ಸಿಎಂ ಬೊಮ್ಮಾಯಿ ಸಂಧಾನ ಸಕ್ಸಸ್​.. ಆನಂದ್​ ಸಿಂಗ್​ ರಾಜೀನಾಮೆ ನಿರ್ಧಾರಕ್ಕೆ ತಾತ್ಕಾಲಿಕ ಬ್ರೇಕ್

ಸಿಎಂ ಬೊಮ್ಮಾಯಿ ಸಂಧಾನ ಸಕ್ಸಸ್​.. ಆನಂದ್​ ಸಿಂಗ್​ ರಾಜೀನಾಮೆ ನಿರ್ಧಾರಕ್ಕೆ ತಾತ್ಕಾಲಿಕ ಬ್ರೇಕ್

ಬೆಂಗಳೂರು: ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ನೀಡಿದಕ್ಕೆ ಅಸಮಾಧಾನಗೊಂಡಿದ್ದ ಸಚಿವ ಆನಂದ್ ಸಿಂಗ್ ಇಂದು ರಾಜೀನಾಮೆ ನೀಡ್ತಾರೆ ಎನ್ನಲಾಗಿತ್ತು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ರಾಜೀನಾಮೆ ನಿರ್ಧಾರದಿಂದ ಸಚಿವರು ಹಿಂದೆ ಸರಿದಿದ್ದಾರೆ.

ಆನಂದ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿರುವ ಬೊಮ್ಮಾಯಿ ಅವರು, ಸಚಿವರ ಮನವೊಲಿಕೆಗೆ ಮಾಡಲು ಯಶಸ್ವಿಯಾಗಿದ್ದಾರೆ. ಸಿಎಂ ನಾಳೆ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದ್ದು, ದೆಹಲಿ ಭೇಟಿ ವೇಳೆ ಹೈಕಮಾಂಡ್​​ನೊಂದಿಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ನಡುವೆ ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಆನಂದ್ ಸಿಂಗ್, ನಾನು ಸಿಎಂ ಭೇಟಿ ಮಾಡಿದ್ದೆ. ನನ್ನ ನಿಲುವನ್ನು ಮತ್ತೊಮ್ಮೆ ಸಿಎಂ ಗಮನಕ್ಕೆ ತಂದಿದ್ದೇನೆ. ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ. ನನ್ನ ಭಾವನಗೆಳಿಗೆ ಸಿಎಂ ಸ್ಪಂಧಿಸಲಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರನ್ನ ಸಹ ಭೇಟಿ ಮಾಡಿದ್ದೆ, ಅವರೂ ಸಹ‌ ಮೊದಲು ಅಧಿಕಾರ ವಹಿಸಿಕೊಳ್ಳುವಂತೆ ಹೇಳಿದ್ದಾರೆ. ನನ್ನ ಮನವಿಯನ್ನೂ ಅವರ ಗಮನಕ್ಕೂ ತಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

Source: newsfirstlive.com Source link