ಮೊಮ್ಮಗಳಿಗೆ ಮೇಕೆ ಗುದ್ದಿದ್ದಕ್ಕೆ ಗಲಾಟೆ- ತಾತ ಸಾವು

ಚಿಕ್ಕಬಳ್ಳಾಪುರ: ಮೊಮ್ಮಗಳಿಗೆ ಮೇಕೆ ಗುದ್ದಿದೆ ಎಂಬುದಕ್ಕೆ ಗಲಾಟೆ ಮಾಡಿದ ತಾತ ಸಾವನ್ನಪ್ಪಿರುವ ಘಟನೆ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಿಸವನಹಳ್ಳಿಯಲ್ಲಿ ನಡೆದಿದೆ.

ಚಂದ್ರಶೇಖರ್(65) ಮೃತರಾಗಿದ್ದಾರೆ. ದೇವರಿಗೆ ಹರಕೆ ಹೊತ್ತು ಬಿಟ್ಟಿರೋ ಮೇಕೆ ನನ್ನ ಮೊಮ್ಮಗಳಿಗೆ ಗುದ್ದಿದೆ ಅಂತ ಗಲಾಟೆ ಮಾಡಿಕೊಂಡ ವೃದ್ದ ನಂತರ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸಣ್ಣ ಮೀನು ಹಿಡಿದಿದ್ದಾರೆ, ತಿಮಿಂಗಿಲಗಳಿವೆ: ಇಂದ್ರಜಿತ್ ಲಂಕೇಶ್

ಗ್ರಾಮದ ರವಿಕುಮಾರ್ ಗ್ರಾಮದೇವತೆಗೆ ಹರಕೆ ಹೊತ್ತು ಮೇಕೆಯೊಂದನನ್ನ ಬಿಟ್ಟಿದ್ದರು. ಈ ಮೇಕೆ ಮೃತ ಚಂದ್ರಶೇಖರ್ ಅವರ ಮೊಮ್ಮಗಳಿಗೆ ಗುದ್ದಿದೆ. ಹೀಗಾಗಿ ಇದನ್ನ ಪ್ರಶ್ನೆ ಮಾಡಿದ್ದ ಮೃತ ಚಂದ್ರಶೇಖರ್ ರವಿಕುಮಾರ್ ಜೊತೆ ಜಗಳವಾಡಿದ್ದಾರೆ. ಜಗಳದ ವೇಳೆ ರವಿಕುಮಾರ್, ಚಂದ್ರಶೇಖರ್ ಎದಗೆ ಹೊಡೆದಿದ್ದಾರೆ ಎನ್ನಲಾಗಿದೆ. ಜಗಳದ ನಂತರ ಎದೆ ನೋವು ಕಾಣಿಸಿಕೊಂಡು ಚಂದ್ರಶೇಖರ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ನಟಿ ರಾಗಿಣಿ ವಿರುದ್ಧ ಅಕುಲ್ ಬಾಲಾಜಿ ಸಾಕ್ಷ್ಯ!

blank

ಈ ಘಟನೆ ನಂತರ ಆರೋಪಿ ರವಿಕುಮಾರ್ ಪರಾರಿಯಾಗಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: publictv.in Source link