್ನ ಪರ್ಯಾಯವಾಗಿ ನಾವು ಪ್ರಯೋಗಿಸಬಹುದು’
               -ಮೈಕ್ ಹೆಸ್ಸನ್, ಆರ್​​ಸಿಬಿ ಕೋಚ್

blank

YES..! ಕೋಚ್ ಮೈಕ್ ಹಸ್ಸನ್ ಹೇಳಿದಂತೆ, ಟಿಮ್ ಡೇವಿಡ್ ಓರ್ವ ಪವರ್ ಫುಲ್ ಹಿಟ್ಟರ್. ಅಷ್ಟೇ ಅಲ್ಲ.! ಏಕಾಂಗಿಯಾಗಿ ತಂಡವನ್ನ ಗೆಲ್ಲಿಸಿಕೊಡುವ ಮ್ಯಾಚ್ ವಿನ್ನರ್​​. ಹೀಗಾಗಿಯೇ ಆರ್​ಸಿಬಿಯ ಕೋಚ್ ಮೈಕ್ ಹಸನ್, ಮ್ಯಾಕ್ಸಿ, ಎಬಿ ಡಿವಿಲಿಯರ್ಸ್​ಗೆ ಪರ್ಯಾವೂ ಆಗಿದ್ದಾನೆ ಅಂದಿರೋದು.. ಬಿಗ್​ಬ್ಯಾಷ್​ ಲೀಗ್​ನಲ್ಲಿ ಈತ ನೀಡಿದ ಪ್ರದರ್ಶನವೇ ಇದಕ್ಕೆ ಸಾಕ್ಷಿ.!

ಮ್ಯಾಕ್ಸಿ, ಎಬಿಡಿ ಅಷ್ಟೇ ಅಪಾಯಕಾರಿ ಡೇವಿಡ್..!

ಸದ್ಯ ಆರ್​ಸಿಬಿಯ ಅಪಾಯಕಾರಿ ಆಟಗಾರರು​ ಎಂದು ಎಬಿಡಿ, ಮ್ಯಾಕ್ಸ್​ವೆಲ್​ರನ್ನ ಗುರುತಿಸಲಾಗ್ತಿದೆ. ಈ ಇಬ್ಬರ ಆರ್ಭಟಕ್ಕೆ ಎಂಥಹ ಬಲಿಷ್ಠ ಬೌಲಿಂಗ್ ವಿಭಾಗವೇ ಆಗಲಿ ಚಿಂದಿಯಾಗೋದು ಗ್ಯಾರಂಟಿ. ಏಕಾಂಗಿಯಾಗಿ ಪಂದ್ಯವನ್ನ ಗೆಲ್ಲಿಸಿಕೊಡುವ ಈ ಇಬ್ಬರು ಆರ್​​​ಸಿಬಿಯ ಪ್ರಮುಖ ಶಕ್ತಿ. ಇದೀಗ ತಂಡಕ್ಕೆ ಆಗಮಿಸಿರುವ ಟಿಮ್ ಟೇವಿಡ್ ಕೂಡ ಈ ಇಬ್ಬರಷ್ಟೇ ಆಕ್ರಮಣಕಾರಿಯಾಗಿ ಬ್ಯಾಟ್​ ಬೀಸ ಬಲ್ಲವರಾಗಿದ್ದಾರೆ. ಲಂಡನ್ ರಾಯಲ್ ಕಪ್​ ಪಂದ್ಯದಲ್ಲಿ ಸರ್ರೆ ಪರ ಕಣಕ್ಕಿಳಿದು ಕೇವಲ 70 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 9 ಬೌಂಡರಿ ಸಿಡಿಸಿ, 140 ರನ್ ಚಚ್ಚಿದ್ದೂ ಕೂಡ ಇದಕ್ಕೆ ನಿದರ್ಶನವಾಗಿದೆ..!

ಸಿಂಗಫೂರ ಪರ ಟಿಮ್ ಡೇವಿಡ್

ಸಿಂಗಾಪೂರ ಪರ 14 ಟಿ20 ಪಂದ್ಯವನ್ನಾಡಿರುವ ಟಿಮ್ ಡೇವಿಡ್, 5 ಅರ್ಧಶತಕ ಒಳಗೊಂಡ 558 ರನ್ ಸಿಡಿಸಿದ್ದಾರೆ. ಈ ಪೈಕಿ ಅಜೇಯ 92 ಬೆಸ್ಟ್ ಸ್ಕೋರ್ ಆಗಿದ್ದು, 5 ವಿಕೆಟ್ ಉರುಳಿಸಿದ್ದಾರೆ.

ವಿಶ್ವಾದ್ಯಂತ ವಿವಿಧ ಟಿ20 ಲೀಗ್​ಗಳಲ್ಲಿ ಆಡಿರುವ ಟಿಮ್ ಡೇವಿಡ್, ಆಸ್ಟ್ರೇಲಿಯಾದ ಬಿಗ್​​ಬ್ಯಾಷ್, ಪಾಕಿಸ್ತಾನ್​ ಸೂಪರ್ ಲೀಗ್, ಟಿ20 ಬ್ಲಾಸ್ಟ್​​ ಟೂರ್ನಿಗಳಲ್ಲಿ ಅಬ್ಬರಿಸಿದ್ದಾರೆ. ಇದೇ ಕಾರಣಕ್ಕೆ ಕ್ರಿಕೆಟ್ ​ಲೋಕದಲ್ಲಿ ಈತ ಪವರ್​​ ಹಿಟ್ಟರ್ ಎನಿಸಿಕೊಂಡಿದ್ದಾರೆ. ಈತನ ಬ್ಯಾಟಿಂಗ್ ಸಾಮರ್ಥ್ಯವನ್ನ ಅರಿತೆ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಖರೀದಿಸಿದೆ.. ಇನ್ನೂ ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಸಿಂಗಾಪೂರ್ ಪ್ಲೇಯರ್ ಆಗಿದ್ರೂ ಈತ ಮೂಲತಃ ಆಸ್ಟ್ರೇಲಿಯಾ ಕ್ರಿಕೆಟಿಗ. ಅರ್ಥಿಕ ಸಂಕಷ್ಟದ ಕಾರಣ ವಲಸೆ ಹೋಗಿದ್ದ ಈತ, ಆಸಿಸ್​ನ ಬಿಗ್​ಬ್ಯಾಷ್ ಟೂರ್ನಿಯಿಂದಲೇ ಬೆಳಕಿಗೆ ಬಂದ ಆಟಗಾರ..!

blank

ಕೇವಲ ಬ್ಯಾಟಿಂಗ್​ ಮಾತ್ರವಲ್ಲ..! ಬೌಲಿಂಗ್​ನಲ್ಲೂ ಡೇವಿಡ್​ ತಂಡಕ್ಕೆ ನೆರವಾಗಲಬಲ್ಲ ಆಟಗಾರನಾಗಿದ್ದಾರೆ. ಹೀಗಾಗಿಯೇ ಈ ಯುವ ಆಲ್​ರೌಂಡರ್ ಆಗಮನ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದಲ್ಲದೇ, ಆರ್​ಸಿಬಿಗೆ ಹೊಸ ಮ್ಯಾಚ್​ ವಿನ್ನರ್ ಆಗಮನ ಕೂಡ ಎಂದು ಹೇಳಲಾಗ್ತಿರೋದು.

Source: newsfirstlive.com Source link