ಕೊನಿಡೆಲಾ, ಅಲ್ಲು ಕುಟುಂಬಗಳ ನಡುವೆ ಬೆಂಕಿ ಹಚ್ಚಿದ್ರಾ ರಾಮ್​​ ಗೋಪಾಲ್ ವರ್ಮಾ?

ಕೊನಿಡೆಲಾ, ಅಲ್ಲು ಕುಟುಂಬಗಳ ನಡುವೆ ಬೆಂಕಿ ಹಚ್ಚಿದ್ರಾ ರಾಮ್​​ ಗೋಪಾಲ್ ವರ್ಮಾ?

ಚಿರಂಜೀವಿ ಹುಟ್ಟುಹಬ್ಬದ ಪ್ರಯುಕ್ತ ಮೆಗಾ ಫ್ಯಾಮಿಲಿಯ ಕುಟುಂಬದ ಸದ್ಯಸರು ಚಿರಂಜೀವಿ ಮನೆಯಲ್ಲಿ ಹಾಜರಾಗಿದ್ದರು. ಚಿರಂಜೀವಿ ಸಹೋದರರಾದ ನಾಗಬಾಬು, ಟಾಲಿವುಡ್ ಪವರ್​ ಸ್ಟಾರ್ ಪವನ್​ ಕಲ್ಯಾಣ್​, ಚಿರು ಪುತ್ರ ರಾಮ್ ಚರಣ್, ಸೊಸೆ ಉಪಾಸನಾ, ವರುಣ್ ತೇಜ್, ಸಾಯಿ ಧರಮ್ ತೇಜ್, ವೈಷ್ಣವ್, ನಿಹಾರಿಕಾ, ಸುಶ್ಮಿತಾ ಕೊನಿಡೆಲಾ ಸೇರಿದಂತೆ ಅಲ್ಲು ಕುಟುಂಬದಿಂದ ಅಲ್ಲು ಅರವಿಂದ್ ಎಲ್ಲರೂ ಚಿರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.

blank

ಆದರೆ ಟಾಲಿವುಡ್​ ಸ್ಟೈಲಿಸ್ಟ್​ ಸ್ಟಾರ್ ಅಲ್ಲು ಅರ್ಜುನ್​ ಮಾತ್ರ ಚಿರಂಜೀವಿ ಹುಟ್ಟುಹಬ್ಬ ಆಚರಣೆ ಸಂಭ್ರಮದಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಈ ವಿಚಾರವನ್ನು ಮುಂದಿಟ್ಟುಕೊಂಡು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಚಿರಂಜೀವಿ ಕುಟುಂಬಸ್ಥರ ಬಗ್ಗೆ ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ.

ಹೌದು, ​ಅಲ್ಲು ಅರ್ಜುನ್ ಚಿರಂಜೀವಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗದೇ ಇರುವುದು ಅಲ್ಲು ಅರ್ಜುನ್​ ತಾತ ಅಲ್ಲು ರಾಮಲಿಂಗಯ್ಯರವರಿಗೆ ಸಿಕ್ಕ ಜಯ ಎಂದು ಆರ್​​ಜಿವಿ ಟ್ವೀಟ್​ ಮಾಡಿದ್ದಾರೆ.

ಇನ್ನು ಅಲ್ಲು ಅರ್ಜುನ್​ ಚಿರಂಜೀವಿ ಹುಟ್ಟುಹಬ್ಬಕ್ಕೆ ಭಾಗಿಯಾದೇ ಒಳ್ಳೆ ಕೆಲಸ ಮಾಡಿದ್ದಾರೆ ಅಂತಾ ಆರ್​​ಜಿವಿ ಸರಣಿ ಟ್ವೀಟ್​ ಮಾಡಿ ಹೇಳಿದ್ದಾರೆ. ಪವನ್​ ಕಲ್ಯಾಣ್​, ಚಿರು ಪುತ್ರ ರಾಮ್ ಚರಣ್, ವರುಣ್ ತೇಜ್, ಸಾಯಿ ಧರಮ್ ತೇಜ್ ಇವರೆಲ್ಲರೂ ಚಿರಂಜೀವಿಯವರ ಜಯವನ್ನೇ ನೆಕ್ಕುತ್ತಿದ್ದಾರೆ ಅಂತಾ ಕೊನಿಡೆಲಾ ಕುಟುಂಬಸ್ಥರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ.​

ಅಲ್ಲು ಅರ್ಜುನ್ ಚಿರಂಜೀವಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲಿಲ್ಲ ನಿಜ ಅದ್ರೆ ಅವರು ಚಿರಂಜೀವಿ ಹುಟ್ಟುಹಬ್ಬಕ್ಕೆ, ಚಿರು ಜೊತೆಗಿರುವ ಫೋಟೋವೊಂದದನ್ನು ಶೇರ್​ ಮಾಡಿ ಶುಭಾಶಯವನ್ನು ಕೋರಿದ್ದಾರೆ. ಇನ್ನು ಅಲ್ಲು ಅರ್ಜುನ್ ತಾವು ಚೀರಂಜೀವಿ ಬಗ್ಗೆ ಆಪಾರ ಗೌರವವನ್ನು ಹೊಂದಿದ್ದಾರೆ ಅಂತಾ ಬಹಳಷ್ಟು ಬಾರಿ ಹೇಳಿದ್ದಾರೆ.

ಸದ್ಯ ಅಲ್ಲು ಅರ್ಜುನ್​ ಪುಷ್ಪ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿ ಇರೋದರಿಂದ ಚಿರು ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗದೇ ಇರಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Source: newsfirstlive.com Source link