ವರ್ಕ್​​ ಆಯ್ತು ಸಿಸಿಬಿ ಐಡಿಯಾ.. ಡ್ರಗ್ಸ್​ ಸೇವಿಸಿದ್ದ ನಟಿಯರಿಗೆ ಶುರುವಾಯ್ತು ಟೆನ್ಶನ್

ವರ್ಕ್​​ ಆಯ್ತು ಸಿಸಿಬಿ ಐಡಿಯಾ.. ಡ್ರಗ್ಸ್​ ಸೇವಿಸಿದ್ದ ನಟಿಯರಿಗೆ ಶುರುವಾಯ್ತು ಟೆನ್ಶನ್

ಬೆಂಗಳೂರು: ಡ್ರಗ್ಸ್​​ ಕೇಸಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಬಿ ಪೊಲೀಸರ ಐಡಿಯಾ  ಫಲಕೊಟ್ಟಿದೆ. ಈ ಹಿಂದೆ ಬ್ಲಡ್​​​ ಮತ್ತು ಯೂರಿನ್​ ಟೆಸ್ಟ್​ ಮಾಡುತ್ತಿದ್ದ ಸಿಸಿಬಿ ಪೊಲೀಸರು ಈಗ ಹೇರ್​​ ಸ್ಯಾಂಪಲ್ ಟೆಸ್ಟ್​​​ ಮೊರೆ ಹೋಗಿದ್ದಾರೆ. ಹೇರ್​​ ಸ್ಯಾಂಪಲ್​​ ಟೆಸ್ಟ್​ ಮಾಡಿಸಿದ್ರೆ ಆರೋಪಿಗಳು ಡ್ರಗ್ಸ್​ ಸೇವಿಸಿದ್ದಾರಾ ಇಲ್ಲವೇ ಎಂದು ಪಕ್ಕಾ ರಿಪೋರ್ಟ್​ ಸಿಗಲಿದೆ.

ಯಾವುದಾದರೂ ಒಂದು ಡ್ರಗ್ಸ್​ ಪ್ರಕರಣ ಬೆಳಕಿಗೆ ಬಂದರೆ ಆರೋಪಿಗಳ ಪತ್ತೆಗೆ ಹೇರ್ ಸ್ಯಾಂಪಲ್ ಟೆಸ್ಟ್​ ಸೂಕ್ತ. ಡ್ರಗ್ಸ್​ ಕೇಸಲ್ಲಿ ಅಂತಿಮವಾಗಿ ಯಾರು ನಿಜವಾದ ಅಪರಾಧಿಗಳು ಎಂದು ಸಾಬೀತು ಪಡಿಸಲು ಹೇರ್​​ ಸ್ಯಾಂಪಲ್​​​ ಪಕ್ಕಾ ರಿಪೋರ್ಟ್​ ನೀಡಲಿದೆ ಎಂಬುವುದು ಸ್ಯಾಂಡಲ್​​ವುಡ್​​ ಡ್ರಗ್ಸ್ ಪ್ರಕರಣದಲ್ಲಿ ದೃಢವಾಗಿದೆ.

ಸಿಸಿಬಿ ಪೊಲೀಸರು ಆರೋಪಿಗಳ ಹೇರ್ ಸ್ಯಾಂಪಲ್, ರಕ್ತದ ಮಾದರಿ ಮತ್ತು ಯೂರಿನ್ ಸ್ಯಾಂಪಲ್ ಸಂಗ್ರಹ ಮಾಡಿ ಹೈದರಾಬಾದ್​ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿಕೊಡುತ್ತಾರೆ. ಕೆಲವೊಮ್ಮೆ ರಕ್ತದ ಮಾದರಿ ಮತ್ತು ಯೂರಿನ್ ಸ್ಯಾಂಪಲ್​​ನಿಂದ ಆರೋಪಿಗಳ ಬಗ್ಗೆ ಪಕ್ಕಾ ರಿಪೋರ್ಟ್​ ಬರೋದು ಡೌಟು. ಆದರೆ, ಹೇರ್ ಸ್ಯಾಂಪಲ್ ಮಾತ್ರ ಖಚಿತ ವರದಿ ಬರಲಿದ.

ಇದನ್ನೂ ಓದಿ: ಸ್ಯಾಂಡಲ್​​ವುಡ್​​ ಡ್ರಗ್ ಕೇಸ್: ಆರೋಪಿಗಳು ಡ್ರಗ್ ಸೇವಿಸಿರೋದು FSL ವರದಿಯಲ್ಲಿ ದೃಢ!

ಇನ್ನು, ವರ್ಷಗಟ್ಟಲೇ ಡ್ರಗ್ಸ್​ ಕೇಸಲ್ಲಿ ತಲೆಮರೆಸಿಕೊಂಡಿರುವ ಹಲವು ಆರೋಪಿಗಳ ಹೇರ್ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಸದ್ಯದಲ್ಲೇ ಹೈದರಾಬಾದ್​ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಈ ಹೇರ್​​ ಸ್ಯಾಂಪಲ್​​ ಕಳಿಸಿಕೊಡಲಿದ್ದು, ಆರೋಪಿಗಳ ಡ್ರಗ್ಸ್​ ಸೇವನೆ ಬಗ್ಗೆ ಪಕ್ಕಾ ರಿಪೋರ್ಟ್​ ಸಿಗಲಿದೆ. ಬಳಿಕ ಇವರು ಜೈಲು ಕಂಬಿ ಎಣಿಸೋದು ಬಹುತೇಕ ಪಕ್ಕಾ ಆಗಿದೆ.

Source: newsfirstlive.com Source link