ಪತ್ನಿಯೂ ಬಂದಿಲ್ಲ; ಔಟ್​ ಆಫ್​ ಫಾರ್ಮ್​​ ಆದ ವಿರಾಟ್​​ ಕೊಹ್ಲಿಗೆ ಕಾಡ್ತಿದೆಯಾ ‘ಆ’ ಸಮಸ್ಯೆ?

ಪತ್ನಿಯೂ ಬಂದಿಲ್ಲ; ಔಟ್​ ಆಫ್​ ಫಾರ್ಮ್​​ ಆದ ವಿರಾಟ್​​ ಕೊಹ್ಲಿಗೆ ಕಾಡ್ತಿದೆಯಾ ‘ಆ’ ಸಮಸ್ಯೆ?

ಟೆಸ್ಟ್​ ಕ್ರಿಕೆಟ್​​​ಗೆ​ ಡೆಬ್ಯೂ ಮಾಡಿದ ದಶಕದಲ್ಲೇ ಲೆಜೆಂಡ್​​​ ಎನಿಸಿಕೊಂಡಿರೋ ಕೊಹ್ಲಿ, ಕಳೆದರಡು ವರ್ಷಗಳಿಂದ ಹಿಮ್ಮುಖವಾಗಿ ಸಾಗ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿದ್ದ ಕೊಹ್ಲಿಯ ಆ್ಯವರೇಜ್​ ಗ್ರಾಫ್​ಶೀಟ್​, ಇದೀಗ ಪಾತಾಳ ಕಂಡಿದೆ. ಟೆಸ್ಟ್​ ಕ್ರಿಕೆಟ್​​ನಲ್ಲಿ ಕೊಹ್ಲಿ ವೈಫಲ್ಯ ತಂಡಕ್ಕೂ ಹಿನ್ನಡೆಯಾಗ್ತಿದೆ.

blank

ಕ್ರಿಕೆಟ್​ ಲೋಕದ ರನ್​​ ಸಾಮ್ರಾಟ, ದಾಖಲೆಗಳ ಸರದಾರ, ಒಂದೊಂದು ರನ್ನಿಗೂ ದಾಖಲೆ ಬರೆಯುವ ವಿಶ್ವ ಕ್ರಿಕೆಟ್​​ನ ಕಿಂಗ್. ಮೂರು ಮಾದರಿಯ​​ ಕ್ರಿಕೆಟ್​​ನಲ್ಲಿ 50ಕ್ಕೂ ಹೆಚ್ಚು ಸರಾಸರಿ ಹೊಂದಿರುವ ಏಕೈಕ ಬ್ಯಾಟ್ಸ್​​​ಮನ್..! ಇವೆಲ್ಲಾ ಟೀಮ್​ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗಿರೋ ಬಿರುದುಗಳ ಪಟ್ಟಿ.! ಆದ್ರೆ, ಕಳೆದೆರಡು ವರ್ಷಗಳಲ್ಲಿ ಟೆಸ್ಟ್​ ಕ್ರಿಕೆಟ್​​ನಲ್ಲಿ ಕೊಹ್ಲಿ ನೀಡಿರೋ ಪ್ರದರ್ಶನವನ್ನ ನೋಡಿದ್ರೆ, ಈ ಎಲ್ಲಾ ಹೊಗಳಿಕೆಗಳು ಇದ್ದಿದ್ದು ವಿರಾಟ್​​ ಕೊಹ್ಲಿಗೇನಾ ಎಂಬ ಪ್ರಶ್ನೆ ನಿಮ್ಮನ್ನೇ ಕಾಡುತ್ತೆ.

ಬಾಂಗ್ಲಾ ಟೆಸ್ಟ್​ ಬಳಿಕ ಆಟವನ್ನೇ ಮರೆತರಾ ವಿರಾಟ್ ​ಕೊಹ್ಲಿ .?

2019 ನವೆಂಬರ್​ 22..! ಕೊಹ್ಲಿ ಬ್ಯಾಟ್​​ ಆಗಸವನ್ನ ನೋಡಿದ ದಿನ. ಅರ್ಥಾತ್​… ಕೊಹ್ಲಿ ಕೊನೆಯ ಶತಕ ಸಿಡಿಸಿದ ದಿನ. ಅಂದು ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೊಹ್ಲಿ ಶತಕ ಸಿಡಿಸಿ ಅಬ್ಬರಿಸಿದ್ರು. ಅದೇ ಕೊನೆ ಅಲ್ಲಿಂದ ಇಲ್ಲಿಯವರೆಗೆ 3 ಮಾದರಿಯಲ್ಲಿ ಆಡಿದ ಯಾವುದೇ ಪಂದ್ಯದಲ್ಲೂ ಸೆಂಚುರಿ ಬಂದೇ ಇಲ್ಲ. ಆ ಬಳಿಕ ಆಡಿದ ಪ್ರತಿ ಟೆಸ್ಟ್​ ಪಂದ್ಯಗಳಲ್ಲಂತೂ ಕಳಪೆ ಪ್ರದರ್ಶನ ಮುಂದುವರಿದಿದೆ. ಬಾಂಗ್ಲಾ ಸರಣಿಯ ಬಳಿಕ ನ್ಯೂಜಿಲೆಂಡ್​, ಆಸ್ಟ್ರೇಲಿಯಾ, ಇಂಗ್ಲೆಂಡ್​​ ಟೆಸ್ಟ್​​​ ಸರಣಿಯಲ್ಲಿ ಕೊಹ್ಲಿ ಆಡಿದ್ದಾರೆ. ಆದರೆ ರನ್​ಗಳಿಕೆಯ ಸರಾಸರಿ ನಿಮ್ಮನ್ನ ಅಚ್ಚರಿಪಡುವಂತೆ ಮಾಡಲುಬಹುದು.

blank

ಬಾಂಗ್ಲಾ ಟೆಸ್ಟ್​ ಸರಣಿ ಬಳಿಕ 17 ಟೆಸ್ಟ್​ ಇನ್ನಿಂಗ್ಸ್​​​ಗಳಲ್ಲಿ ಬ್ಯಾಟ್​ ಬೀಸಿರೋ ಕೊಹ್ಲಿ 407 ರನ್​ ಕಲೆ ಹಾಕಿದ್ದಾರೆ. 3 ಬಾರಿ ಅರ್ದಶತಕದ ಗಡಿ ದಾಟಿರುವ ಕೊಹ್ಲಿ ಸರಾಸರಿ ಕೇವಲ 23.94.

ನಾಲ್ಕು ವರ್ಷಗಳ ಕಾಲ ಉತ್ತುಂಗದಲ್ಲಿದ್ದ ಕಿಂಗ್​ ಕೊಹ್ಲಿ..!

2011ರಲ್ಲಿ ಟೆಸ್ಟ್​ಗೆ ಕಾಲಿಟ್ಟ ವಿರಾಟ್​ ಕೊಹ್ಲಿ, ಆ್ಯವರೇಜ್​ ಗ್ರಾಫ್​ ಆರಂಭಗೊಂಡಿದ್ದು 22.44ರಿಂದ. ಆ ಬಳಿಕ 2012ರಿಂದ 2015ರವರೆಗೆ ಈ ಗ್ರಾಫ್​​ ಏರಿಕೆ ಮತ್ತೂ ಇಳಿಕೆ ಎರಡನ್ನೂ ಕಂಡಿತ್ತು. ಆದ್ರೆ 2016ರ ನಂತರ ಕೊಹ್ಲಿ ಟೆಸ್ಟ್​ ಕರಿಯರ್ ಉತ್ತುಂಗಕ್ಕೆ ಏರಿತ್ತು.​​ಸತತ 4 ವರ್ಷಗಳ ಕಾಲ ಕೊಹ್ಲಿ ಸರಾಸರಿ ಗ್ರಾಫ್​ಶೀಟ್​​ ಉತ್ತುಂಗಕ್ಕೆ ತಲುಪಿದ್ದಲ್ಲದೆ, ಟೆಸ್ಟ್​​ ಕ್ರಿಕೆಟ್​​​ನ ಕಿಂಗ್​ ಎಂಬ ಹಣೆಪಟ್ಟಿಯೂ ಒಲಿದಿತ್ತು. ಅದಕ್ಕೆ ಈ ಅಂಕಿ-ಅಂಶಗಳೇ ಬೆಸ್ಟ್​ ಎಕ್ಸಾಂಪಲ್​ ಆಗಿದೆ.

2016ರ ಬಳಿಕ ಕೊಹ್ಲಿ ಸರಾಸರಿ ಒಂದೇ ಸಲ ಏರಿಕೆ ಕಂಡಿದೆ. 2016ರಲ್ಲಿ 75.94, 2017ರಲ್ಲಿ 75.64ರ ಸರಾಸರಿಯಲ್ಲಿ ರನ್​ ದಾಖಲಾಗಿದ್ದರೆ, 2018 ಮತ್ತು 2019ರಲ್ಲಿ ಕ್ರಮವಾಗಿ 55.08 ಹಾಗೂ 68ರ ಸರಾಸರಿಯಲ್ಲಿ ಕೊಹ್ಲಿ ರನ್​ಗಳಿಸಿದ್ರು.

blank

ಆದರೆ 2019ರ ಬಳಿಕ ಟೆಸ್ಟ್​​​​​ನಲ್ಲಿ ಕೊಹ್ಲಿ ಸರಾಸರಿ ಇಳಿಮುಖವಾಗೇ ಸಾಗ್ತಿದೆ. ಇದನ್ನ ಕೇವಲ ಇಳಿಮುಖದಿಂದ ಅನ್ನದೇ ವರ್ಸ್ಟ್​​​​​​ ಆ್ಯವರೇಜ್​ ಅಂದ್ರೂ ತಪ್ಪಾಗಲ್ಲ.​ ಕೊಹ್ಲಿಯ ಬ್ಯಾಟಿಂಗ್​ ಚಾರ್ಮ್​ ಅಂತೂ ಕಳೆದೇ ಹೋಗಿದೆ. ಇನ್​ಫ್ಯಾಕ್ಟ್​​ ತಮ್ಮ ಕೊನೆಯ ಶತಕದ ಬಳಿಕ ಕೊಹ್ಲಿ 3 ಬಾರಿ ಡಕೌಟ್​ ಆಗಿದ್ದಾರೆ. 2020ರ ಸರಾಸರಿ 19.33 ಆಗಿದ್ರೆ, ಪ್ರಸಕ್ತ ವರ್ಷದಲ್ಲಿ 26.45ರ ಸರಾಸರಿಯಲ್ಲಿ ರನ್​ ಗಳಿಸಿದ್ದಾರೆ.

ವಿರಾಟ್​ ಕೊಹ್ಲಿ ಟೆಸ್ಟ್​​​ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ ಬಳಿಕ ತಂಡದ ಗೆಲುವಿಗೂ ಆಧಾರವಾಗಿದ್ರು. 2011 ರಿಂದ 2019ರವರೆಗೆ ತಂಡದ ಗೆಲುವಿಗೆ ಶೇಕಡಾ 60ರಷ್ಟು ರನ್​ ಕೊಹ್ಲಿಯದ್ದೇ ಕಾಣಿಕೆಯಾಗಿದೆ. ಆದ್ರೆ, ಕಳೆದ 2 ವರ್ಷಗಳ ವೈಫಲ್ಯ ತಂಡಕ್ಕೂ ಹಿನ್ನಡೆಯಾಗಿದೆ.

ವಿರಾಟ್​ ಕಳಪೆ​​ ಪರ್ಫಾಮೆನ್ಸ್​​​ ಡೌನ್ 

ಸದ್ಯ ಎಲ್ಲೆಡೆ ನಡೀತಿರೋ ಪ್ರಮುಖ ಚರ್ಚಾ ವಿಷಯ ಅಂದರೆ ಕೊಹ್ಲಿಯ ಕಳಪೆ ಪ್ರದರ್ಶನಕ್ಕೆ ಕಾರಣ ಏನು ಅನ್ನೋ ವಿಚಾರ. ಪ್ರತಿ ಟೆಸ್ಟ್​ ಸರಣಿಯಲ್ಲೂ ರನ್​ ಶಿಖರ್ ನಿರ್ಮಿಸುತ್ತಿದ್ದ ಕೊಹ್ಲಿ, ಈ ಮಟ್ಟಿಗೆ ಕೆಟ್ಟ ಪ್ರದರ್ಶನ ತೋರುತ್ತಿರೋದ್ದಕ್ಕೆ ಏನು ಕಾರಣ ಅಂತ ಪ್ರಶ್ನೆ ಮೂಡುತ್ತೆ. ಒಂದು ಕಡೆ ಈ ಹಿಂದೆ ಅವರು ಯಾವುದೇ ಪ್ರವಾಸಕ್ಕೆ ಹೋದ್ರೂ ಅವರ ಅಂದಿನ ಗರ್ಲ್​ಫ್ರೆಂಡ್​​ ಮತ್ತು ಇಂದಿನ ಪತ್ನಿ ಅನುಷ್ಕಾ ಶರ್ಮಾ ಸಾತ್ ಕೊಡ್ತಿದ್ದರು. ಹೀಗಾಗಿ, ಎಷ್ಟೇ ಒತ್ತಡವಿದ್ರೂ ಅವರೊಂದಿಗೆ ಹಂಚಿಕೊಳ್ಳುತ್ತಿದ್ರು. ಆದ್ರೆ ಈಗ ಅವರೂ ಹೆಚ್ಚಾಗಿ ತೆರಳುತ್ತಿಲ್ಲ. ಹೀಗಾಗಿ ಅವರ ಒತ್ತಡವನ್ನೂ ಅವರು ಯಾರೊಂದಿಗೂ ಹಚ್ಚಿಕೊಳ್ಳಲು ಸಾಧ್ಯವಾಗ್ತಿಲ್ಲ.. ಹೀಗಾಗಿ ಸದ್ಯ ಕೊಹ್ಲಿ ಪರ್ಫಾರ್ಮೆನ್ಸ್​ ಡೌನ್ ಆಗಲು ಒತ್ತಡವೇ ಕಾರಣವಿರಬಹುದಾ.? ಅಥವಾ ಬಿಡುವಿಲ್ಲದ ವೇಳಾಪಟ್ಟಿಯೂ ಕಾರಣಾವಾಯ್ತಾ..? ಎಂಬ ಪ್ರಶ್ನೆಗಳು ಕ್ರಿಕೆಟ್​​ ವಲಯದಲ್ಲಿ ಪ್ರತಿಧ್ವನಿಸುತ್ತಿವೆ.

Source: newsfirstlive.com Source link