ಸಚಿವ ಸ್ಥಾನಕ್ಕೆ ಇಂದು ಆನಂದ್ ಸಿಂಗ್ ರಾಜೀನಾಮೆ ಸಾಧ್ಯತೆ

ಸಚಿವ ಸ್ಥಾನಕ್ಕೆ ಇಂದು ಆನಂದ್ ಸಿಂಗ್ ರಾಜೀನಾಮೆ ಸಾಧ್ಯತೆ

ಬೆಂಗಳೂರು: ಖಾತೆ ಕ್ಯಾತೆ ತೆಗೆದು ಇಷ್ಟು ದಿನ ಸೈಲೆಂಟ್​ ಆಗಿದ್ದ ಪರಿಸರ, ಜೀವಶಾಸ್ತ್ರ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಆನಂದ ಸಿಂಗ್​ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ

ಪ್ರಬಲ ಖಾತೆ ಕೊಡುವಂತೆ ಪಟ್ಟು ಹಿಡಿದಿದ್ದ ಆನಂದ್ ಸಿಂಗ್ ಅವರು ಖಾತೆ ಬದಲಾವಣೆಯಾಗದ ಅಸಮಾಧಾನಗೊಂಡಿದ್ದರು. ಆದರೂ ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೂ ಖಾತೆ ಬದಲಾವಣೆಯಾಗದ ಕಾರಣ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಆನಂದ್ ಸಿಂಗ್ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಖಾತೆ ಬದಲಾವಣೆ ಮಾಡಿ ಕೊಡುವಂತೆ ಪಟ್ಟು ಹಿಡಿದು ವೈಲೆಂಟ್​ ಆಗಿದ್ದ ಸಚಿವ, ಪ್ರಮಾಣ ವಚನ ಸ್ವೀಕರಿಸಿ 20 ದಿನ ಕಳೆದಿದ್ದರು ವಿಧಾನಸೌಧಕ್ಕೆ ಆಗಮಿಸಿರಲಿಲ್ಲ. ಅಲ್ಲದೇ ಇಲಾಖೆ ಜವಾಬ್ದಾರಿ ವಹಿಸಿಕೊಂಡು ಸಭೆಯನ್ನು ನಡೆಸಿರಲಿಲ್ಲ. ಇದರಿಂದ ಸಿಎಂ ಕೂಡ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು. ಕಳೆದ 15 ದಿನಗಳಿಂದ ಹೊಸಪೇಟೆಯಲ್ಲಿಯೇ ಬೀಡು ಬಿಟ್ಟಿದ್ದ ಸಚಿವರು, ಇತ್ತೀಚೆಗೆ ಮಾಧ್ಯಮಗಳಿಂದಲೂ ಅಂತರ ಕಾಯ್ದುಕೊಂಡಿದ್ದರು.

Source: newsfirstlive.com Source link