ಬಾರ್​ ಮುಂದೆ ನಿಂತು ಮದ್ಯ ಸೇವಿಸಲು ಬರುವವರಿಗೆ ಮಹಿಳೆಯರಿಂದ ಛೀಮಾರಿ

ಬಾರ್​ ಮುಂದೆ ನಿಂತು ಮದ್ಯ ಸೇವಿಸಲು ಬರುವವರಿಗೆ ಮಹಿಳೆಯರಿಂದ ಛೀಮಾರಿ

ಬಾಗಲಕೋಟೆ : ಗ್ರಾಮದಲ್ಲಿನ ಬಾರ್ ಆ್ಯಂಡ್ ರೆಸ್ಟೊರೆಂಟ್ ತೆರವುಗೊಳಿಸುವಂತೆ ಆಗ್ರಹ ಪಡಿಸಿದ ಮಹಿಳೆಯರು, ಮದ್ಯ ಸೇವಿಸಲು ಬಾರ್​ಗೆ ಬರುವವರಿಗೆ ಛೀಮಾರಿ ಹಾಕಿ ವಾಪಸ್ಸು ಕಳಿಸುತ್ತಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಚನ್ನಾಳ ಗ್ರಾನಮದಲ್ಲಿ ನಡೆದಿದೆ..

ಸ್ಥಳೀಯರ ವಿರೋಧವಿದ್ದರೂ ಬಾರ್‌ಗೆ ಪರವಾನಗಿ ನೀಡಿದ್ದನ್ನು ವಿರೋಧಿಸಿ, ಸ್ಥಳೀಯರು ಈ ಹಿಂದೆ ಡಿಸಿ ಕಚೇರಿಗೂ ತೆರಳಿ ಪ್ರತಿಭಟನೆ ‌ನಡೆಸಿ‌, ಬಾರ್​ ತೆರವುಗೊಳಿಸುವಂತೆ ಮನವಿ ಸಲ್ಲಿಸಿದ್ದರು. ತೆರವುಗೊಳಿಸಲು ಸ್ವಲ್ಪ ಕಾಲಾವಕಾಶ ಕೇಳಿದ್ದ ಜಿಲ್ಲಾಧಿಕಾರಿ ತೆರವುಗೊಳಿಸದ ಹಿನ್ನೆಲೆ ಪ್ರತಿಭಟನೆಗೆ ನಿಂತಿದ್ದಾರೆ..

blank

ಗ್ರಾಮದಲ್ಲಿ ಯುವಕರು,ಬಾಲಕರು ಕುಡಿತದ ದಾಸರಾಗುತ್ತಿದ್ದಾರೆ. ನಮ್ಮ ಮನೆ ಜೀವನ ಬೀದಿಗೆ ಬರುತ್ತಿದೆ, ಸಣ್ಣ ಸಣ್ಣ ವಯಸ್ಸಿನವರು ಕುಡಿದು ಹಾಳಾಗುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದ ಮಹಿಳೆಯರು ಗ್ರಾಮದ ಕಿಂಗ್ಸ್ ಬಾರ್ ಆ್ಯಂಡ್ ರೆಸ್ಟೊರೆಂಟ್ ಬಳಿ ನಿಂತು ಮದ್ಯ ಸೇವನೆಗೆ ಆಗಮಿಸುವವರಿಗೆ ಛೀಮಾರಿ ಹಾಕಿ ಕಳಿಸುತ್ತಿದ್ದಾರೆ..

ಇದನ್ನೂ ಓದಿ: ಸ್ಯಾಂಡಲ್​​ವುಡ್​​ ಡ್ರಗ್ ಕೇಸ್: ಆರೋಪಿಗಳು ಡ್ರಗ್ ಸೇವಿಸಿರೋದು FSL ವರದಿಯಲ್ಲಿ ದೃಢ!

Source: newsfirstlive.com Source link